ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಮ್ಮಿ ಅಂತೂ ಆಗುತ್ತಿಲ್ಲ. ಅಮೇರಿಕಾ, ಇಟಲಿ, ಫ್ರಾನ್ಸ್ ಮುಂತಾದ ದೇಶಗಳನ್ನು ಕೊರೊನಾ ವೈರಸ್ ಅಕ್ಷರಶಃ ಹಿಂಡಿ ಹಿಪ್ಪೆ ಮಾಡಿವೆ. ಇನ್ನೂ ಭಾರತದಲ್ಲೂ ಕೊರೊನಾ ಆರ್ಭಟ ಮುಂದುವರೆದಿದೆ.

ಅತ್ತ ಜಾಗತಿಕ ಮಟ್ಟದಲ್ಲಿ ಕೊರೊನಾ ಪಿಡುಗು ದೊಡ್ಡ ತಲೆ ನೋವಾಗಿದ್ದರೆ, ಇತ್ತ ಜರ್ಮನಿಯ ಪ್ರತಿಷ್ಟಿತ ಮ್ಯಾಗಝೀನ್, ಒಂದು ಸ್ಫೋಟಕ ವರದಿಯನ್ನು ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಗೆಬ್ರಿಯೆಸಸ್ ಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವೈಯುಕ್ತಿಕವಾಗಿ ಕರೆ ಮಾಡಿ, ಕೊರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವ ಕುರಿತಾದ ಎಚ್ಚರಿಕೆಯನ್ನು ತಡವಾಗಿ ನೀಡಲು ಕೇಳಿಕೊಂಡಿದ್ದರು ಎಂದು ಜರ್ಮನಿಯ Der Spiegel ಮ್ಯಾಗಝೀನ್ ವರದಿ ಮಾಡಿದೆ.

ಕೊರೊನಾ ಭಯದಿಂದ ಜೀವಂತ ಪ್ರಾಣಿಗಳ ಮಾರುಕಟ್ಟೆ ಮುಚ್ಚೋದು ಬೇಡ: WHO ಕೊರೊನಾ ಭಯದಿಂದ ಜೀವಂತ ಪ್ರಾಣಿಗಳ ಮಾರುಕಟ್ಟೆ ಮುಚ್ಚೋದು ಬೇಡ: WHO

ಚೀನಾದ ಅಣತಿಯಂತೆ ಕೊರೊನಾ ವೈರಸ್ ಕುರಿತಾದ ಈ ಬಹುಮುಖ್ಯ ಮಾಹಿತಿಯನ್ನು ಜಗಜ್ಜಾಹೀರು ಮಾಡಲು ವಿಶ್ವ ಆರೋಗ್ಯ ಸಂಸ್ಥೆ ವಿಳಂಬ ಮಾಡಿದ್ರಿಂದ ''ಅಮೂಲ್ಯವಾದ 4-6 ವಾರಗಳನ್ನು ಜಗತ್ತು ಕಳೆದುಕೊಂಡಂತಾಗಿದೆ ಎಂದು ಜರ್ಮನಿಯ ಮ್ಯಾಗಝೀನ್ ಉಲ್ಲೇಖಿಸಿದೆ.

ವರದಿಯಲ್ಲಿ ಏನಿದೆ.?

ವರದಿಯಲ್ಲಿ ಏನಿದೆ.?

''ಜನವರಿ 21 ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೋಮ್ ಗೆಬ್ರಿಯೆಸಸ್ ಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ''ಕೊರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿದೆ ಎಂಬ 'ಗ್ಲೋಬಲ್ ವಾರ್ನಿಂಗ್' ಅನ್ನು ವಿಳಂಬವಾಗಿ ನೀಡಿ'' ಎಂದು ಟೆಡ್ರೋಸ್ ಗೆ ಕ್ಸಿ ಜಿನ್ ಪಿಂಗ್ ಕೇಳಿಕೊಂಡಿದ್ದರು ಎಂಬುದು ಜರ್ಮನಿಯ ಗುಪ್ತಚರ ಸಂಸ್ಥೆ (ಬಿ.ಎನ್.ಡಿ) ಗೆ ತಿಳಿದುಬಂದಿದೆ. ಇದನ್ನೇ ಜರ್ಮನಿಯ Der Spiegel ಮ್ಯಾಗಝೀನ್ ವರದಿ ಪ್ರಕಟಿಸಿದೆ.

ಬೇಗ ವಾರ್ನಿಂಗ್ ನೀಡಬೇಕಿತ್ತು

ಬೇಗ ವಾರ್ನಿಂಗ್ ನೀಡಬೇಕಿತ್ತು

ಚೀನಾದಲ್ಲಿ ಕೊರೊನಾ ವೈರಸ್ ಹಬ್ಬಲು ಶುರುವಾದಾಗಲೇ, ವಿಶ್ವ ಆರೋಗ್ಯ ಸಂಸ್ಥೆ 'ವಾರ್ನಿಂಗ್' ನೀಡಿದ್ದರೆ ವಿವಿಧ ದೇಶಗಳು ವಿಮಾನ ಹಾರಾಟಕ್ಕೆ ನಿರ್ಬಂಧ ಹೇರುತ್ತಿದ್ದವು. ಪರಿಣಾಮ ಹಲವರ ಜೀವಕ್ಕೆ ಆಪತ್ತು ಎದುರಾಗುತ್ತಿರಲಿಲ್ಲ ಎಂದು ಜರ್ಮನಿ ಮ್ಯಾಗಝೀನ್ ವರದಿ ಮಾಡಿದೆ.

ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHOಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO

ಅಮೇರಿಕಾದ ಆರೋಪ ಕೂಡ ಇದೇ.!

ಅಮೇರಿಕಾದ ಆರೋಪ ಕೂಡ ಇದೇ.!

''ಮನುಷ್ಯರಿಗೆ ಕೊರೊನಾ ವೈರಸ್ 'ಮಾರಕ' ಎಂಬುದನ್ನು ಚೀನಾ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿತ್ತು'' ಎಂದು ಅಮೇರಿಕಾದ ಗುಪ್ತಚರ ಇಲಾಖೆ ಕೂಡ ಆರೋಪಿಸಿತ್ತು. ''ಚೀನಾದ ತಾಳಕ್ಕೆ ತಕ್ಕಂತೆ ವಿಶ್ವ ಆರೋಗ್ಯ ಸಂಸ್ಥೆ ಕುಣಿಯುತ್ತಿದೆ. ಜಗತ್ತಿಗೆ WHO ಬೇಗ ಎಚ್ಚರಿಕೆ ಕೊಡಲಿಲ್ಲ'' ಎಂದು ಹಲವು ಬಾರಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಗುಡುಗಿದ್ದರು. ಸಾಲದಕ್ಕೆ, ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಿದ್ದರು.

ವುಹಾನ್ ಲ್ಯಾಬ್ ನಲ್ಲೇ ಕೊರೊನಾ ಜನ್ಮ: 'ಸಾಕ್ಷಿ' ಇದೆ ಎಂದ ಡೊನಾಲ್ಡ್ ಟ್ರಂಪ್!ವುಹಾನ್ ಲ್ಯಾಬ್ ನಲ್ಲೇ ಕೊರೊನಾ ಜನ್ಮ: 'ಸಾಕ್ಷಿ' ಇದೆ ಎಂದ ಡೊನಾಲ್ಡ್ ಟ್ರಂಪ್!

ಸುಳ್ಳು ಎಂದ ವಿಶ್ವ ಆರೋಗ್ಯ ಸಂಸ್ಥೆ

ಜರ್ಮನಿ ಮ್ಯಾಗಝೀನ್ ಮಾಡಿರುವ ವರದಿ ಕುರಿತು ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ''ಎಲ್ಲಾ ಆರೋಪಗಳು ಆಧಾರ ರಹಿತ ಮತ್ತು ಸುಳ್ಳು. ಜನವರಿ 21 ರಂದು ಟೆಡ್ರೋಸ್ ಮತ್ತು ಕ್ಸಿ ಜಿನ್ ಪಿಂಗ್ ನಡುವೆ ದೂರವಾಣಿ ಸಂಭಾಷಣೆ ನಡೆದಿಲ್ಲ. ಇಬ್ಬರೂ ಯಾವತ್ತೂ ಫೋನ್ ನಲ್ಲಿ ಮಾತನಾಡಿಲ್ಲ. ಇಂತಹ ತಪ್ಪಾದ ವರದಿಗಳಿಂದ ಕೋವಿಡ್-19 ಅನ್ನು ಕೊನೆಗೊಳಿಸುವ ಪ್ರಯತ್ನಗಳು ದೂರವಾಗುತ್ತದೆ'' ಎಂದಿದೆ.

ಇದನ್ನು ಗಮನಿಸಿ

''ಜನವರಿ 20 ರಂದೇ ನೋವೆಲ್ ಕೊರೊನಾ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ಚೀನಾ ದೃಢೀಕರಿಸಿತ್ತು ಎಂಬುದು ಗಮನಿಸಬೇಕಾದ ಅಂಶ'' ಅಂತ ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ಮಹತ್ವದ ಘೋಷಣೆ ಆಗಿದ್ದು ಯಾವಾಗ.?

ಮಹತ್ವದ ಘೋಷಣೆ ಆಗಿದ್ದು ಯಾವಾಗ.?

ವುಹಾನ್ ನಲ್ಲಿ ಮನುಷ್ಯರಿಂದ ಮನುಷ್ಯರಿಗೆ ಕೊರೊನಾ ವೈರಸ್ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಜನವರಿ 22 ರಂದು ಘೋಷಿಸಿತ್ತು. ಆದರೆ ಮಾರ್ಚ್ ಮಧ್ಯ ಭಾಗದವರೆಗೂ ಕೋವಿಡ್-19 ''ಗ್ಲೋಬಲ್ ಪ್ಯಾಂಡೆಮಿಕ್'' ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಲಿಲ್ಲ. ಕೋವಿಡ್-19 ಸಾಂಕ್ರಾಮಿಕ ಪಿಡುಗು ಎಂದು ಘೋಷಣೆಯಾದ ಬಳಿಕ ಬಹುತೇಕ ದೇಶಗಳು ಲಾಕ್ ಡೌನ್ ಗೆ ಮೊರೆ ಹೋದವು. ಸ್ವಲ್ಪ ಮುಂಚಿತವಾಗಿಯೇ ಲಾಕ್ ಡೌನ್ ಆಗಿದ್ದರೆ, ಕೊರೊನಾ ಇಷ್ಟೊಂದು ವ್ಯಾಪಕವಾಗುತ್ತಿರಲಿಲ್ಲವೇನೋ.?!

ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!

English summary
WHO denies report of pressure from China to delay warning about human to human transmission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X