• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

|

ಜೆನೆವಾ, ಮೇ 26: ಮಹಾಮಾರಿ ಕೋವಿಡ್-19 ಗೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ವಿಶ್ವದಾದ್ಯಂತ ವಿಜ್ಞಾನಿಗಳು, ಸಂಶೋಧಕರು ಹಗಲಿರುಳು ಶ್ರಮ ಪಡುತ್ತಿದ್ದಾರೆ. ಅಂಥದ್ರಲ್ಲಿ, ಕೋವಿಡ್-19 ರೋಗಕ್ಕೆ ಚಿಕಿತ್ಸೆಯಾಗಿ HCQ ಅರ್ಥಾತ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಬಳಕೆ ಮಾಡಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತೇಜನ ನೀಡಿದ್ದರು.

   ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

   ಸಾಲದಕ್ಕೆ ಮಲೇರಿಯಾ ನಿರೋಧಕ ಔಷಧಿ ''ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಎರಡು ವಾರಗಳ ಕಾಲ ಸೇವಿಸಿದ್ದೇನೆ'' ಎಂದು ಮಾಧ್ಯಮಗಳ ಮುಂದೆ ಎದೆತಟ್ಟಿಕೊಂಡು ಹೇಳಿದ್ದರು.

   HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

   Anti-malarial ಡ್ರಗ್ ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಡೊನಾಲ್ಡ್ ಟ್ರಂಪ್ ಏನೇ ಹೇಳಬಹುದು. ಆದರೆ, ತಕ್ಷಣಕ್ಕೆ ಕೋವಿಡ್-19 ರೋಗಕ್ಕೆ ಚಿಕಿತ್ಸೆಯಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದೆ.

   ಕೋವಿಡ್-19 ರೋಗಕ್ಕೆ ಚಿಕಿತ್ಸೆಯಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರತದಲ್ಲಿಯೂ ನೀಡಲಾಗುತ್ತಿತ್ತು. ಆದ್ರೀಗ, ಆ ಮಾತ್ರೆಗಳನ್ನು ಸೋಂಕಿತರಿಗೆ ನೀಡದಂತೆ WHO ವಾರ್ನಿಂಗ್ ಕೊಟ್ಟಿದೆ.

   ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದವರ ಪೈಕಿ ಹೆಚ್ಚು ಮಂದಿ ಸಾವು

   ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದವರ ಪೈಕಿ ಹೆಚ್ಚು ಮಂದಿ ಸಾವು

   ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಬ್ಬರದ ಪ್ರಚಾರ ನೀಡುತ್ತಿರುವ ಮಲೇರಿಯಾ ರೋಗ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸೇವಿಸಿದವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಉಲ್ಬಣವಾಗಿರುವುದು ಕಂಡುಬಂದಿದೆ. ಜೊತೆಗೆ ಸಾವಿನ ಪ್ರಮಾಣ ಕೂಡ ಅಧಿಕವಿರುವುದು 'ದಿ ಲ್ಯಾನ್ಸೆಟ್' ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ತಿಳಿದುಬಂದಿತ್ತು. ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ನೀಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

   ಪ್ರಯೋಗಗಳಿಗೆ ಬ್ರೇಕ್

   ಪ್ರಯೋಗಗಳಿಗೆ ಬ್ರೇಕ್

   ''ಮಲೇರಿಯಾ ಮತ್ತು ಆಟೋ ಇಮ್ಯೂನ್ ಡಿಸೀಸನ್ ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೋಕ್ವಿನ್ ಡ್ರಗ್ ಗಳನ್ನು ನೀಡಲಾಗುತ್ತದೆ. ಕೋವಿಡ್-19 ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿಯೇ ಎಂಬುದನ್ನು ತಿಳಿದುಕೊಳ್ಳಲು ಪ್ರಯೋಗ ಮಾಡಲಾಗುತ್ತಿತ್ತು. ಆದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕುರಿತಾದ ಎಲ್ಲಾ ಪ್ರಯೋಗಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್-ಜನರಲ್ ಟೆಡ್ರೋಸ್ ಅಧನೋಮ್ ಗೆಬ್ರಿಯೆಸಸ್ ತಿಳಿಸಿದ್ದಾರೆ.

   ಕೊರೊನಾ ಕದನದ ನಡುವೆ 2ನೇ ವಿಶ್ವಯುದ್ಧದ ಲಸಿಕೆ ಟ್ರೆಂಡ್

   ಕೆಲ ಅಧ್ಯಯನಗಳೇ ಆಧಾರ

   ಕೆಲ ಅಧ್ಯಯನಗಳೇ ಆಧಾರ

   ''ಕೆಲವು ಅಧ್ಯಯನಗಳ ಇತ್ತೀಚಿನ ಫಲಿತಾಂಶಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಯೋಗಗಳಲ್ಲಿ ಸುರಕ್ಷಿತವಾಗಿ ಮುಂದುವರೆಯಲು ನಾವು ಸಾಕಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸೀಸ್ ಚೀಫ್ Dr.Michael Ryan ಹೇಳಿದ್ದಾರೆ.

   ಕೊರೊನಾ ಭಯ: ಡೊನಾಲ್ಡ್‌ ಟ್ರಂಪ್ ಈ ಮಾತ್ರೆಯನ್ನು ಪ್ರತಿ ದಿನ ಸೇವಿಸ್ತಿದ್ರು

   ಟ್ರಂಪ್ ಆಡಳಿತ ಕೂಡ ಅದನ್ನೇ ಹೇಳಿತ್ತು.!

   ಟ್ರಂಪ್ ಆಡಳಿತ ಕೂಡ ಅದನ್ನೇ ಹೇಳಿತ್ತು.!

   ಅಸಲಿಗೆ, ''ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಡೆಡ್ಲಿ ಸೈಡ್ ಎಫೆಕ್ಟ್ಸ್ ಇದೆ. ಹೀಗಾಗಿ ಕೋವಿಡ್-19 ಚಿಕಿತ್ಸೆಗಾಗಿ ಅದನ್ನು ನೀಡಬಾರದು'' ಎಂದು ಟ್ರಂಪ್ ಆಡಳಿತ ಮತ್ತು ಯು.ಎಸ್ ಫುಡ್ ಅಂಡ್ ಅಡ್ಮಿನಿಸ್ಟ್ರೇಷನ್ ವಾರ್ನ್ ಮಾಡಿತ್ತು. ಹೀಗಿದ್ದರೂ, ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದರೂ ''ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸೇವಿಸುತ್ತಿದ್ದೇನೆ'' ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.

   English summary
   WHO to pause trail of Hydroxychloroquine for the treatment of Covid-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more