ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಸೋಂಕಿನ 'ಎರಡನೇ ಅಲೆ' ಬಗ್ಗೆ WHO ನೀಡಿದ ವಾರ್ನಿಂಗ್ ಏನು?

|
Google Oneindia Kannada News

ಜೆನೆವಾ, ಮೇ 26: ವಿಶ್ವದಾದ್ಯಂತ ಇಲ್ಲಿಯವರೆಗೂ 55,90,517 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ಗೆ ಈವರೆಗೂ 3,47,916 ಮಂದಿ ಜೀವ ಕಳೆದುಕೊಂಡಿದ್ದಾರೆ. ಸದ್ಯ 53,166 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

Recommended Video

ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಏರುತ್ತಲೇ ಇದೆ. ಕೊರೊನಾ ವೈರಸ್ ಅಟ್ಟಹಾಸ ಅದ್ಯಾವಾಗ ನಿಲ್ಲುತ್ತೋ.. ಗೊತ್ತಿಲ್ಲ. ಆದರೆ, ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಮ್ಮಿಯಾಗುತ್ತಿದ್ದಂತೆಯೇ ಜನ ಮೈಮರೆಯುವಂತಿಲ್ಲ.

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

ಯಾವುದೇ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಾಗ ಕೋವಿಡ್-19 ರೋಗವನ್ನು ತಡೆಗಟ್ಟಲು ಅನುಸರಿಸುತ್ತಿದ್ದ ಕ್ರಮಗಳನ್ನು ನಿಲ್ಲಿಸುವಂತಿಲ್ಲ. ಒಂದ್ವೇಳೆ ನಿಲ್ಲಿಸಿದರೆ ''ಎರಡನೇ ಅಲೆಯ ಅಬ್ಬರ ಶುರುವಾಗಲಿದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆ ವಾರ್ನಿಂಗ್ ನೀಡಿದೆ.

ಎಚ್ಚರ ಎಚ್ಚರ...

ಎಚ್ಚರ ಎಚ್ಚರ...

''ಕೊರೊನಾ ವೈರಸ್ ಸೋಂಕಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿರುವ ದೇಶಗಳಲ್ಲಿ ಏಕಾಏಕಿ ಕೋವಿಡ್-19 ತಡೆಗಟ್ಟುವ ಕ್ರಮಗಳನ್ನು ಕೈಬಿಟ್ಟರೆ ''ಎರಡನೇ ಅಲೆ'' ಎದುರಿಸಬೇಕಾದೀತು'' ಎಂದು ಸೋಮವಾರ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಮೊದಲ ಅಲೆ

ಮೊದಲ ಅಲೆ

''ಇಡೀ ವಿಶ್ವದ ಸದ್ಯ ಕೋವಿಡ್-19 ಮೊದಲ ಅಲೆಯನ್ನು ಎದುರಿಸುತ್ತಿದೆ. ಹಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಕಮ್ಮಿಯಾಗಿರಬಹುದು. ಆದರೆ, ದಕ್ಷಿಣ ಅಮೇರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಕೊರೊನಾ ವೈರಸ್ ಇನ್ನೂ ಅಬ್ಬರಿಸುತ್ತಲೇ ಇದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸೀಸ್ ಚೀಫ್ Dr.Michael Ryan ತಿಳಿಸಿದ್ದಾರೆ.

ತಡೆಗಟ್ಟುವ ಕ್ರಮಗಳು ಪಾಲಿಸಲೇಬೇಕು.!

ತಡೆಗಟ್ಟುವ ಕ್ರಮಗಳು ಪಾಲಿಸಲೇಬೇಕು.!

''ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಅಲೆಗಳಲ್ಲಿ ಬರುತ್ತವೆ. ಅಂದ್ರೆ, ಮೊದಲ ಅಲೆ ಕಡಿಮೆಯಾದ ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಈ ವರ್ಷಾಂತ್ಯಕ್ಕೆ ಮತ್ತೆ ಕಾಣಿಸಿಕೊಳ್ಳಬಹುದು. ಕೋವಿಡ್-19 ತಡೆಗಟ್ಟುವ ಕ್ರಮಗಳನ್ನು ಪಾಲಿಸುವುದನ್ನು ಬಿಟ್ಟರೆ, ಸೋಂಕಿನ ಪ್ರಮಾಣ ಮತ್ತೆ ಏರಿಕೆಯಾಗಲಿದೆ'' ಅಂತಾರೆ Dr.Michael Ryan.

ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಅಟ್ಟಹಾಸ: ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದು!ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಅಟ್ಟಹಾಸ: ದಕ್ಷಿಣ ಅಮೇರಿಕಾ ಹೊಸ ಕೇಂದ್ರಬಿಂದು!

ಕಠಿಣ ಕ್ರಮಗಳನ್ನು ಮುಂದುವರೆಸಬೇಕಿತ್ತು

ಕಠಿಣ ಕ್ರಮಗಳನ್ನು ಮುಂದುವರೆಸಬೇಕಿತ್ತು

''ಕೋವಿಡ್-19 ತಡೆಗಟ್ಟಲು ಪಾಲಿಸಿದ ಕಠಿಣ ಕ್ರಮಗಳನ್ನು ಯೂರೋಪ್ ಮತ್ತು ಉತ್ತರ ಅಮೇರಿಕಾದ ದೇಶಗಳು ಮುಂದುವರೆಸಬೇಕು. ಆದರೆ, ಆರ್ಥಿಕತೆಯ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಯೂರೋಪ್ ಮತ್ತು ಉತ್ತರ ಅಮೇರಿಕಾ ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿವೆ. ಇದರಿಂದ ಸೋಂಕಿನ ಆತಂಕ ತಪ್ಪಿದ್ದಲ್ಲ'' ಅಂತ Dr.Michael Ryan ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉನ್ನತ ಹುದ್ದೆ ಅಲಂಕರಿಸಿದ ಡಾ.ಹರ್ಷವರ್ಧನ್!ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉನ್ನತ ಹುದ್ದೆ ಅಲಂಕರಿಸಿದ ಡಾ.ಹರ್ಷವರ್ಧನ್!

English summary
WHO warns of immediate second peak in the places where Covid 19 infections declining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X