ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌1ಎನ್‌1ಗಿಂತಲೂ ಕೊರೊನಾ 10 ಪಟ್ಟು ಮಾರಣಾಂತಿಕ

|
Google Oneindia Kannada News

ಜಿನೆವಾ, ಏಪ್ರಿಲ್ 14: ಎಚ್‌1ಎನ್‌1ಗಿಂತಲೂ ಕೊರೊನಾ 10 ಪಟ್ಟು ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವದಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಬಲಿ ಪಡೆದಿರುವ ಕೊವಿಡ್ 19 ಕಾಯಿಲೆ, 2009ರಲ್ಲಿ ಬಂದಿದ್ದ ಹಂದಿಜ್ವರಕ್ಕಿಂತಲೂ ಹೆಚ್ಚು ಮಾರಕವಾದದ್ದು.

ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು

210 ದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಇದು ಅತ್ಯಂತ ಮಾರಣಾಂತಿಕ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರೆಯಸಸ್ ಹೇಳಿದ್ದಾರೆ.

ಪರಿಣಾಮಕಾರಿ ಲಸಿಕೆಯ ಅಗತ್ಯವಿದೆ

ಪರಿಣಾಮಕಾರಿ ಲಸಿಕೆಯ ಅಗತ್ಯವಿದೆ

ವಿಶ್ವದಲ್ಲಿ 1.14 ಲಕ್ಷ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಹರಡುವುದನ್ನು ತಡೆಯಲು ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆಯ ಅಗತ್ಯವಿದೆ. ಇಡೀ ವಿಶ್ವ ಪರಸ್ಪರ ಸಂಪರ್ಕ ಹೊಂದಿದೆ. ಇದರಿಂದಾಗಿ ಕೊರೊನಾ ವೈರಸ್ ಮತ್ತೆ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

ಇಟಲಿ: ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆ

ಇಟಲಿ: ಸಾವಿನ ಸಂಖ್ಯೆ 20 ಸಾವಿರಕ್ಕೆ ಏರಿಕೆ

ಮಾರಕ ಕೊರೊನಾ ವೈರಸ್‌ಗೆ ಸೋಮವಾರ ಇಟಲಿಯಲ್ಲಿ ಮತ್ತೆ 566 ಮಂದಿ ಬಲಿಯಾಗಿದ್ದಾರೆ. ಇದರ ಮೂಲಕ ಸತತ 10ನೇ ದಿನವೂ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಇಟಲಿಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 20ಸಾವಿರಕ್ಕೆ ಏರಿಕೆಯಾಗಿದೆ.

ಅಮೆರಿಕದಲ್ಲಿ ಒಂದೇ ದಿನ 772 ಮಂದಿ ಬಲಿ

ಅಮೆರಿಕದಲ್ಲಿ ಒಂದೇ ದಿನ 772 ಮಂದಿ ಬಲಿ

ಕೊರೊನಾದಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚು ಸಾವು ಸಂಭವಿಸಿರುವ ಅಮೆರಿಕದಲ್ಲಿ ಸೋಮವಾರ 772 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಸಾವಿನ ಸಂಖ್ಯೆ 22,877ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಲ್ಲಿ ಮತ್ತೆ 717 ಮಂದಿ ಸಾವು

ಬ್ರಿಟನ್‌ನಲ್ಲಿ ಮತ್ತೆ 717 ಮಂದಿ ಸಾವು

ಬ್ರಿಟನ್‌ನಲ್ಲಿ ಸೋಮವಾರ ಕೊರೊನಾ ವೈರಸ್‌ಗೆ 717 ಮಂದಿ ಬಲಿಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 11,329ಕ್ಕೆ ಏರಿಕೆಯಾಗಿದೆ. 4342 ಹೊಸ ಸೋಂಕಿತರು ಪತ್ತೆಯಾಗಿದ್ದು, ಕೊರೊನಾ ಪೀಡಿತರ ಸಂಖ್ಯೆ 88ಸಾವಿರಕ್ಕೆ ಏರಿಕೆಯಾಗಿದೆ.

English summary
The novel coronavirus is 10 times more deadly than swine flu, also called H1N1, which caused a global pandemic in 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X