ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಸಿಗುವ ವೇಳೆಗೆ 20 ಲಕ್ಷಕ್ಕೆ ಏರಲಿದೆ ಸಾವಿನ ಸಂಖ್ಯೆ: WHO ಎಚ್ಚರಿಕೆ

|
Google Oneindia Kannada News

ಜಿನೇವಾ, ಸೆಪ್ಟೆಂಬರ್ 26: ಪರಿಣಾಮಕಾರಿ ಲಸಿಕೆ ಜಗತ್ತನಾದ್ಯಂತ ಬಳಕೆಗೆ ಬರುವ ಮುನ್ನ ವಿಶ್ವದ ಕೊರೊನಾ ವೈರಸ್ ಸಾವಿನ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಕೆ ನೀಡಿದೆ. ಕಠಿಣ ಹಾಗೂ ತ್ವರಿತ ಅಂತಾರಾಷ್ಟ್ರೀಯ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ ಎಂದು ಡಬ್ಲ್ಯೂಎಚ್‌ಒದ ತುರ್ತುಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ಹೇಳಿದ್ದಾರೆ.

ಚೀನಾದಲ್ಲಿ ಸೋಂಕು ಹರಡಲು ಆರಂಭಿಸಿ ಒಂಬತ್ತು ತಿಂಗಳ ಬಳಿಕ ಕೋವಿಡ್ 19 ಸಾವಿನ ಸಂಖ್ಯೆ ಒಂದು ಮಿಲಿಯನ್ ಸಮೀಪಿಸಿದೆ. ನಾವು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಎರಡು ಮಿಲಿಯನ್ ಸಾವು ದಾಟುತ್ತೇವೆ. ಇದು ಕಲ್ಪನೆಯಲ್ಲ. ದುರದೃಷ್ಟವಶಾತ್ ವಾಸ್ತವ ಸಾಧ್ಯತೆ ಎಂದು ಅವರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಸಡಿಲಿಸಲಾಗಿದೆ. ಈಗ ಸೋಂಕು ವ್ಯಾಪಕವಾಗಿ ಹರಡಲು ಯುವಜನರು ಕಾರಣ ಎಂದು ಅವರ ಮೇಲೆ ಆಪಾದನೆ ಹೊರಿಸುವುದು ಸೂಕ್ತವಲ್ಲ. ಯುವಜನರ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ ಎಂದಿದ್ದಾರೆ.

WHO Warns Global Covid-19 Death Toll Could Hit 2 Million Before Vaccine Comes

ಲಾಕ್‌ಡೌನ್ ಜಾರಿಗೊಳಿಸುವುದನ್ನು ತಪ್ಪಿಸಲು ಹಾಗೂ ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಯಾವ ಕ್ರಮಗಳನ್ನು ಜಾರಿಗೆ ತರಬಹುದು ಎಂಬ ಬಗ್ಗೆ ಆಲೋಚಿಸುವಂತೆ ಅವರು ಸಲಹೆ ನೀಡಿದ್ದಾರೆ. ಪರೀಕ್ಷೆ, ಪತ್ತೆಹಚ್ಚುವಿಕೆ, ಕ್ವಾರೆಂಟೈನ್, ಪ್ರತ್ಯೇಕವಾಗಿ ಇರಿಸುವಿಕೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವಂತಹ ಪರ್ಯಾಯ ಕ್ರಿಯೆಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

Recommended Video

North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada

ಅಮೆರಿಕವೊಂದರಲ್ಲಿಯೇ ಸಾವಿನ ಸಂಖ್ಯೆ 2 ಲಕ್ಷ ದಾಟಿದೆ. ಭಾರತ ಕೂಡ ಒಂದು ಲಕ್ಷದ ಗಡಿಯಲ್ಲಿದೆ. ಕೊರೊನಾ ಸಂಬಂಧಿ ಸಾವಿನ ಸಂಖ್ಯೆ ಹತ್ತು ಲಕ್ಷದ ಸಮೀಪ ಸಾಗಿದೆ. ವೈರಸ್‌ಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಇನ್ನೂ ಸಾಕಷ್ಟು ಸಮಯ ತಗುಲಲಿದೆ. ಆ ವೇಳೆಗೆ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಅದನ್ನು ತಡೆಯಲು ಪರ್ಯಾಯ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಆರೋಗ್ಯ ಸಂಸ್ಥೆ ಹೇಳಿದೆ.

English summary
WHO has warned that global covid-19 death toll could cross 2 million before effective vaccine in wide use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X