ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನವನ್ನು ತೆಕ್ಕೆಗೆ ಪಡೆದರೂ ತಾಲಿಬಾನ್ ಮುಖಂಡ ಹಿಬತ್ತುಲ್ಲಾ ಇನ್ನೂ ಅಜ್ಞಾತ ಸ್ಥಳದಲ್ಲಿರುವುದೇಕೆ?

|
Google Oneindia Kannada News

ಕಾಬೂಲ್, ಆಗಸ್ಟ್ 30: ಈಗಾಗಲೇ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದರೂ ಮುಖಂಡ ಹಿಬತುಲ್ಲಾ ಇನ್ನೂ ಅಜ್ಞಾತ ಸ್ಥಳದಲ್ಲಿರುವುದೇಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಅಡಗಿಕೊಂಡಿದ್ದ ಉಗ್ರ ಸಂಘಟನೆಯ ಹಲವು ನಾಯಕರು ಅಜ್ಞಾತವಾಸದಿಂದ ಹೊರಬರಲು ಆರಂಭಿಸಿದ್ದಾರೆ.

ತಾಲಿಬಾನ್ ನಾಯಕರು ಹಾಗೂ ಹೊಸ ಸರ್ಕಾರದಲ್ಲಿ ಅವರ ಪಾತ್ರ ತಾಲಿಬಾನ್ ನಾಯಕರು ಹಾಗೂ ಹೊಸ ಸರ್ಕಾರದಲ್ಲಿ ಅವರ ಪಾತ್ರ

ಆದರೆ ಪ್ರಮುಖವಾದ ತಾಲೀಬಾನ್‌ ಮುಖಂಡ ಹಿಬತುಲ್ಲಾ ಅಖುಂಡಜಾದ ಮಾತ್ರ ಇನ್ನೂ ಅಜ್ಞಾತ ಸ್ಥಳದಲ್ಲೇ ಉಳಿದಿದ್ದು ಉಗ್ರ ಸಂಘಟನೆಯ ವಕ್ತಾರರು ಆತ ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ.

Why Has Taliban Supreme Leader Akhundzada Not Surfaced?

ತಾನು ಅಧಿಕಾರ ವಹಿಸಿಕೊಂಡ ಬಳಿಕ ಬಂಡಾಯವನ್ನು ಶಮನಗೊಳಿಸುವುದರ ಜೊತೆಗೆ, ಅಧಿಕಾರಕ್ಕಾಗಿನ ಕಲಹದಿಂದ ಹರಿದು ಹಂಚಿಹೋಗಿದ್ದ ಜಿಹಾದಿ ಚಳುವಳಿಯಲ್ಲಿ ಒಗ್ಗಟ್ಟನ್ನು ತರುವುದಕ್ಕೂ ಈತ ಯತ್ನಿಸಿದ್ದ.

ತಾಲೀಬಾನ್ ಗೆ ಸಂಬಂಧಿಸಿದಂತೆ ಹಿಬತುಲ್ಲಾ ಅಖುಂಡಜಾದ ನ ದಿನ ನಿತ್ಯದ ಚಟುವಟಿಕೆಗಳು ಬಹುತೇಕ ಗೌಪ್ಯವಾಗಿಯೇ ಇರುತ್ತವೆ. ಸಾರ್ವಜನಿಕವಾಗಿ ಸಾಧ್ಯವಾದಷ್ಟೂ ದೂರ ಉಳಿಯುವ ಈ ವ್ಯಕ್ತಿ ಇಸ್ಲಾಮಿಕ್ ರಜೆ ದಿನಗಳಲ್ಲಿ ಮಾತ್ರ ಹೊರಬಂದು ಸಂದೇಶ ನೀಡುತ್ತಾನೆ.

ತಾಲಿಬಾನ್ ಈತನ ಫೋಟೋ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ ಈತ ಸಾರ್ವಜನಿಕವಾಗಿ ಎಂದಿಗೂ ಕಾಣಿಸಿಕೊಂಡಿಲ್ಲ. ತಾಲೀಬಾನ್ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಿತಾದರೂ ಅಖುಂಡಜಾದ ಬಗ್ಗೆ ಶೀಘ್ರವೇ ಆತನನ್ನು ನೋಡುತ್ತೀರಿ ಎಂದು ಹೇಳಲಾಗಿದೆ.

ತಾಲಿಬಾನ್ ನಾಯಕರು ಅಜ್ಞಾತ ಸ್ಥಳಗಳಲ್ಲೇ ಇರುವುದಕ್ಕೆ ಇಚ್ಛಿಸುವುದು ಹೊಸದಲ್ಲ. ನಟೋರಿಯಸ್ ಹಾಗೂ ತೀವ್ರಗಾಮಿಯಾಗಿದ್ದ ಉಗ್ರ ಮುಲ್ಲಾ ಮೊಹಮ್ಮದ್ ಈ ಹಿಂದೆ ಅಫ್ಘಾನಿಸ್ತಾನ 1990 ರಲ್ಲಿ ತಾಲಿಬಾನ್ ವಶದಲ್ಲಿದ್ದಾಗಲೂ ಆತ ಕಂದಹಾರ್ ನಲ್ಲೇ ತನ್ನ ಸುತ್ತ ಕಟ್ಟಿಕೊಂಡಿದ್ದ ಭದ್ರ ಕೋಟೆಯಿಂದ ಸ್ಹೊರಬರುತ್ತಿದ್ದದ್ದು ಅಪರೂಪವೇ. ಆದರೂ ಆತ ಹೇಳಿದ್ದೇ ಕಾನೂನಾಗಿರುತ್ತಿತ್ತು.

ಅಂತಾರಾಷ್ಟ್ರೀಯ ಬಿಕ್ಕಟ್ಟು ತಂಡದ ಏಷ್ಯಾ ಯೋಜನೆಯ ಮುಖ್ಯಸ್ಥರಾಗಿರುವ ಲಾರೆಲ್ ಮಿಲ್ಲರ್ ಹಿಬತ್-ಉಲ್ಲಾಹ್ ಅಖುಂಡಜಾದನ ಬಗ್ಗೆ ಮಾತನಾಡಿದ್ದು, ಈತನೂ ಓಮರ್ ನ ಶೈಲಿಯನ್ನೇ ಅಳವಡಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

ಇನ್ನು ರಹಸ್ಯ ಸ್ಥಳದಲ್ಲಿರುವುದಕ್ಕೆ ಮತ್ತೊಂದು ಕಾರಣ ಭಯ ಹಾಗೂ ಭದ್ರತೆಯೂ ಇರಬಹುದು. ಅಮೆರಿಕ ಡ್ರೋನ್ ದಾಳಿಯಲ್ಲಿ ಮುಲ್ಲಾಹ್ ಅಖ್ತರ್ ಮನ್ಸೂರ್ ಮಾದರಿಯಲ್ಲೇ ತನಗೂ ಅಪಾಯ ಉಂಟಾಗಬಹುದೆಂಬ ಕಾರಣಕ್ಕಾಗಿ ಈತನೂ ಅಜ್ಞಾತ ಸ್ಥಳದಲ್ಲಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ತಾನು ಇನ್ನೂ ಜೀವಂತ ಇದ್ದೇನೆ ಎಂಬುದನ್ನು ತಿಳಿಸುವುದಕ್ಕಾಗಿ ಘ್ರವೇ ಬಹಿರಂಗವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ತನ್ನ ಸಂಘಟನೆಯವರಿಂದ ಹೇಳಿಸುತ್ತಿರುವುದಕ್ಕೆ ಕಾರಣ ಇರಬಹುದು ಎನ್ನಲಾಗುತ್ತಿದೆ.

ಆದರೆ ಒಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ ವಾಪಸ್ ಮತ್ತೆ ಅಜ್ಞಾತ ಸ್ಥಳದಿಂದಲೇ ಓಮರ್ ಮಾದರಿಯಲ್ಲಿ ನಾಯಕತ್ವವನ್ನು ಮುನ್ನಡೆಸಬಹುದೆಂದೂ ವಿಶ್ಲೇಷಿಸಲಾಗುತ್ತಿದೆ.

ಹಿಬತುಲ್ಲಾ ಕಂದಹಾರ್ ನಲ್ಲಿದ್ದಾನೆ. ಪ್ರಾರಂಭದ ದಿನಗಳಿಂದಲೂ ಆತ ಅಲ್ಲಿಯೇ ಇದ್ದಾನೆ, ಶೀಘ್ರವೇ ಸಾರ್ವಜನಿಕವಾಗಿ ಪ್ರಕಟಗೊಳ್ಳಲಿದ್ದಾನೆ ಎಂದು ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ.

ತಾಲಿಬಾನ್ ಹಲವು ಉಗ್ರ ಸಂಘಟನೆಗಳ ಪ್ರತಿನಿಧಿಗಳಿರುವ ಒಂದು ಉಗ್ರರ ವ್ಯವಸ್ಥಿತ ಜಾಲ. ತಾಲಿಬಾನ್ ನ ಸಂಸ್ಥಾಪಕ ಮುಲ್ಲಾ ಓಮರ್ ನ ಸಾವಿನ ವಿಷಯ ಹಲವು ವರ್ಷಗಳ ನಂತರ ಬಹಿರಂಗಗೊಂಡಿದ್ದು ಹಾಗೂ ಈ ಹಿಂದೆ ನಾಯಕತ್ವ ವಹಿಸಿದ್ದ ಮುಲ್ಲಾ ಅಖ್ತರ್ ಮನ್ಸೂರ್ ಅಮೆರಿಕ ನಡೆಸಿದ ಡ್ರೋನ್ ಸ್ಟ್ರೈಕ್ ನಲ್ಲಿ ಸಾವನ್ನಪ್ಪಿದ್ದರ ಪರಿಣಾಮ 2016 ರಲ್ಲಿ ತಾಲೀಬಾನ್ ಚಳುವಳಿಯಲ್ಲಿ ಅಧಿಕಾರಕ್ಕಾಗಿ ಆಂತರಿಕ ಕಲ ಉಂಟಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಲೀಬಾನ್ ನೇತೃತ್ವ ವಹಿಸಿದ್ದು ಇದೇ ಹಿಬತುಲ್ಲಾ ಅಖುಂಡಜಾದ.

English summary
In the days since taking power in Afghanistan, a wide range of Taliban figures have entered Kabul -- hardened commandos, armed madrassa students and greying leaders back from years of exile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X