ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾದ ವುಹಾನ್‌ಗೆ ಆಗಮಿಸಿದ WHO ತಜ್ಞರ ತಂಡ

|
Google Oneindia Kannada News

ವುಹಾನ್, ಜನವರಿ 14: ವಿಶ್ವವನ್ನೇ ನಲುಗಿಸಿಬಿಟ್ಟ ಕೊರೊನಾವೈರಸ್ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ಕೋಟ್ಯಾಂತರ ಜನರನ್ನು ಬೀದಿಗೆ ತಂದಿತು. ನೂರಾರು ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿತು. ಇಂತಹ ಕೊರೊನಾವೈರಸ್ ಮೊದಲು ಪತ್ತೆಯಾದ ಚೀನಾದ ವುಹಾನ್‌ಗೆ ಇಂದು ಗುರುವಾರ ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರ ತಂಡ ಆಗಮಿಸಿದೆ.

ರಾಯಿಟರ್ಸ್ ಮೂಲಗಳ ಪ್ರಕಾರ ಡಬ್ಲ್ಯೂಹೆಚ್‌ಒ ಸಂಸ್ಥೆಯ 10 ಅಂತಾರಾಷ್ಟ್ರೀಯ ತಜ್ಞರ ತಂಡವು ಚೀನಾದ ವುಹಾನ್‌ಗೆ ಆಗಮಿಸಿದ್ದು, ಕೋವಿಡ್-19 ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸಲಿದೆ. ಕೊರೊನಾವೈರಸ್ ಸೃಷ್ಟಿಗೆ ಕಾರಣ ಏನು? ಎಲ್ಲಿಂದ ಬಂತು ಎಂದು ತಿಳಿದುಕೊಳ್ಳುವುದು ಈ ತಜ್ಞರ ತಂಡದ ಗುರಿಯಾಗಿದೆ.

ಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆಕೊವಿಡ್ ಲಸಿಕೆ ಅಭಿಯಾನ: ಮೊದಲ ದಿನ 3 ಲಕ್ಷ ಕಾರ್ಯಕರ್ತರಿಗೆ ಲಸಿಕೆ

ವೈರಸ್‌ನ ಮೂಲ ಪತ್ತೆ ಹಚ್ಚಲು ಎಷ್ಟು ಸಮಯ ಬೇಕಾಗುತ್ತದೆ?

ವೈರಸ್‌ನ ಮೂಲ ಪತ್ತೆ ಹಚ್ಚಲು ಎಷ್ಟು ಸಮಯ ಬೇಕಾಗುತ್ತದೆ?

ವಿಶ್ವ ಆರೋಗ್ಯ ಸಂಸ್ಥೆಯ ತಂಡವು ವುಹಾನ್‌ಗೆ ಭೇಟಿ ನೀಡಿದ್ದಾಗಿದೆ. ಆದರೆ ವೈರಸ್‌ನ ಮೂಲವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗಬಹುದು ಮತ್ತು ಅನಿಶ್ಚಿತ ಫಲಿತಾಂಶ ನಿರೀಕ್ಷಿಸಬಹುದು ಎಂಬುದು ಚೀನಾ ಮತ್ತು ಇತರ ದೇಶಗಳ ಆರೋಗ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಕೊರೊನಾವೈರಸ್ ಮೂಲ ವುಹಾನ್ ಎಂದು ಸ್ಥಳೀಯರು ಒಪ್ಪಿಕೊಳ್ಳುವುದಿಲ್ಲ!

ಕೊರೊನಾವೈರಸ್ ಮೂಲ ವುಹಾನ್ ಎಂದು ಸ್ಥಳೀಯರು ಒಪ್ಪಿಕೊಳ್ಳುವುದಿಲ್ಲ!

ಹೌದು, ವಿಶ್ವವನ್ನೇ ನುಂಗಿ ಹಾಕಿದ ಮಹಾಮಾರಿ ಕೊರೊನಾವೈರಸ್‌ನ ಕೇಂದ್ರ ಬಿಂದು ವುಹಾನ್ ಎಂಬುದನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ಇಂದಿಗೂ ಸಹ ಒಪ್ಪಿಕೊಳ್ಳಲು ಸಿದ್ದರಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಈ ಕುರಿತು ಪ್ರಶ್ನಿಸಿದಾಗ ವೈರಸ್ ಅಲ್ಲಿಂದಲೇ ಹರಡಿದೆ ಎಂದು ಒಪ್ಪಿಕೊಳ್ಳಲ್ಲ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವುಹಾನ್‌ನಲ್ಲಿ ಮೊದಲು ಕೊರೊನಾ ಪತ್ತೆಯಾಗಿ ಒಂದು ವರ್ಷ ಕಳೆದಿದೆ

ವುಹಾನ್‌ನಲ್ಲಿ ಮೊದಲು ಕೊರೊನಾ ಪತ್ತೆಯಾಗಿ ಒಂದು ವರ್ಷ ಕಳೆದಿದೆ

ಜಗತ್ತಿಗೆ ವ್ಯಾಪಿಸುವ ಮೊದಲು ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾವೈರಸ್‌ಗೆ ಮೊದಲು ಕಂಡುಬಂದು ಕಳೆದ ಡಿಸೆಂಬರ್‌ಗೆ ಒಂದು ವರ್ಷ ಕಳೆದುಹೋಗಿದೆ. ವುಹಾನ್ ಮಾರುಕಟ್ಟೆಯಲ್ಲಿ ಆರಂಭದಲ್ಲಿ ನ್ಯುಮೇನಿಯಾ ಮಾದರಿಯಲ್ಲಿ ಕಾಣಿಸಿಕೊಂಡ ಬಳಿಕ ಎರಡು ವಾರಗಳವರೆಗೆ ವ್ಯಾಪಾರ ಸ್ಥಗಿತಕೊಂಡಿತು. ನಂತರದಲ್ಲಿ 76 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಯಿತು. ಜನರು ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಲಾಯಿತು.

ಬೇರೆಯವರ ಮೇಲೆ ಬೊಟ್ಟು ಮಾಡುವ ಚೀನಾ

ಬೇರೆಯವರ ಮೇಲೆ ಬೊಟ್ಟು ಮಾಡುವ ಚೀನಾ

ಹೌದು, ಈಗಾಗಲೇ ಹದಿನೈದು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿರುವ ಕೊರೊನಾವೈರಸ್ ಚೀನಾದ ವುಹಾನ್‌ನಿಂದಲೇ ಬಂದಿರುವುದು ಎಂದು ಒಪ್ಪಿಕೊಳ್ಳಲು ಚೀನಾ ಸಿದ್ದವಿಲ್ಲ. ಬೇರೆ ದೇಶಗಳ ಮೇಲೆ ಇನ್ನೂ ಬೊಟ್ಟು ಮಾಡುತ್ತಾ, ಬೇರೆ ಕಡೆಯಿಂದ ಬಂದ ಉತ್ಪನ್ನಗಳಿಂದ ಹರಡಿರಬಹುದು ಎನ್ನುತ್ತಲೇ ಸಾಗಿದೆ. ಆದರೆ ಇದೀಗ ವುಹಾನ್‌ಗೆ ಆಗಮಿಸಿರುವ ಡಬ್ಲ್ಯೂಹೆಚ್‌ಒ ತಂಡವು ಕೊರೊನಾವೈರಸ್ ಮೂಲವನ್ನು ನಿಜವಾಗಿಯೂ ಪತ್ತೆಹಚ್ಚಬಲ್ಲದೆ? ಪತ್ತೆ ಹಚ್ಚಿದರೂ ಎಷ್ಟು ಸಮಯ ಬೇಕಾಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

English summary
A World Health Organization (WHO) team of 10 international experts that will investigate the origins of Covid-19 pandemic, arrives in Wuhan, China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X