ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHO

|
Google Oneindia Kannada News

ಜೆನೆವಾ, ಜುಲೈ 12: ಕೊರೊನಾ ಸೋಂಕಿನ ವಿರುದ್ಧ ವಿಶ್ವದಾದ್ಯಂತ ಹಲವು ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಇದರೊಂದಿಗೆ ಕೊರೊನಾ ರೂಪಾಂತರಗಳ ಸೃಷ್ಟಿಯೂ ಆಗುತ್ತಿದ್ದು, ಈ ರೂಪಾಂತರಗಳ ಮೇಲೆ ಸದ್ಯ ಅಭಿವೃದ್ಧಿಗೊಂಡಿರುವ ಲಸಿಕೆಗಳ ದಕ್ಷತೆ ಕುರಿತು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದಕ್ಕೆ ಕೆಲವು ತಜ್ಞರು, ಎರಡು ಕೊರೊನಾ ಲಸಿಕೆಗಳ ಸಂಯೋಜನೆಯ ಸಲಹೆಯನ್ನು ನೀಡಿದ್ದರು. ಎರಡು ಭಿನ್ನ ಲಸಿಕೆಗಳ ಸಂಯೋಜನೆ ದೇಹದಲ್ಲಿ ಪ್ರತಿಕಾಯವನ್ನು ಅಧಿಕ ಮಟ್ಟದಲ್ಲಿ ಸೃಷ್ಟಿಸುವ ಸಾಧ್ಯತೆ ಕುರಿತು ಚರ್ಚೆಗಳು ನಡೆದಿದ್ದವು. ಮೊದಲ ಡೋಸ್ ಒಂದು ಕಂಪನಿಯ ಲಸಿಕೆಯದ್ದಾದರೆ, ಮತ್ತೊಂದು ಕಂಪನಿಯ ಎರಡನೇ ಡೋಸ್ ಲಸಿಕೆ ಪಡೆದರೆ ಪ್ರತಿಕಾಯ ವೃದ್ಧಿಯಾಗುವ ಕುರಿತು ಸಲಹೆ ನೀಡಿದ್ದರು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಎಚ್ಚರಿಕೆ ರವಾನಿಸಿದೆ. ಮುಂದೆ ಓದಿ...

ಡೆಲ್ಟಾ ಸೋಂಕಿತ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು?ಡೆಲ್ಟಾ ಸೋಂಕಿತ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು?

"ಇದು ಅಪಾಯಕಾರಿ ಪ್ರವೃತ್ತಿ" ಎಂದ WHO

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಒಬ್ಬರಿಗೆ ಎರಡು ಭಿನ್ನ ಕಂಪನಿಗಳ ಲಸಿಕೆಗಳ ಬಳಕೆಯನ್ನು "ಅಪಾಯಕಾರಿ ಪ್ರವೃತ್ತಿ" ಎಂದು ಕರೆದಿದ್ದು, ಈ ಪ್ರಯೋಗದ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಆರೋಗ್ಯದ ಮೇಲೆ ಇದರ ಪರಿಣಾಮದ ಬಗ್ಗೆಯೂ ಸೂಕ್ತ ಅರಿವಿಲ್ಲ. ಹೀಗಾಗಿ ಈ ಪ್ರಯೋಗವನ್ನು ಮಾಡದೇ ಇರುವುದು ಒಳಿತು ಎಂದು ಹೇಳಿದೆ.

"ಲಸಿಕೆಗಳ ಸಂಯೋಜನೆ ಕುರಿತು ಸಾಕ್ಷ್ಯವಿಲ್ಲ"

ಎರಡು ಭಿನ್ನ ಕಂಪನಿಯ ಲಸಿಕೆಗಳ ಸಂಯೋಜನೆ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಸೌಮ್ಯಾ ಸ್ವಾಮಿನಾಥನ್, "ಭಿನ್ನ ಕಂಪನಿಗಳ ಕೊರೊನಾ ಲಸಿಕೆಗಳನ್ನು ಒಂದೇ ವ್ಯಕ್ತಿಗೆ ಬಳಸುವ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ, ಸಾಕ್ಷ್ಯಗಳು ದೊರೆತಿಲ್ಲ. ಹೀಗಾಗಿ ಅರಿವಿಲ್ಲದೇ ಲಸಿಕೆಗಳನ್ನು ಸಂಯೋಜಿಸಿ ಬಳಸಿದರೆ ಅಪಾಯ ಎದುರಾಗಬಹುದು" ಎಂದು ಎಚ್ಚರಿಕೆ ನೀಡಿದ್ದಾರೆ.

 ಲಸಿಕೆ ಸಂಯೋಜನೆ ಕುರಿತು ಏಮ್ಸ್‌ ನೀಡಿದ್ದ ಸಲಹೆ...

ಲಸಿಕೆ ಸಂಯೋಜನೆ ಕುರಿತು ಏಮ್ಸ್‌ ನೀಡಿದ್ದ ಸಲಹೆ...

ಎರಡು ಲಸಿಕೆಗಳ ಸಂಯೋಜನೆ, ರೂಪಾಂತರ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಈಚೆಗೆ ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅಭಿಪ್ರಾಯ ಪಟ್ಟಿದ್ದರು. "ಈಗ ಸೃಷ್ಟಿಯಾಗಿರುವ ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರಗಳ ವಿರುದ್ಧ ಎರಡು ಲಸಿಕೆಗಳ ಮಿಶ್ರಣ ಪರಿಣಾಮಕಾರಿ ಆಗಬಹುದು. ಆದರೆ ಅಂತಿಮ ಅನುಮೋದನೆ ನೀಡುವ ಮುನ್ನ ಇನ್ನಷ್ಟು ಮಾಹಿತಿಯ ಅವಶ್ಯಕತೆಯಿದೆ" ಎಂದಿದ್ದರು. "ರೂಪಾಂತರದ ವಿರುದ್ಧ ಹೋರಾಡಲು ಎರಡು ಲಸಿಕೆಗಳ ಮಿಶ್ರಣ ಪರ್ಯಾಯ ಆಯ್ಕೆಯಾಗಬಹುದು ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ. ಆದರೆ ಪರಿಣಾಮಕಾರಿ ಫಲಿತಾಂಶ ಪಡೆಯಲು ಯಾವ ಎರಡು ಲಸಿಕೆಗಳನ್ನು ಬಳಸಬೇಕಿದೆ ಎಂಬುದರ ಕುರಿತು ಅಧ್ಯಯನ ನಡೆಯಬೇಕಿದೆ" ಎಂದು ತಿಳಿಸಿದ್ದರು.

Recommended Video

ದಲೈಲಾಮಾ ಹುಟ್ಟುಹಬ್ಬದ ಆಚರಣೆಗೆ ಕಿರಿ ಕಿರಿ ಮಾಡಿದ ಚೀನಾ! | Oneindia Kannada
 ಭಿನ್ನ ಲಸಿಕೆಗಳ ಬಳಕೆ ಕುರಿತು ಉಲ್ಲೇಖಿಸಿದ್ದ ಅಧ್ಯಯನ

ಭಿನ್ನ ಲಸಿಕೆಗಳ ಬಳಕೆ ಕುರಿತು ಉಲ್ಲೇಖಿಸಿದ್ದ ಅಧ್ಯಯನ

ಈಚೆಗೆ ಪಶ್ಚಿಮ ಜರ್ಮನಿಯ ಸಾರ್ಲ್ಯಾಂಡ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಎರಡು ಭಿನ್ನ ಲಸಿಕೆಗಳ ಬಳಕೆ ಕುರಿತು ಉಲ್ಲೇಖಿಸಲಾಗಿತ್ತು. ಆಸ್ಟ್ರಾಜೆನಿಕಾದ ಮೊದಲ ಡೋಸ್ ಹಾಗೂ ಬಯೋ-ಎನ್-ಟೆಕ್ ಮತ್ತು ಫೈಜರ್ ಕಂಪನಿಯ ಎರಡನೇ ಡೋಸ್ ಲಸಿಕೆ ಪಡೆದವರಲ್ಲಿ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. ಒಂದು ಕಂಪನಿ ಎರಡು ಡೋಸ್ ಲಸಿಕೆ ಪಡೆದವರಿಗಿಂತ ಎರಡು ಕಂಪನಿಗಳ ಲಸಿಕೆಯನ್ನು ಪಡೆದವರಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ತಿಳಿದುಬಂದಿದೆ. ಹೀಗಾಗಿ ಇಂದು ಪ್ರತಿಕಾಯಗಳನ್ನು ವೃದ್ಧಿಸುವ ಉದ್ದೇಶದಿಂದ ಎಲ್ಲರಿಗೂ ಲಸಿಕೆಯನ್ನು ಹೊಂದಿಸಿ ಮಿಶ್ರಣ ಮಾಡಬೇಕಾಗಬಹುದು ಎಂದು ತಿಳಿಸಿತ್ತು. ಅಧ್ಯಯನ ಪ್ರಾಥಮಿಕ ಫಲಿತಾಂಶವಷ್ಟೇ ಎಂದು ಕೂಡ ಉಲ್ಲೇಖಿಸಿತ್ತು.

English summary
World Health Organization's chief scientist on Monday advised against people mixing and matching COVID-19 vaccines from different manufacturers, calling it a "dangerous trend",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X