ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರು

|
Google Oneindia Kannada News

ವುಹಾನ್, ಜನವರಿ 30: ವರ್ಷಕ್ಕೂ ಹಿಂದೆ ಮೊದಲ ಕೊರೊನಾ ಸೋಂಕು ಪತ್ತೆಯಾದ ಚೀನಾದ ವುಹಾನ್ ಗೆ ಜನವರಿ 14ರಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಭೇಟಿ ನೀಡಿದ್ದು, ಹದಿನಾಲ್ಕು ದಿನಗಳ ಕ್ವಾರಂಟೈನ್ ನಂತರ ಶುಕ್ರವಾರದಿಂದ ನಗರದಲ್ಲಿ ಪರಿಶೀಲನೆ ಆರಂಭಿಸಿದೆ.

ಕೊರೊನಾ ಸೋಂಕಿನ ಮೂಲ ಪತ್ತೆಗಾಗಿ ಆರೋಗ್ಯ ಸಂಸ್ಥೆಯ 10 ಅಂತಾರಾಷ್ಟ್ರೀಯ ತಜ್ಞರ ತಂಡ ಭೇಟಿ ನೀಡಿದ್ದು, ಶುಕ್ರವಾರ ಹೋಟೆಲ್ ನಲ್ಲಿ ಚೀನಾ ಅಧಿಕಾರಿಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರು ಮೊದಲ ಬಾರಿ ಮುಖಾಮುಖಿ ಭೇಟಿಯಾಗಿದ್ದಾರೆ.

 ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾದ ವುಹಾನ್‌ಗೆ ಆಗಮಿಸಿದ WHO ತಜ್ಞರ ತಂಡ ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾದ ವುಹಾನ್‌ಗೆ ಆಗಮಿಸಿದ WHO ತಜ್ಞರ ತಂಡ

2019ರ ಡಿ.27ರಂದು ವುಹಾನ್ ನಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಸೋಂಕು ಪತ್ತೆಯಾದ ಡಾ. ಝಾಂಗ್ ಜಿಕ್ಸಿಯನ್ ಅವರಿಗೆ ವುಹಾನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ಆ ಆಸ್ಪತ್ರೆಗೆ ತಜ್ಞರು ಭೇಟಿ ನೀಡಲಿದ್ದಾರೆ. ಜೊತೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾದವರನ್ನು ಹಾಗೂ ಅಲ್ಲಿನ ಮಾರುಕಟ್ಟೆಗಳನ್ನು ಪರಿಶೀಲನೆ ಮಾಡಲಿರುವುರು ಎಂದು ತಿಳಿದುಬಂದಿದೆ.

WHO Team Starts Investigation In Chinas Wuhan City

ಈ ಸೋಂಕಿನ ಮೂಲದ ಪತ್ತೆ ಹಚ್ಚಲು ವರ್ಷಗಟ್ಟಲೆ ಹಿಡಿಯಬಹುದು. ಪ್ರಾಣಿಗಳಿಂದ ಈ ಸೋಂಕು ಬಂದಿದೆ ಎಂದು ಹೇಳುತ್ತಿರುವುದರಿಂದ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸಿ ವಂಶವಾಹಿ ಪರಿಶೀಲನೆ ನಡೆಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೀಗ ತಜ್ಞರ ಚಿತ್ತ, ನಗರದಲ್ಲಿನ ರೋಗ ಸೂಕ್ಷ್ಮಾಣು ವೈಜ್ಞಾನಿಕ ಅಧ್ಯಯನ ಕೇಂದ್ರದ ಮೇಲೆ ನೆಟ್ಟಿದೆ. ಅಲ್ಲಿಂದಲೇ ಸೋಂಕು ಆರಂಭವಾಗಿದ್ದು ಎಂಬ ಕೆಲ ಆರೋಪಗಳು ಈ ಹಿಂದೆ ಕೇಳಿಬಂದಿದ್ದು, ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಯತ್ನದಲ್ಲಿ ತಜ್ಞರಿದ್ದಾರೆ.

ಚೀನಾದಲ್ಲಿ ಸೋಂಕು ಪತ್ತೆಯಾದಾಗಿನಿಂದ ಇದುವರೆಗೂ 4,600 ಮಂದಿ ಮೃತಪಟ್ಟಿದ್ದಾರೆ.

English summary
A WHO team Friday visited a hospital in Wuhan where China says the first coronavirus patients were treated more than a year ago,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X