ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

|
Google Oneindia Kannada News

ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ತಡೆಗೆ ಸಮರೋಪಾದಿಯ ಕಾರ್ಯಗಳು ಎಲ್ಲೆಡೆ ಜರುಗುತ್ತಿವೆ. ಕೈ ಶುಚಿ ಮಾಡುವುದರಿಂದ ಹಿಡಿದು ಸಾಮಾಜಿಕ ಅಂತರ ಕಾಯ್ದುಕೊಳ್ಳುವವರೆಗಿನ ಮುಂಜಾಗ್ರತಾ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ.

ಹೀಗಿರುವಾಗಲೇ, ಕೊರೊನಾ ಸೋಂಕು ಹರಡುವ ವಿಚಾರದಲ್ಲಿ ಮತ್ತೊಂದು ಎಚ್ಚರಿಕೆಯ ಕರೆಗಂಟೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮೊಳಗಿಸಿದೆ.

ಕೊರೊನಾ.. ಪ್ರಕೃತಿ ಪಾಲಿಗೆ ವರದಾನ: ನಾವು ಅರಗಿಸಿಕೊಳ್ಳಲೇಬೇಕಾದ ಕಠೋರ ಸತ್ಯ!ಕೊರೊನಾ.. ಪ್ರಕೃತಿ ಪಾಲಿಗೆ ವರದಾನ: ನಾವು ಅರಗಿಸಿಕೊಳ್ಳಲೇಬೇಕಾದ ಕಠೋರ ಸತ್ಯ!

ಸಮಸ್ತ ನಾಗರಿಕ ಸಮುದಾಯವನ್ನು ಕೊರೊನಾ ವೈರಸ್ ನಿಂದ ರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ವೈದ್ಯಕೀಯ ಪಡೆಗೆ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆ ಇದೆ ಎಂದು WHO ಎಚ್ಚರಿಸಿದೆ. ತನ್ನ ಕೈ ಸೇರಿರುವ ಸಂಶೋಧನಾ ಫಲಿತಾಂಶವೊಂದರ ಮಾಹಿತಿಯನ್ನು ಹೊರ ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ, ಗಾಳಿಯಲ್ಲಿ ಕೊರೊನಾ ವೈರಸ್ ಹೆಚ್ಚು ಗಂಟೆಗಳ ಕಾಲ ಬದುಕಬಲ್ಲದು ಎಂಬ ಆತಂಕಕಾರಿ ವಿಚಾರವನ್ನು ಹೊರ ಹಾಕಿದೆ.

ಕೊರೊನಾ ಗಾಳಿಯಲ್ಲಿ ಹೆಚ್ಚು ಗಂಟೆ ಬದುಕಬಲ್ಲದು

ಕೊರೊನಾ ಗಾಳಿಯಲ್ಲಿ ಹೆಚ್ಚು ಗಂಟೆ ಬದುಕಬಲ್ಲದು

ಕೊರೊನಾ ವೈರಸ್ ಹೆಚ್ಚು ಗಂಟೆಗಳ ಕಾಲ ಗಾಳಿಯಲ್ಲಿ ಬದುಕಬಲ್ಲದು ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದ್ದು, ವೈದ್ಯಕೀಯ ವೃತ್ತಿಪರರು Airborne precautions ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಸೋಂಕು ತಗುಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮಾರಿಯಾ ವ್ಯಾನ್ ಕೆರ್ಖೋವ್ ತಿಳಿಸಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು!

ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸಬೇಕು!

ಸೋಂಕು ಪೀಡಿತ ರೋಗಿಗಳಿಗೆ Intubation (ಉಸಿರಾಟಕ್ಕೆ ಸಹಕಾರಿಯಾಗುವ ಹಾಗೆ ರೋಗಿಯ ಗಂಟಲೊಳಗೆ ಟ್ಯೂಬ್ ಹಾಕುವುದು) ನಂತಹ ಕಾರ್ಯವಿಧಾನ ಮಾಡುವಾಗ ವೈದ್ಯಕೀಯ ಸಿಬ್ಬಂದಿ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಯಾಕಂದ್ರೆ, ವೈರಸ್ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಮೂರು ಗಂಟೆಗಳ ಕಾಲ ವೈರಸ್ ಗಾಳಿಯಲ್ಲಿ ಇರುತ್ತವೆ. ಹೀಗಾಗಿ, ಸಾಮಾನ್ಯ ಜನರಿಗಿಂತ ವೈದ್ಯಕೀಯ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ ಎಂದು ಡಾ.ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.

ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!

N95 ಮಾಸ್ಕ್ ಧರಿಸಿ

N95 ಮಾಸ್ಕ್ ಧರಿಸಿ

ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ, N95 ಮಾಸ್ಕ್ ಗಳನ್ನು ಧರಿಸಲು CDC ಶಿಫಾರಸ್ಸು ಮಾಡಿದೆ. ಇದು ಎಲ್ಲಾ ದ್ರವ ಮತ್ತು ವಾಯುಗಾಮಿ ಕಣಗಳನ್ನ 95% ರಷ್ಟು ಫಿಲ್ಟರ್ ಮಾಡುತ್ತವೆ.

ಕೋವಿಡ್-19 ವಿಶ್ವದ ಅಂಕಿ-ಅಂಶ

ಕೋವಿಡ್-19 ವಿಶ್ವದ ಅಂಕಿ-ಅಂಶ

ಇಲ್ಲಿಯವರೆಗೂ ಕೊರೊನಾ ಸೋಂಕು ಪೀಡಿತರ ಸಂಖ್ಯೆ: 339,025

ಇಲ್ಲಿಯವರೆಗೂ ಕೊರೊನಾ ಸೋಂಕಿನಿಂದ ಸತ್ತವರು: 14,697

ಇಲ್ಲಿಯವರೆಗೂ ಕೊರೊನಾ ಸೋಂಕಿನಿಂದ ಗುಣಮುಖರಾದವರು: 99,014

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 10,553

English summary
WHO recommends Airborne Precautions after Coronavirus found to survive in Air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X