ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19 ಚಿಕಿತ್ಸೆಗೆ HCQ ಬಳಸಬೇಡಿ ಎಂದ WHO, ಕಾರಣವೇನು?

|
Google Oneindia Kannada News

ನವದೆಹಲಿ, ಜುಲೈ 3: ವಿಶ್ವವ್ಯಾಪಿಯಾಗಿ ಎಲ್ಲರಲ್ಲೂ ಭೀತಿ ಹುಟ್ಟಿಸಿರುವ ಕೊವಿಡ್19ಗೆ ಮಲೇರಿಯಾ ಕಾಯಿಲೆಗೆ ನೀಡುವ ಪೇಕ್ವಿನಿಲ್ ಔಷಧವನ್ನು ಕೋವಿಡ್19 ರೋಗಿಗಳಿಗೆ ನೀಡಬಹುದು ಎಂದು ರಾಷ್ಟ್ರೀಯ ಮೆಡಿಕಲ್ ಸಂಶೋಧನೆ ಕೌನ್ಸಿಲ್ ಹೇಳಿದ್ದು, ಆನಂತರ ಭಾರತದೆಲ್ಲೆಡೆ ಬಳಕೆ ಮಾಡಿದ್ದು ಆಗಿದೆ. ಆದ್ರೆ, ಈಗ ವಿಶ್ವ ಆರೋಗ್ಯ ಸಂಸ್ಥೆ ಎಚ್ ಸಿ ಕ್ಯೂ ಬಳಕೆ ಸಾಕು ನಿಲ್ಲಿಸಿ ಎಂದಿದೆ.

ಹೈಡ್ರೋಕ್ಸಿಕ್ಲೋರೊಕ್ವಿನ್ ಅಲ್ಲದೆ ಲೊಪಿನವಿರ್, ರಿಟೊನವಿರ್ ಗಳನ್ನು ಕೊರೊನಾವೈರಸ್ ಸೋಂಕಿತರಿಗೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ, ಈ ಮೂರು ಔಷಧಿ ಬಳಕೆಯಿಂದ ಯಾವುದೇ ಸಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

ಈ ಮೂರು ಔಷಧಗಳ ಕ್ಲಿನಿಕಲ್ ಟ್ರಯಲ್ ನೋಡಿ ಅನುಮತಿ ನೀಡಿದ್ದ ಅಂತಾರಾಷ್ಟ್ರೀಯ ಸ್ಥಾನೀಯ ಸಮಿತಿ ಈಗ ಬೇರೆ ವರದಿ ನೀಡಿದ್ದು, ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದಿದೆ. ಭಾರತದಲ್ಲೇ ಅತಿ ಹೆಚ್ಚು ಉತ್ಪಾದನೆಯಾಗುವ ಹೈಡ್ರೋಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಕರ್ನಾಟಕದ ಎಲ್ಲಾ ಕೊವಿಡ್ 19 ಆಸ್ಪತ್ರೆಗಳಲ್ಲೂ ಕೊರೊನಾವೈರಸ್ ಪಾಸಿಟಿವ್ ಸೋಂಕಿತರಿಗೆ ನೀಡಲಾಗುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಔಷಧಿ

ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಔಷಧಿ

ಜಗತ್ತಿಗೆ ಜಗತ್ತು ಕೊರೊನಾವೈರಸ್ ಸೋಂಕಿನಿಂದ ಕಂಗೆಟ್ಟು ಹೋಗಿದ್ದ ಸಂದರ್ಭದಲ್ಲಿ ವಿಶ್ವದ ಎದುರಿಗೆ ರಾಮಬಾಣದಂತೆ ಕಂಡಿದ್ದೇ ಮಲೇರಿಯಾಗೆ ಬಳಸುವ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧಿ. ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಔಷಧಿಯನ್ನು ರಫ್ತು ಮಾಡುವುದನ್ನು ಜೂನ್ ಮೊದಲ ವಾರದಲ್ಲೇ ಸ್ಥಗಿತಗೊಳಿಸಲಾಗಿದೆ.

ಭಾರತದಿಂದ ಯುಎಸ್ಎ ಸೇರಿದಂತೆ ಅನೇಕ ದೇಶಗಳಿಗೆ ಅಪಾರ ಪ್ರಮಾಣದಲ್ಲಿ ಡ್ರಗ್ ರಫ್ತಾಗಿದೆ. ಡ್ರಗ್ ತಯಾರಿಸಲು ಬೇಕಾದ ಎಪಿಐ ಅಥವಾ ಮೂಲ ಕಚ್ಚಾವಸ್ತುವನ್ನು 10 ಮೆಟ್ರಿಕ್ ಟನ್ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ವಾಣಿಜ್ಯ ಉದ್ದೇಶವಾಗಿ ಮಾರಾಟ, ಸಂಶೋಧನೆಗೆ ಬಳಕೆ, ಕಚ್ಚಾವಸ್ತು ಉಪಯೋಗ ಹೀಗೆ ಬೇರೆ ಬೇರೆ ವರ್ಗಗಳಲ್ಲಿ ಔಷಧವನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ.

66ಕ್ಕೂ ಅಧಿಕ ದೇಶಗಳಲ್ಲಿ ಬಳಕೆಯಲ್ಲಿರುವ ಎಚ್ ಸಿಕ್ಯೂ

66ಕ್ಕೂ ಅಧಿಕ ದೇಶಗಳಲ್ಲಿ ಬಳಕೆಯಲ್ಲಿರುವ ಎಚ್ ಸಿಕ್ಯೂ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ರಷ್ಯಾ, ಅಫ್ಘಾನಿಸ್ತಾನ, ಭೂತನ್, ಬಾಂಗ್ಲಾದೇಶ, ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಮ್ಯಾನ್ಮಾರ್, ಸೀಷೆಲ್ಸ್, ಒಮಾನ್, ಯುಎಇ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಡೊಮಿನಿಕ್ ರಿಪಬ್ಲಿಕ್, ಉಗಾಂಡಾ, ಈಜಿಪ್ಟ್, ಅರ್ಮೇನಿಯಾ, ಸೆನೆಗಲ್, ಅಲ್ಜೀರಿಯಾ, ಜಮೈಕಾ, ಉಜ್ಬೇಕಿಸ್ತಾನ, ಕಜಕಸ್ತಾನ, ಉಕ್ರೇನ್, ನೆದರ್ಲೆಂಡ್, ಸ್ಲೊವೇನಿಯಾ, ಉರುಗ್ವೆ, ಈಕ್ವೆಡಾರ್ ಇನ್ನಿತರ ದೇಶಗಳು.

ಕೊರೊನಾಗೆ ಬಳಸುತ್ತಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಹಿಂದಿದೆ ಕುತೂಹಲಕಾರಿ ಇತಿಹಾಸಕೊರೊನಾಗೆ ಬಳಸುತ್ತಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಹಿಂದಿದೆ ಕುತೂಹಲಕಾರಿ ಇತಿಹಾಸ

ಕೊವಿಡ್ ಅಲ್ಲದೆ ಬೇರೆಯದ್ದಕ್ಕೂ ಎಚ್ ಸಿಕ್ಯೂ ಬಳಕೆ

ಕೊವಿಡ್ ಅಲ್ಲದೆ ಬೇರೆಯದ್ದಕ್ಕೂ ಎಚ್ ಸಿಕ್ಯೂ ಬಳಕೆ

ವಿಶ್ವದಲ್ಲಿ ಎಚ್ ಸಿ ಕ್ಯೂ ಉತ್ಪಾದನೆಯಲ್ಲಿ ಶೇ 70ರಷ್ಟು ಭಾರತದಲ್ಲೇ ತಯಾರಾಗುತ್ತದೆ. ಕಡಿಮೆ ಬೆಲೆಯ ಈ ಮಾತ್ರೆಗಳನ್ನು ಕ್ಯಾಡಿಲಾ, ಐಪಿಸಿಎ ಔಷಧ ಕಂಪನಿಗಳು ಉತ್ಪಾದಿಸಲು ಲೈಸನ್ಸ್ ಹೊಂದಿವೆ. ಅತ್ಯಂತ ಹಳೆಯ ಹಾಗೂ ವಿಶ್ವಾಸಾರ್ಹ ಔಷಧಗಳಲ್ಲಿ ಇದು ಒಂದು ಎಂದು ಭಾರತೀಯ ಫಾರ್ಮಾಸ್ಯೂಟಿಕಲ್ಸ್ ಅಲೈಯನ್ಸ್ (ಐಪಿಎ) ಹೇಳಿದೆ.

ಸೂಪರ್ ಡ್ರಗ್ ಆಗಿ ಪರಿಗಣಿಸಿರುವ ಎಚ್ ಸಿಕ್ಯೂ

ಸೂಪರ್ ಡ್ರಗ್ ಆಗಿ ಪರಿಗಣಿಸಿರುವ ಎಚ್ ಸಿಕ್ಯೂ

2ನೇ ಮಹಾಯುದ್ಧದ ಸಂದರ್ಭದಲ್ಲಿ ಮುಖ್ಯವಾಗಿ ಮಲೇರಿಯಾದಿಂದ ಮುಕ್ತಿ ಪಡೆಯಲು ಬಳಸಿದ ಈ ಸೂಪರ್ ಡ್ರಗ್ ಈಗ ಮತ್ತೆ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.

ಯುರೋಪಿಯನ್ ಮೆಡಿಸನ್ ಏಜೆನ್ಸಿ ವಿರೋಧ

ಯುರೋಪಿಯನ್ ಮೆಡಿಸನ್ ಏಜೆನ್ಸಿ ವಿರೋಧ

Hydroxychloroquine (HCQ) ಔಷಧವನ್ನು ರಫ್ತು ಮಾಡುವಂತೆ ಭಾರತಕ್ಕೆ ಟ್ರಂಪ್ ಆಗ್ರಹಪೂರ್ವಕ ಮನವಿ ಮಾಡಿದ್ದರು. ಭಾರತ ಕೂಡಾ ಅಮೆರಿಕ ಸೇರಿದಂತೆ ಅನೇಕ ದೇಶಗಳಿಗೆ ಈ ಮಾತ್ರೆ ರಫ್ತು ಮಾಡಿದೆ. Sars- CoV2 ವೈರಸ್ ಸೋಂಕಿನ ಪ್ರಭಾವವನ್ನು ತಗ್ಗಿಸುವಲ್ಲಿ ಮಲೇರಿಯಾ ಡ್ರಗ್ ಯಶಸ್ವಿಯಾಗಿದೆ. ಆದರೆ, ಯುರೋಪಿಯನ್ ಮೆಡಿಸನ್ ಏಜೆನ್ಸಿ, ಕೊರೊನಾರೋಗಿಗಳಿಗೆ ಎಚ್ ಸಿಕ್ಯೂ ನೀಡುವುದನ್ನು ವಿರೋಧಿಸಿದ್ದು, ಕ್ಲಿನಿಕಲ್ ಟ್ರಯಲ್ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿತ್ತು. ನಂತರ ಅನೇಕ ದೇಶಗಳಲ್ಲಿ ಬಳಕೆ ನಿಲ್ಲಿಸಿ, ಕ್ಲಿನಿಕಲ್ ಟ್ರಯಲ್ ನಡೆಸಿರಲಿಲ್ಲ.

HCQ ಮಾತ್ರೆ ಬಳಕೆ ಸೈಡ್ ಎಫೆಕ್ಟ್ಸ್ ಇವೆ

HCQ ಮಾತ್ರೆ ಬಳಕೆ ಸೈಡ್ ಎಫೆಕ್ಟ್ಸ್ ಇವೆ

ಪ್ಲೇಕ್ವೆನಿಲ್ ಬ್ರ್ಯಾಂಡ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಮಲೇರಿಯಾ ಅಲ್ಲದೆ ರುಮಾಟಾಯಿಡ್ ಆರ್ಥೈಟಿಸ್ ಗೂ ಬಳಸಲಾಗುತ್ತದೆ. ಹೃದಯ, ಶ್ವಾಸಕೋಶ, ಜ್ವರ, ಮೈಕೈ ನೋವು, ಸ್ನಾಯು ಸೆಳೆತ ಎಲ್ಲಕ್ಕೂ ಈ ಔಷಧಿ ಬಳಸಬಹುದು ಎಂದು ಜಾನ್ಸ್ ಹಾಪ್ಕಿನ್ ವಿಶ್ವ ವಿದ್ಯಾಲಯ ವರದಿ ನೀಡಿದೆ. ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು. ಇದರ ಸೈಡ್ ಎಫೆಕ್ಟ್ ಗಳಲ್ಲಿ ಹೃದಯಕ್ಕೆ ಹಾನಿ, ಹೃದಯ ಬಡಿತದಲ್ಲಿ ಏರುಪೇರು, ವಾಂತಿ, ಭೇದಿ, ತಲೆ ಸುತ್ತುವಿಕೆ ಮುಂತಾದ ಪರಿಣಾಮಗಳಿವೆ.

English summary
WHO today accepted the recommendation from the Solidarity Trial’s International Steering Committee to discontinue the trial’s hydroxychloroquine and lopinavir/ritonavir arms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X