ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2 ಪಟ್ಟು ಹೆಚ್ಚಿದೆ: WHO

|
Google Oneindia Kannada News

ನವದೆಹಲಿ, ಮೇ 22: ಅಧಿಕಾರಿಗಳು ಹೇಳಿದ್ದಕ್ಕಿಂತಲೂ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2 ಪಟ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
2020ರಲ್ಲಿ ಕನಿಷ್ಠ 3 ಮಿಲಿಯನ್ ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ, ಇದು ಅಧಿಕಾರಿಗಳು ಹೇಳಿರುವ 1.8 ಮಿಲಿಯನ್ ಲೆಕ್ಕಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

2020ರ ಡಿಸೆಂಬರ್ 31ರ ವೇಳೆಗೆ 82 ಮಿಲಿಯನ್ ಮಂದಿ ಕೊರೊನಾ ಸೋಂಕಿಗೆ ಒಳಗಾಗಿ 1.8 ಮಿಲಿಯನ್ ಮಂದಿ ಮೃತಪಟ್ಟಿದ್ದರು.

ತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೊರೊನಾ ಲಸಿಕೆಗೆ WHO ಅನುಮೋದನೆತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೊರೊನಾ ಲಸಿಕೆಗೆ WHO ಅನುಮೋದನೆ

ವಿಶ್ವ ಆರೋಗ್ಯ ಸಂಸ್ಥೆಯ ಡಾಟಾ ಅನಾಲಿಸ್ಟ್ ವಿಲಿಯಮ್ ಸೆಂಬುರಿ ನೀಡಿದ ಮಾಹಿತಿಯಂತೆ, ವರದಿಯಾಗದ ಕೊರೊನಾ ಸಾವುಗಳು, ಪರೋಕ್ಷವಾಗಿ ಕೊರೊನಾ ಪರಿಣಾಮದಿಂದ ಉಂಟಾದ ಸಾವು, ಆಸ್ಪತ್ರೆ, ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಉಂಟಾದ ಸಾವು ಇತ್ಯಾದಿಗಳನ್ನು ಸೇರಿ ಈ ಮರಣ ಪ್ರಮಾಣ ಹೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ ಕೊರೊನಾದಿಂದ ಇಂದಿಗೆ ಸುಮಾರು 34 ಲಕ್ಷದಷ್ಟು ಸಾವು ಸಂಭವಿಸಿದೆಯಷ್ಟೆ.

 ಅಧಿಕೃತ ಲೆಕ್ಕಕ್ಕೂ, ವಿಶ್ವ ಸಂಸ್ಥೆ ತಿಳಿಸಿರುವ ಲೆಕ್ಕಕ್ಕೂ ಎಷ್ಟು ವ್ಯತ್ಯಾಸವಿದೆ

ಅಧಿಕೃತ ಲೆಕ್ಕಕ್ಕೂ, ವಿಶ್ವ ಸಂಸ್ಥೆ ತಿಳಿಸಿರುವ ಲೆಕ್ಕಕ್ಕೂ ಎಷ್ಟು ವ್ಯತ್ಯಾಸವಿದೆ

ಈ ಮಧ್ಯೆ ನಿಜವಾಗಿಯೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಎಷ್ಟಿರಬಹುದು ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆ ನೀಡಿದೆ. ಅಧಿಕೃತ ಲೆಕ್ಕಕ್ಕೂ ಹಾಗೂ ವಿಶ್ವ ಸಂಸ್ಥೆ ತಿಳಿಸಿರುವ ಅಂದಾಜಿಗೂ ಎಷ್ಟು ವ್ಯತ್ಯಾಸ ಇದೆ ಎಂದು ತಿಳಿದರೆ ಆಶ್ಚರ್ಯಪಡುವುದು ನಿಶ್ಚಿತ.

 ಅಧಿಕೃತ ಅಂಕಿಅಂಶಗಳಿಗಿಂತ ಅಧಿಕವಾಗಿದೆ

ಅಧಿಕೃತ ಅಂಕಿಅಂಶಗಳಿಗಿಂತ ಅಧಿಕವಾಗಿದೆ

ಕೊರೊನಾದಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಭವಿಸಿದ ಮರಣ ಪ್ರಮಾಣ ನಿಜವಾಗಿ ಅಧಿಕೃತ ಅಂಕಿ ಅಂಶಗಳಿಗಿಂತ ಅಧಿಕವಾಗಿದೆ ಎಂದು ತಿಳಿಸಿದ್ದಾರೆ. ಯುಎನ್ ಏಜೆನ್ಸಿಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 3.4 ಮಿಲಿಯನ್ (30-34 ಲಕ್ಷ ಮಂದಿ) ಜನರು ನೇರವಾಗಿ ಕೊವಿಡ್-19 ಕಾರಣದಿಂದ ಮೇ 2021ರ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ: WHO ವರದಿಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ: WHO ವರದಿ

 ಮರಣ ಪ್ರಮಾಣ ಎರಡು ಪಟ್ಟು ಹೆಚ್ಚಿದೆ

ಮರಣ ಪ್ರಮಾಣ ಎರಡು ಪಟ್ಟು ಹೆಚ್ಚಿದೆ

ಕೊರೊನಾದಿಂದ ಮೃತರ ಪ್ರಮಾಣ ಅಧಿಕೃತ ಅಂಕಿ ಅಂಶಗಳಿಗಿಂತ ಎರಡರಿಂದ ಮೂರು ಪಟ್ಟು ಅಧಿಕವಾಗಿದೆ. ಹಾಗಾಗಿ, ಸುಮಾರು 6ರಿಂದ 8 ಮಿಲಿಯನ್ (60ರಿಂದ 80 ಲಕ್ಷ) ಜನರು ಮರಣಿಸಿದ್ದಾರೆ ಎಂದು ಅಂದಾಜಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕಿ ಸಮೀರಾ ಆಸ್ಮಾ ತಿಳಿಸಿದ್ದಾರೆ.

 ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ನೀಡಿರುವ ಹೇಳಿಕೆ ಪ್ರಕಾರ ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಇದುವರೆಗೆ 7ರಿಂದ 8 ಮಿಲಿಯನ್​ನಷ್ಟು ಅಂದರೆ ಸುಮಾರು 70ರಿಂದ 80 ಲಕ್ಷದಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅಂದರೆ, ಅಧಿಕೃತವಾಗಿ ಇರುವ ಸಾವಿನ ಅಂಕಿ ಅಂಶಗಳಿಗಿಂತ ಈ ಲೆಕ್ಕಾಚಾರ ಎರಡು ಪಟ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಕೊರೊನಾ ಮೃತರ ಅಧಿಕೃತ ಲೆಕ್ಕಾಚಾರ ಕಡಿಮೆ ಇದೆ.

 ಎಷ್ಟು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು

ಎಷ್ಟು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು

ವಿಶ್ವ ಆರೋಗ್ಯ ಅಂಕಿ ಅಂಶಗಳನ್ನು ತೆರೆದಿಟ್ಟ ಆರೋಗ್ಯ ಸಂಸ್ಥೆ, 2020ರಲ್ಲಿ ಕೊರೊನಾದಿಂದ ಸಂಭವಿಸಿದ ಸಾವಿನ ಪ್ರಮಾಣ ಅಧಿಕೃತ ಸಾವಿನ ಲೆಕ್ಕಕ್ಕಿಂತ 1.2 ಮಿಲಿಯನ್​ನಷ್ಟು (10-12 ಲಕ್ಷ) ಹೆಚ್ಚಿದೆ ಎಂದು ಹೇಳಿದೆ. ಅಂದರೆ, 2020ರಲ್ಲಿ ಕೊರೊನಾದಿಂದ ಕನಿಷ್ಠ 3 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHOಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ನಿರಾಳರಾಗಬೇಡಿ:WHO

English summary
The official death toll from the Covid-19 pandemic is likely to be a “significant undercount”, the World Health Organization (WHO) said on Friday, estimating that the true figure of direct and indirect deaths could be “two to three times higher”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X