ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರ

By ಕಿಶೋರ್ ನಾರಾಯಣ್
|
Google Oneindia Kannada News

ಇದೇ ತಿಂಗಳ ಇಪ್ಪತ್ತೈದನೇ ತಾರೀಕು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಅನ್ನೋದು ನಿಮಗೆಲ್ಲ ಈಗಾಗಲೇ ಗೊತ್ತಾಗಿರಬಹುದು. ಇಂದಿನ ಲೇಖನದಲ್ಲಿ ಅಲ್ಲಿನ ಚುನಾವಣೆ ವ್ಯವಸ್ಥೆ ಮತ್ತಿತರ ಮಾಹಿತಿಗಳನ್ನು ನಿಮಗೆ ಕೊಡ್ತೇನೆ. ಪಕ್ಕದ ದೇಶ ಹಾಗೂ ಎಪ್ಪತ್ತು ವರ್ಷಗಳ ಹಿಂದೆ ಭಾರತವೇ ಆಗಿದ್ದ ಆ ದೇಶದ ಚುನಾವಣೆ ವ್ಯವಸ್ಥೆಯೂ ಇಲ್ಲಿ ಥರವೇ ಇದೆ.

ನಮಗೆ ಹೇಗೆ ಭಾರತ ಚುನಾವಣಾ ಆಯೋಗ ಅಂತಿದೆಯೋ ಹಾಗೆಯೇ ಪಾಕಿಸ್ತಾನ ಚುನಾವಣೆ ಆಯೋಗ ಇದೆ. ಅಲ್ಲೂ ಐದು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯುತ್ತದೆ. ಇಲ್ಲಿ ಚುನಾವಣೆ ಘೋಷಣೆ ಆದ ಮೇಲೂ ಚುನಾವಣೆ ಮುಗಿದು, ಮತ್ತೊಬ್ಬರು ಆ ಹುದ್ದೆಗೆ ಬರುವವರೆಗೆ ಯಾರು ಪ್ರಧಾನಿ ಆಗಿರ್ತಾರೋ ಅದೇ ವ್ಯಕ್ತಿ ಮುಂದುವರಿಯುತ್ತಾರೆ.

ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ

ಆದರೆ, ಪಾಕಿಸ್ತಾನದಲ್ಲಿ ಹಾಗಲ್ಲ. ಆಡಳಿತ ಹಾಗೂ ವಿರೋಧ ಪಕ್ಷ ಎರಡೂ ಒಪ್ಪಿದ ಮೂರನೇ ವ್ಯಕ್ತಿಯೊಬ್ಬರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಲಾಗುತ್ತದೆ. ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವ ತನಕ ಆ ವ್ಯಕ್ತಿ ಹಂಗಾಮಿ ಪ್ರಧಾನಿ ಆಗಿರುತ್ತಾರೆ. ಯಾರಿಗೆ ಆಡಳಿತದಲ್ಲಿ- ಸರಕಾರದಲ್ಲಿ ಅನುಭವ ಇರುತ್ತದೋ ಅಂಥವರನ್ನೇ ಆಯ್ಕೆ ಮಾಡಲಾಗುತ್ತದೆ.

ಹಂಗಾಮಿ ಪ್ರಧಾನಿ ನೇಮಕ

ಹಂಗಾಮಿ ಪ್ರಧಾನಿ ನೇಮಕ

ಏಕೆಂದರೆ, ಹಾಗೆ ನೇಮಕವಾದ ಹಂಗಾಮಿ ಪ್ರಧಾನಮಂತ್ರಿ ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷದ ಪರವಾಗಿ ಇರುವುದಿಲ್ಲ, ನ್ಯಾಯಸಮ್ಮತವಾದ ಚುನಾವಣೆ ನಡೆಸಬಹುದು ಅನ್ನೋದು ಅಲ್ಲಿನ ವ್ಯವಸ್ಥೆಯ ನಂಬಿಕೆ. ಇನ್ನು ಭಾರತದ ರೀತಿಯಲ್ಲೇ ಅಲ್ಲೂ ಮೇಲ್ಮನೆ ಹಾಗೂ ಕೆಳಮನೆ ಅಂತಿದೆ. ನಾವು ಲೋಕಸಭೆ ಹಾಗೂ ರಾಜ್ಯಸಭೆ ಅನ್ನುವ ರೀತಿಯಲ್ಲಿ ಅವರು ನ್ಯಾಷನಲ್ ಅಸೆಂಬ್ಲಿ ಹಾಗೂ ಸೆನೆಟ್ ಅಂತ ಹೇಳ್ತಾರೆ.

272 ಸ್ಥಾನಗಳಿಗೆ ಮಾತ್ರ ಚುನಾವಣೆ

272 ಸ್ಥಾನಗಳಿಗೆ ಮಾತ್ರ ಚುನಾವಣೆ

ಅಲ್ಲಿ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.

ಪಂಜಾಬ್ ಗೆದ್ದರೆ ಪಾಕಿಸ್ತಾನ ಗೆದ್ದಂತೆ

ಪಂಜಾಬ್ ಗೆದ್ದರೆ ಪಾಕಿಸ್ತಾನ ಗೆದ್ದಂತೆ

ಇಲ್ಲಿ ಸ್ಥಾನಗಳನ್ನು ಗಮನಿಸಿದರೆ ನಿಮಗೇ ಗೊತ್ತಾಗಿಬಿಡುತ್ತದೆ, ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ಸ್ಥಾನಗಳನ್ನು ಗೆದ್ದುಕೊಳ್ಳುವುದು ಎಷ್ಟು ಮುಖ್ಯ ಎಂಬ ಸಂಗತಿ. ಆದ್ದರಿಂದ ಒಂದು ಮಾತಿದೆ: ಪಂಜಾಬ್ ನಲ್ಲಿ ಗೆದ್ದವರು ಪಾಕಿಸ್ತಾನವನ್ನು ಗೆಲ್ಲುತ್ತಾರೆ. ಕಳೆದ ಚುನಾವಣೆ ವೇಳೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ನವಾಜ್ ಷರೀಫ್ ರ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್) ದೊಡ್ಡ ಮಟ್ಟದ ಗೆಲುವು ಸಾಧಿಸಿತು.

ಪ್ರಮುಖ ಪಕ್ಷಗಳು ಮೂರು, ನೇತೃತ್ವ ಇವರದು

ಪ್ರಮುಖ ಪಕ್ಷಗಳು ಮೂರು, ನೇತೃತ್ವ ಇವರದು

ಇನ್ನು ಪ್ರಮುಖ ಪಕ್ಷಗಳು ಯಾವುವು ಅಂತ ನೋಡಿದರೆ, ಸದ್ಯಕ್ಕೆ ನವಾಜ್ ಷರೀಫ್ ರ ಸೋದರ ಮುನ್ನಡೆಸುತ್ತಿರುವ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್), ಬೆನಜಿರ್ ಭುಟ್ಟೋ ಮಗ ಬಿಲಾವಲ್ ಭುಟ್ಟೋ ಮುನ್ನಡೆಸುತ್ತಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ- ಇನ್ಸಾಫ್ ಇದೆ.

English summary
Pakistan general elections on July 25th. How elections will happened in Pakistan? Here is the some basic information about election system, number of seats and major political parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X