ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಎಎ ಯೂಸುಫ್ ಯಾರು?

|
Google Oneindia Kannada News

ದಿ ಹೇಗ್, ಜುಲೈ 17: ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದ್ದ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆದರ್‌ಲೆಂಡ್‌ನ ದಿ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.

42 ಪುಟಗಳ ಈ ತೀರ್ಪನ್ನು ಸಂಪೂರ್ಣವಾಗಿ ಓದಿ ಪ್ರಕಟಿಸಿದ್ದು, ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಅಧ್ಯಕ್ಷ, ನ್ಯಾಯಾಧೀಶ ಅಬ್ದುಲ್‌ಖವಿ ಅಹ್ಮದ್ ಯೂಸುಫ್. ಈ ಮಹತ್ವದ ತೀರ್ಪು ಪ್ರಕಟಿಸಿದ ಯೂಸುಫ್ ಅವರು ಕೇವಲ ನ್ಯಾಯಾಧೀಶರಾಗಿ ಕೆಲಸ ಮಾಡಿದವರಲ್ಲ. ಇದಕ್ಕೂ ಮೊದಲು ಪ್ರೊಫೆಸರ್, ಲೇಖಕ ಮತ್ತು ಸಂಪಾದಕ ಹೀಗೆ ಹಲವು ವೃತ್ತಿಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.

ಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತುಭಾರತಕ್ಕೆ ರಾಜತಾಂತ್ರಿಕ ಜಯ: ಜಾಧವ್ ಗಲ್ಲುಶಿಕ್ಷೆ ಅಮಾನತು

ಎಎ ಯೂಸುಫ್ ಅವರು ಮೂಲತಃ ಸೊಮಾಲಿಯಾದವರು. 2009ರ ಫೆಬ್ರವರಿ 6ರಿಂದ ಅವರು ಐಸಿಜೆಯ ಸದಸ್ಯರಾಗಿದ್ದಾರೆ. 2018ರ ಫೆಬ್ರವರಿ 6ರಂದು ಐಸಿಜೆಯ ಅಧ್ಯಕ್ಷರಾಗಿ ಅವರು ನೇಮಕವಾದರು. 2015ರ ಫೆಬ್ರವರಿ 6ರಿಂದ ಮೂರು ವರ್ಷ ನ್ಯಾಯಾಲಯದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ತಮ್ಮ ನಿಖರ ಹಾಗೂ ಪರಿಣಾಮಕಾರಿ ತೀರ್ಪುಗಳಿಗೆ ಹೆಸರಾದವರು.

who is Abdulqawi Ahmed yusuf kulbhushan jadhav india international court verdict

ಯೂಸುಫ್ ಅವರು ಈ ಹಿಂದೆ ಯುನೆಸ್ಕೋಗೆ ಕಾನೂನು ಸಲಹೆಗಾರ, ಅಂತಾರಾಷ್ಟ್ರೀಯ ಗುಣಮಟ್ಟದ ಕಚೇರಿಯ ನಿರ್ದೇಶಕರಾಗಿ ಮತ್ತು ಅಂತಾರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ (ಯುನಿಡೊ) ಆಫ್ರಿಕಾ ವ್ಯವಹಾರಗಳ ಕಾನೂನು ಸಲಹೆಗಾರ ಮತ್ತು ಸಹಾಯಕ ಪ್ರಧಾನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಸ್ವಿಟ್ಜರ್ಲೆಂಡ್, ಇಟಲಿ, ಗ್ರೀಸ್ ಮತ್ತು ಫ್ರಾನ್ಸ್‌ಗಳಲ್ಲಿನ ಅನೇಕ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಮತ್ತು ಅತಿಥಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ

'ಆಫ್ರಿಕನ್ ಇಯರ್ ಬುಕ್ ಆಫ್ ಇಂಟರ್‌ನ್ಯಾಷನಲ್ ಲಾ'ದ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕರಾಗಿದ್ದ ಅವರು, ಜಿನೀವಾದಲ್ಲಿನ ಇನ್‌ಸ್ಟಿಟ್ಯೂಟ್ ಡಿ ಡ್ರಿಯೊಟ್ ಇಂಟರ್‌ನ್ಯಾಷನಲ್‌ನ ಸದಸ್ಯರಾಗಿದ್ದಾರೆ. ಅಲ್ಲದೆ, 'ಆಫ್ರಿಕನ್ ಫೌಂಡೇಷನ್ ಫಾರ್ ಇಂಟರ್‌ನ್ಯಾಷನಲ್ ಲಾ'ದ ಸಂಸ್ಥಾಪಕರಲ್ಲಿ ಒಬ್ಬರು. ಜತೆಗೆ ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಕೂಡ.

ಅಂತಾರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳ ಕುರಿತು ಅನೇಕ ಕೃತಿಗಳು ಹಾಗೂ ಲೇಖನಗಳನ್ನು ಅವರು ಬರೆದಿದ್ದಾರೆ.

English summary
President of Internationa Court of Justice, Abdulqawi Ahmed Yusuf pronounced verdict on Kulbhushan Jadhav case. Who is Abdulqawi Ahmed Yusuf? Here is a brief story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X