ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಾರದಿರಲು ಏನೇನು ಮಾಡಬೇಕು, ಏಕೆ?: WHO ನೀಡಿದ 7 ಟಿಪ್ಸ್

|
Google Oneindia Kannada News

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹಾಗೆಯೇ ಉಳಿದಿದೆ. ಅದರ ಬಗ್ಗೆ ಅನೇಕ ಕಡೆ ಮಾಹಿತಿ ಸಿಕ್ಕರು, ಯಾವುದನ್ನು ನಂಬುದು, ಯಾವುದನ್ನು ಬಿಡುವುದು ಎನ್ನುವ ಪ್ರಶ್ನೆ ಜನರಿಗೆ ಕಾಡಿದೆ. ಈ ಗೊಂದಲಗಳನ್ನು WHO (ವಿಶ್ವ ಆರೋಗ್ಯ ಸಂಸ್ಥೆ) ನಿವಾರಿಸಿದೆ.

* ಆಗಾಗ ಸೋಪ್ ಹಾಗೂ ನೀರಿನಿಂದ ಕೈ ತೊಳೆಯಬೇಕು

* ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟಬಾರದು

* ಮಾಸ್ಕ್ ಧರಿಸುವುದು ಒಳ್ಳೆಯದು

* ಜನ ದಟ್ಟಣೆ ಇರುವ ಕಡೆ ಹೆಚ್ಚು ಹೋಗಬಾರದು

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

* ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ಮನೆಯಲ್ಲಿಯೇ ಇರಬೇಕು

* ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ, ವೈದ್ಯರ ಬಳಿ ಹೋಗಬೇಕು

ಹೀಗೆ,, ಕೊರೊನಾ ವೈರಸ್ ಹರಡದೆ ಇರುವ ಹಾಗೆ WHO ಈಗಾಗಲೇ ಮುಂಜಾಗ್ರತೆ ಕ್ರಮಗಳನ್ನು ಹಂಚಿಕೊಂಡಿದೆ. ಅದರೊಂದಿಗೆ, ಏಕೆ ಈ ಕ್ರಮಗಳನ್ನು ಅನುಸರಿಬೇಕು. ಅದರ ಅನುಕೂಲಗಳು ಏನು ಎನ್ನುವುದನ್ನು ಸಂಪೂರ್ಣವಾಗಿ ತಿಳಿಸಿದೆ.

ಸೋಪ್ ಹಾಗೂ ನೀರಿನಿಂದ ಕೈ ಏಕೆ ತೊಳೆಯಬೇಕು?

ಸೋಪ್ ಹಾಗೂ ನೀರಿನಿಂದ ಕೈ ಏಕೆ ತೊಳೆಯಬೇಕು?

ಕಲುಷಿತವಾಗಬಹುದಾದ ವಸ್ತುಗಳನ್ನು ಮುಟ್ಟಲು ನಾವು ನಮ್ಮ ಕೈಗಳನ್ನು ಬಳಸುತ್ತೇವೆ. ಅರಿವಿಲ್ಲದೆ ನಮ್ಮ ಮುಖಗಳನ್ನು ಸ್ಪರ್ಶಿಸುತ್ತೇವೆ. ಹೀಗೆ, ವೈರಸ್‌ಗಳನ್ನು ನಮ್ಮ ಕಣ್ಣು, ಮೂಗು ಮತ್ತು ಬಾಯಿಗೆ ವರ್ಗಾಯಿಸುತ್ತೇವೆ. ಅಲ್ಲಿ ಸೋಂಕು ತಗುಲುತ್ತದೆ. ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯುವುದು ವೈರಸ್‌ಗಳನ್ನು ಕೊಲ್ಲುತ್ತದೆ.

ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಏಕೆ ಮುಟ್ಟಬಾರದು?

ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಏಕೆ ಮುಟ್ಟಬಾರದು?

ವಸ್ತುಗಳನ್ನು ಮುಟ್ಟಿದಾಗ ವೈರಸ್‌ ಕೈಗಳಿಗೆ ಸೇರಬಹುದು. ಹೀಗೆ ಕೈನಲ್ಲಿ ವೈರಸ್ ಸೇರಿದಾಗ ನಂತರ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ, ವೈರಸ್ ಅಲ್ಲಿಗೂ ಸೇರುತ್ತದೆ. ನಂತರ ದೇಹವನ್ನು ಪ್ರವೇಶಿಸಿ ನಿಮ್ಮನ್ನು ರೋಗಿಗಳನ್ನಾಗಿ ಮಾಡಬಹುದು.

ಕೊರೊನಾ ಕರಿನೆರಳು: ಎಚ್ಚರ ತಪ್ಪಿದ್ರೆ ಬೆಂಗಳೂರಿಗೆ ಅಪಾಯ ಕಟ್ಟಿಟ್ಟಬುತ್ತಿ!ಕೊರೊನಾ ಕರಿನೆರಳು: ಎಚ್ಚರ ತಪ್ಪಿದ್ರೆ ಬೆಂಗಳೂರಿಗೆ ಅಪಾಯ ಕಟ್ಟಿಟ್ಟಬುತ್ತಿ!

ಮಾಸ್ಕ್ ಧರಿಸುವುದು ಏಕೆ ಒಳ್ಳೆಯದು?

ಮಾಸ್ಕ್ ಧರಿಸುವುದು ಏಕೆ ಒಳ್ಳೆಯದು?

ನಿಮ್ಮ ಕೆಮ್ಮು ಅಥವಾ ಸೀನುವಿಕೆಯನ್ನು ಮುಚ್ಚುವ ಮೂಲಕ ನೀವು ವೈರಸ್‌ಗಳು ಹಾಗೂ ಇತರ ರೋಗಾಣುಗಳನ್ನು ಬೇರೆಯವರಿಗೆ ಹರಡುವುದನ್ನು ತಪ್ಪಿಸಬಹುದು. ನಿಮ್ಮ ಕೆಮ್ಮು ಅಥವಾ ಸೀನುವನ್ನು ಮುಚ್ಚಲು ನಿಮ್ಮ ಕೈಗಳನ್ನು ಬಳಸದೆ, ವೈರಸ್ ನಿಮ್ಮ ಕೈಗಳಿಗೆ ವರ್ಗಾಯಿಸುವುದನ್ನು ನೀವು ತಪ್ಪಿಸುತ್ತೀರಿ.

ಏಕೆ ಜನ ದಟ್ಟಣೆ ಇರುವ ಕಡೆ ಹೆಚ್ಚು ಹೋಗಬಾರದು?

ಏಕೆ ಜನ ದಟ್ಟಣೆ ಇರುವ ಕಡೆ ಹೆಚ್ಚು ಹೋಗಬಾರದು?

ಕೊರೊನಾ ವೈರಸ್ ಹರಡದೆ ಇರಲು ಇತರ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ದೂರ ಇರಬೇಕಾಗುತ್ತದೆ. COVID-19 ಮುಖ್ಯವಾಗಿ ಉಸಿರಾಟದ ಹನಿಗಳಿಂದ ಹರಡುತ್ತದೆ. ಅದು ರೋಗವನ್ನು ಕೆಮ್ಮಿದಾಗ ಬಾಯಿ ಅಥವಾ ಮೂಗಿನಿಂದ ಹೊರಬರುತ್ತದೆ. ಜನ ದಟ್ಟನೆಯ ಸ್ಥಳಗಳನ್ನು ತಪ್ಪಿಸಿದರೆ, COVID-19 ಅಥವಾ ಇನ್ನಾವುದೇ ಉಸಿರಾಟದ ಕಾಯಿಲೆಯಿಂದ ಪಾರಾಗಬಹುದು.

ಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ

ಜ್ವರ, ಶೀತ, ಕೆಮ್ಮು ಬಂದರೆ ಮನೆಯಲ್ಲಿಯೇ ಇರಬೇಕು ಏಕೆ?

ಜ್ವರ, ಶೀತ, ಕೆಮ್ಮು ಬಂದರೆ ಮನೆಯಲ್ಲಿಯೇ ಇರಬೇಕು ಏಕೆ?

ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ಮನೆಯಲ್ಲಿಯೇ ಇರುವುದು ಒಳ್ಳೆಯದು. ಕೆಲಸಕ್ಕೆ ಅಥವಾ ಇತರ ಸ್ಥಳಗಳಿಗೆ ಹೋಗದೆ, ಮನೆಯಲ್ಲಿಯೇ ಇದ್ದರೆ, ವೇಗವಾಗಿ ಚೇತರಿಸಿಕೊಳ್ಳುತ್ತೀರಿ ಮತ್ತು ಇತರ ಜನರಿಗೆ ರೋಗಗಳನ್ನು ಹರಡುವುದನ್ನು ತಪ್ಪಿಸುತ್ತೀರಿ.

ತಕ್ಷಣದ ವೈದ್ಯರ ಸಂಪರ್ಕ ಏಕೆ ಮುಖ್ಯ?

ತಕ್ಷಣದ ವೈದ್ಯರ ಸಂಪರ್ಕ ಏಕೆ ಮುಖ್ಯ?

ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ಮೊದಲು ಆಸ್ಪತ್ರೆಗೆ ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ. ನಿಮಗೆ ಸಾಧ್ಯವಾದರೆ, ಮೊದಲು ನಿಮ್ಮ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.ಆಗ ಮಾತ್ರ ನಿಮ್ಮ ಆರೋಗ್ಯ ಸ್ಥಿತಿಯ ಸರಿಯಾದ ಮಾಹಿತಿ ಸಿಗುತ್ತದೆ.

ಕೊರೊನಾ ಬಗ್ಗೆ ಎಲ್ಲ ಸುದ್ದಿಗಳನ್ನು ನಂಬಬಾರದು ಏಕೆ?

ಕೊರೊನಾ ಬಗ್ಗೆ ಎಲ್ಲ ಸುದ್ದಿಗಳನ್ನು ನಂಬಬಾರದು ಏಕೆ?

ಕೊರೊನಾ ಬಗ್ಗೆ ಗಾಳಿ ಸುದ್ದಿಗಳನ್ನು ನಂಬಬೇಡಿ. ನಿಮ್ಮ ಪ್ರದೇಶದಲ್ಲಿ COVID-19 ಹರಡುತ್ತಿದೆಯೇ ಎಂಬ ಬಗ್ಗೆ ಸ್ಥಳೀಯ ಮತ್ತು ರಾಷ್ಟ್ರೀಯ ಅಧಿಕಾರಿಗಳು ಹೆಚ್ಚು ಮಾಹಿತಿಯನ್ನು ಹೊಂದಿರುತ್ತಾರೆ. ಆಯಾ ಪ್ರದೇಶದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ಸಲಹೆ ನೀಡಲು ಅವರನ್ನು ಇರಿಸಲಾಗಿದೆ.

English summary
Coronavirus: World Health Organization give simple steps to protect yourself from Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X