• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ

|

ಕೊರೊನಾ ಸೋಂಕು ಕೆಲವರ ಜೀವಕ್ಕೆ ಮಾತ್ರ ಏಕೆ ಅಪಾಯಕಾರಿ ಎಂಬ ಮಾಹಿತಿ ಇಲ್ಲಿದೆ.

ಕೆಲವರಿಗೆ ಮೊದಲಿನಿಂದಲೇ ಕೆಲವು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ, ಇನ್ನೂ ಕೆಲವರಿಗೆ ಏನೂ ಕಾಯಿಲೆ ಇಲ್ಲದಿದ್ದರೂ ಯಾಕೆ ಸಾವನ್ನಪ್ಪುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಾರ್ಚ್ ತಿಂಗಳಲ್ಲಿ ಒಂದೇ ಸಮಯಕ್ಕೆ ಇಬ್ಬರು ಸಹೋದರರಿಗೆ ಕೊರೊನಾ ತಗುಲಿತ್ತು, ಒಬ್ಬರಿಗೆ 29 ವರ್ಷ ಮತ್ತೊಬ್ಬರಿಗೆ 31 ವರ್ಷ ವಯಸ್ಸು.

ಮೊದಲ ಮೊದಲು ಆರೋಗ್ಯವಾಗಿಯೇ ಇದ್ದಂತೆ ಕಂಡರೂ ಓರ್ವನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ವೈದ್ಯರಿಗೆ ಆಶ್ಚರ್ಯವೇನೆಂದರೆ ಇಬ್ಬರಿಗೂ ಸಣ್ಣ ವಯಸ್ಸು, ಇಬ್ಬರಿಗೂ ಯಾವುದೇ ಕಾಯಿಲೆಗಳಿಲ್ಲ, ಕೆಲವು ದಿನಗಳಲ್ಲಿ ಅದರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದರು.

ಎರಡು ವಾರಗಳ ನಂತರ ಮತ್ತೆ ಇಬ್ಬರು ಸಹೋದರರು ಕೊರೊನಾ ಸೋಂಕಿಗೆ ತುತ್ತಾದರು. ಬಳಿಕ ವಿಜ್ಞಾನಿಗಳನ್ನು ಕರೆಸಲಾಯಿತು. ಈ ಎರಡು ಪ್ರಕರಣಗಳಿಂದ ತಿಳಿದುಬಂದಿದ್ದೇನೆಂದರೆ ವೈರಸ್ ವಿರುದ್ಧ ದೇಹದ ರಕ್ಷಣೆಯನ್ನು ಮಾಡುವ ಇಂಟರ್‌ಫೆರಾನ್ ಎಂಬ ವಸ್ತುವಿನ ಕೊರತೆ.

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

ಹಾಗಾಗಿ ಈ ಇಂಟರ್ಫೆರಾನ್ ದುರ್ಬಲಗೊಂಡಿರುವ ಕಾರಣ ಅನೇಕ ಕೊವಿಡ್ 19 ರೋಗಿಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಇದು ಸೈನ್ಸ್ ಜರ್ನಲ್‌ನಲ್ಲಿ ಗುರುವಾರ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ. ಈ ಇಂಟರ್ಫೆರಾನ್‌ ಇಲ್ಲದಿರುವ ರೋಗಿಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ವಿವರಿಸಲಾಗಿದೆ.

ಇಂಟರ್ಫೆರಾನ್ ಆರಂಭಿಕ ಹಂತದಲ್ಲಷ್ಟೇ ವೈರಸ್ ವಿರುದ್ಧ ಹೋರಾಡಬಹುದು.

ಕೊರೊನಾ ವೈರಸ್‌ನ ಬಹುದೊಡ್ಡ ಟ್ರಿಕ್ ಏನು?

ಕೊರೊನಾ ವೈರಸ್‌ನ ಬಹುದೊಡ್ಡ ಟ್ರಿಕ್ ಏನು?

ಈ ವೈರಸ್‌ಗೆ ಒಂದು ದೊಡ್ಡ ಟ್ರಿಕ್ ಇದೆ ಎಂದು ತೋರುತ್ತದೆ. ಕ್ಯಾಲಿಫೋರ್ನಿಯಾದ ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್ ಫಾರ್ ಇಮ್ಯುನೊಲಜಿಯ ಸಾಂಕ್ರಾಮಿಕ ರೋಗ ಮತ್ತು ಲಸಿಕೆ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಶೇನ್ ಕ್ರೊಟಿ ಹೇಳಿದ್ದಾರೆ. ಕೊರೊನಾ ವೈರಸ್ ದೀರ್ಘಾವಧಿಗೆ ಸಹಜ ರೋಗ ನಿರೋಧ ಪ್ರಕ್ರಿಯೆಯನ್ನು ತಡೆ ಹಿಡಿಯುವುದು, ಹಾಗೆಯೇ ಟೈಪ್ 1 ಇಂಟರ್ಫೆರಾನ್ ಪ್ರಕ್ರಿಯೆಯನ್ನು ತಪ್ಪಿಸುವುದು ದೊಡ್ಡ ಟ್ರಿಕ್ ಆಗಿದೆ.

ಚೇತರಿಸಿಕೊಂಡ ವ್ಯಕ್ತಿಯ ಪ್ಲಾಸ್ಮಾದಲ್ಲಿ ರೋಗನಿರೋಧಕ ಶಕ್ತಿ

ಚೇತರಿಸಿಕೊಂಡ ವ್ಯಕ್ತಿಯ ಪ್ಲಾಸ್ಮಾದಲ್ಲಿ ರೋಗನಿರೋಧಕ ಶಕ್ತಿ

ಚೇತರಿಸಿಕೊಂಡ ರೋಗಿಯ ರಕ್ತದಲ್ಲಿ ರೋಗ ನಿರೋಧ ಶಕ್ತಿ ಇರುತ್ತದೆ. ಇದನ್ನು ರೋಗಿಗೆ ನೀಡುವುದರಿಂದ ಇಂಟರ್ಪೆರಾನ್ ದುರ್ಬಲಗೊಳ್ಳುವುದನ್ನು ತಪ್ಪಿಸಬಹುದು.

ಇಂಟರ್ಫೆರಾನ್ ಎಂದರೆ ಏನು?

ಇಂಟರ್ಫೆರಾನ್ ಎಂದರೆ ಏನು?

ಕಶೇರುಕಗಳಲ್ಲಿ ಇನ್‍ಫ್ಲುಯೆಂಜಾ ಮುಂತಾದ ಸೋಂಕುಗಳು ಅಂಟಿದಾಗ ರೋಗಕಾರಣವಾದ ವೈರಸ್ ಬೆಳವಣಿಗೆಯನ್ನು ತಡೆಗಟ್ಟಲು ಪ್ರಾಣಿಗಳ ಕೋಶಗಳಲ್ಲಿ ಉತ್ಪನ್ನವಾಗುವ ಒಂದು ವಿಧದ ರಕ್ಷಣಾ ಪ್ರೋಟೀನ್. ಇಂಟರ್ಫೆರಾನ್ ತನ್ನ ಉತ್ಪತ್ತಿಗೆ ಕಾರಣವಾದ ಸೋಂಕು ಮಾತ್ರವಲ್ಲದೆ ಅನೇಕ ಇತರ ತರಹದ ಸೋಂಕುಗಳ ಬೆಳೆವಣಿಗೆಯನ್ನೂ ತಡೆಗಟ್ಟಬಲ್ಲುದು.

ಚಿಕಿತ್ಸೆಯ ಸೀಮಿತ ಪ್ರಯೋಜನ

ಚಿಕಿತ್ಸೆಯ ಸೀಮಿತ ಪ್ರಯೋಜನ

ಈ ಚಿಕಿತ್ಸೆಗಳು ಸೀಮಿತ ಪ್ರಯೋಜನವನ್ನು ನೀಡುತ್ತವೆ ಮತ್ತು ಸಾಮಾನ್ಯವಾಗಿ ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಬಳಸಲಾಗುತ್ತದೆ. ಇಂಟರ್ಫೆರಾನ್ ಕೆಲವು ಜನರಿಗೆ ಸಹಾಯ ಮಾಡುವ ಸಾಧ್ಯತೆಯಿದೆ. ಇದು ಸೋಂಕಿನ ಆರಂಭಿಕ ಹಂತಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತದೆ, ಮಾರಣಾಂತಿಕ ಉಸಿರಾಟದ ವೈಫಲ್ಯವನ್ನೂ ತಪ್ಪಿಸಬಹುದು.

English summary
When two brothers fell critically ill with COVID-19 around the same time in March, their doctors were baffled. Both were young -- 29 and 31 years old -- and healthy. Yet within days they couldn't breathe on their own and, tragically, one of them died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X