ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಬಂದಿದ್ದಲ್ಲ: WHO ವರದಿ

|
Google Oneindia Kannada News

ಬೀಜಿಂಗ್, ಮಾರ್ಚ್ 29: ಕೊರೊನಾ ವೈರಸ್ ಮನುಷ್ಯರಿಗೆ ಹರಡಿದ್ದು ಹೇಗೆ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ-ಚೀನಾ ಜಂಟಿ ಅಧ್ಯಯನ ವರದಿ ಬಹಿರಂಗವಾಗಿದೆ. ಈ ವರದಿ ಪ್ರಕಾರ ಚೀನಾದ ಲ್ಯಾಬ್‌ನಿಂದ ವೈರಸ್ ಸೋರಿಕೆ ಆಗಿದೆ ಎಂಬ ಅಭಿಪ್ರಾಯಗಳು ಕಪೋಲಕಲ್ಪಿತ. ಕೋವಿಡ್-19 ವೈರಸ್ ಬಾವಲಿಗಳಿಂದ ಬೇರೊಂದು ಪ್ರಾಣಿಯಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆಯೇ ಹೆಚ್ಚು ಎಂದು ಅದು ತಿಳಿಸಿದೆ.

ಡಬ್ಲ್ಯೂಎಚ್‌ಒ ಮತ್ತು ಚೀನಾದ ಈ ಜಂಟಿ ಅಧ್ಯಯನವು, ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿದೆ ಎಂಬ ಆರೋಪಗಳು ಕಲ್ಪಿತವಷ್ಟೇ ಎಂದು ವರದಿಗಳನ್ನು ತಳ್ಳಿಹಾಕಿವೆ. ಈ ಅಧ್ಯಯನವು ಬಹುತೇಕ ನಿರೀಕ್ಷೆಯಂತೆಯೇ ಇದ್ದು, ಅನೇಕ ಪ್ರಶ್ನೆಗಳಿಗೆ ಉತ್ತರವನ್ನೇ ಒದಗಿಸಿಲ್ಲ.

ಕೋವಿಡ್ 19: ಯಾವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಕೋವಿಡ್ 19: ಯಾವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ವಿಶ್ವ ಅರೋಗ್ಯ ಸಂಸ್ಥೆಯ ತಂಡವು ಕಳೆದ ಜನವರಿಯಲ್ಲಿಯೇ ಚೀನಾಕ್ಕೆ ಭೇಟಿ ನೀಡಿದ್ದರೂ ಅದರ ವರದಿ ಬಿಡುಗಡೆಯಾಗುವುದು ವಿಳಂಬವಾಗುತ್ತಲೇ ಇತ್ತು. ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ತಾನು ಕಾರಣ ಎಂಬ ಅಪವಾದದಿಂದ ತಪ್ಪಿಸಿಕೊಳ್ಳಲು ಈ ವರದಿಯಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು.

 WHO-China Report Says Lab Leak Of Coronavirus Is Hypothesis

ಜಿನೇವಾ ಮೂಲದ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ದೇಶವೊಂದರ ರಾಜತಾಂತ್ರಿಕರಿಂದ ಈ ವರದಿಯಿಂದ ಸಂಪೂರ್ಣ ಆವೃತ್ತಿಯನ್ನು ಪಡೆದುಕೊಂಡಿರುವ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ, ಅದರ ವಿವರಗಳನ್ನು ಬಹಿರಂಗಪಡಿಸಿದೆ. ಆದರೆ ವರದಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಬೇಕಿದ್ದು, ಅದರಲ್ಲಿನ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

English summary
WHO-China joint study report denounces lab leak of Coronavirus as hypothesis and said that transmission of the virus from bats to human through another animal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X