• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ, ಟ್ರಂಪ್ ಗಿಂತ ಪವರ್ ಫುಲ್ ಎಂದ ಸ್ಪೇನ್ ಜನತೆ!

|

ಮ್ಯಾಡ್ರಿಡ್ (ಸ್ಪೇನ್), ಮೇ 31: ''ಓಹೋ.... ನರೇಂದ್ರ ಮೋದಿ.. ಅವರು ಬಿಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಹೆಚ್ಚು ಬಲಿಷ್ಠರು ಹಾಗೂ ಜನಪ್ರಿಯರು''

''ಯಾರದು ನರೇಂದ್ರ ಮೋದಿಯವರಾ? ಭಾರತದಿಂದ ಬಂದವರಾ? ಗಾಂಧಿ ವಂಶಸ್ಥರಾ?''

''ಹೌದು. ಇವರೇ ನರೇಂದ್ರ ಮೋದಿ. ಭಾರತದ ರಾಜಕಾರಣದ ಹೊಸ ನಾಯಕ. ಅಲ್ಲಿನ ಪ್ರೈಮ್ ಮಿನಿಸ್ಟರ್ ಅಲ್ವಾ ಇವರು?''[ಫೇಸ್ಬುಕ್ ನಲ್ಲಿ ವಿಶ್ವಕ್ಕೆ ನಮ್ಮ ಮೋದಿನೇ ನಂಬರ್ 1]

- ತಮ್ಮ ನಾಲ್ಕು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರೀಗ ಸ್ಪೇನ್ ನಲ್ಲಿದ್ದಾರೆ. ಇದೇ ವೇಳೆ ಮೋದಿ ಭೇಟಿಯ ಬಗ್ಗೆ ಅಲ್ಲಿನ ಜನರನ್ನು ಕೆಲ ಮಾಧ್ಯಮಗಳು ಮಾತನಾಡಿಸಿದಾಗ ಆ ಜನರು ನೀಡಿದ ಪ್ರತಿಕ್ರಿಯೆ ಇದು.

ಇವರಲ್ಲಿ ಬಹುತೇಕರು ಮೋದಿಯವರ ಭಾವಚಿತ್ರವನ್ನು ಗುರುತಿಸಿದರು. ಕೆಲವ ಯಾರದು, ನರೇಂದ್ರ ಮೋದಿಯವರಾ, ಭಾರತದಿಂದ ಬಂದವರಾ, ಗಾಂಧಿ ವಂಶಸ್ಥರಾ ಎಂದು ಕೇಳಿದ್ದಾರೆ.[ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 20 ಯೋಜನೆಗಳು]

ಯಾರ್ ರೀ ಅದು ನರೇಂದ್ರ ಮೋದಿ, ಗೊತ್ತಿಲ್ಲ ಹೋಗ್ರಿ ಅಂತ ಮುಖ ತಿರುಗಿಸಿಕೊಂಡು ಹೋಗಿದ್ದಾರೆ.

ಆದರೆ, ಮತ್ತೂ ಕೆಲವರು ಓಹೋ ಮೋದಿ ಬಂದಿದ್ದಾರಾ? ಅವರು ಡೊನಾಲ್ಡ್ ಟ್ರಂಪ್ ಗಿಂತ ಹೆಚ್ಚು ಬಲಿಷ್ಠ ನಾಯಕರು ಎಂದು ಹೊಗಳಿದ್ದಾರೆ.

ಸ್ಪೇನ್ ನ ನಾಗರಿಕರಲ್ಲಿ ಮೋದಿ ಬಗ್ಗೆ ಹೀಗೆ ಅಲ್ಪ ಸ್ವಲ್ಪ ಗೊತ್ತಿರುವುದಕ್ಕೂ ಒಂದು ಸಕಾರಣವಿದೆ. ಈಗ ಮೋದಿಯವರು ಅಲ್ಲಿಗೆ ನೀಡಿರುವ ಭೇಟಿಯು ಸುಮಾರು 30 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ನೀಡುತ್ತಿರುವ ಭೇಟಿಯಾಗಿದೆ.

1988ರಲ್ಲಿ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸ್ಪೇನ್ ಗೆ ಭೇಟಿ ನೀಡಿದ್ದ ನಂತರ, ಈವರೆಗೆ ಯಾವುದೇ ಭಾರತೀಯ ಪ್ರಧಾನಿಯು ಆ ದೇಶಕ್ಕೆ ಭೇಟಿ ನೀಡಿಲ್ಲ. ಅಲ್ಲದೆ, ಅಲ್ಲಿನ ಮಾಧ್ಯಮಗಳು ಭಾರತದ ಸುದ್ದಿಗಳನ್ನು ಹೆಚ್ಚಾಗಿ ಬಿತ್ತರಿಸುವುದಿಲ್ಲ. ಹಾಗಾಗಿಯೇ, ಅಲ್ಲಿನ ಜನರಿಗೆ ಭಾರತದ ಬಗೆಗಿನ ಮಾಹಿತಿ ಅಷ್ಟಕ್ಕಷ್ಟೇ.

English summary
People of Spain expressed unclear recognition about Indian Prime Minister Narendra Modi, who is there as a part of his four-nation tour that started recently. This is because, he is the first Indian prime minister to visit Spain in nearly 30 years after the visit of then Prime Minister Rajiv Gandhi in 1988.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X