ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ನೇಯ ಏಷ್ಯಾದಲ್ಲಿ ಕೊರೊನಾ ಪ್ರಕರಣ ತಗ್ಗಿದರೂ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ ಏಕೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 20: ಭಾರತ, ಬಾಂಗ್ಲಾದೇಶ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಹೀಗಿದ್ದರೂ ಕೊರೊನಾದೆಡೆಗೆ ಯಾವುದೇ ನಿರ್ಲಕ್ಷ್ಯ, ಮೈಮರೆಯುವುದು ಹಾಗೂ ನಿಯಮಗಳನ್ನು ಸಡಿಲಿಕೆ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈಗ ಹಬ್ಬದ ದಿನಗಳು ಇದ್ದು, ಜೊತೆ ಜೊತೆಗೇ ಶೀತ ವಾತಾವರಣವೂ ಇರುವ ಕಾರಣದಿಂದಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಇರದೇ ಇದ್ದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳಲಿದೆ ಎಂದು ಖೇತ್ರಪಾಲ್ ಸಿಂಗ್ ಎಚ್ಚರಿಸಿದ್ದಾರೆ.

ಭಾರತದಲ್ಲಿ 100ರಲ್ಲಿ 50 ಮಂದಿಗೆ ಕೊರೊನಾವೈರಸ್ ಪಕ್ಕಾ!ಭಾರತದಲ್ಲಿ 100ರಲ್ಲಿ 50 ಮಂದಿಗೆ ಕೊರೊನಾವೈರಸ್ ಪಕ್ಕಾ!

ಅಮೆರಿಕಾದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಸಪ್ಟೆಂಬರ್ ಮಧ್ಯಭಾಗದಲ್ಲಿ ಸರಾಸರಿ ದಿನಕ್ಕೆ 61390 ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿದು ಬಂದಿದೆ.

ದೇಶದ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ದೇಶದ ಶೇ.50ರಷ್ಟು ಜನರಿಗೆ ಕೊರೊನಾವೈರಸ್ ಪ್ರಸ್ತುತ ಲೆಕ್ಕಾಚಾರ ಹಾಕಿರುವ ಮಾದರಿ ಪ್ರಕಾರ, ದೇಶದ ಶೇ.30ರಷ್ಟು ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶೇ 50 ಜನಸಂಖ್ಯೆಗೆ ಕೊರೊನಾ ಸೋಂಕು: ಸಮಿತಿ ಹೇಳಿಕೆಯನ್ನು ಪ್ರಶ್ನಿಸಿದ ವಿಜ್ಞಾನಿಗಳುಶೇ 50 ಜನಸಂಖ್ಯೆಗೆ ಕೊರೊನಾ ಸೋಂಕು: ಸಮಿತಿ ಹೇಳಿಕೆಯನ್ನು ಪ್ರಶ್ನಿಸಿದ ವಿಜ್ಞಾನಿಗಳು

ಮುಂದಿನ ಫೆಬ್ರವರಿ ತಿಂಗಳ ವೇಳೆಗೆ ಶೇ.50ರಷ್ಟು ಜನರಿಗೆ ಕೊವಿಡ್-19 ಸೋಂಕು ತಗುಲುವ ಅಪಾಯವಿದೆ ಎಂದು ಕಾನ್ಪುರ್ ದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ಸಮಿತಿ ಸದಸ್ಯರೂ ಆಗಿರುವ ಮಣೀಂದ್ರ ಅಗರ್ವಾಲ್ ತಿಳಿಸಿದ್ದಾರೆ.

ಕೊರೊನಾವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ

ಕೊರೊನಾವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ

ಆಗ್ನೇಯ ಏಷ್ಯಾದ ಭಾಗಗಳಲ್ಲಿ ಕೊವಿಡ್-19 ಪ್ರಕರಣಗಳು ಸ್ವಲ್ಪ ಕಡಿಮೆಯಾದಂತೆ ತೋರುತ್ತಿದೆ. ಆದರೆ ಕೊರೊನಾವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ, ಕೊರೋನಾ ಪ್ರಸಣದೆಡೆಗೆ ನಮ್ಮ ಪ್ರತಿಕ್ರಿಯೆ ಮತ್ತಷ್ಟು ಬಲಿಷ್ಠವಾಗಿರಬೇಕು ಹಾಗೂ ವೈರಾಣು ಹರಡುವಿಕೆಯನ್ನು ತಡಗಟ್ಟಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾ ಪ್ರದೇಶದ ನಿರ್ದೇಶಕರಾದ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಪರೀಕ್ಷೆ 9.5 ಕೋಟಿ ದಾಟಿದೆ

ಪರೀಕ್ಷೆ 9.5 ಕೋಟಿ ದಾಟಿದೆ

ಈ ನಡುವೆ ಈವರೆಗೂ ಕೊರೊನಾವೈರಸ್ ಪತ್ತೆಯಾಗಿ ನಡೆಸಲಾಗಿರುವ ಒಟ್ಟಾರೆ, ಪರೀಕ್ಷೆಗಳ ಸಂಖ್ಯೆ 9.5 ಕೋಟಿಯನ್ನು ದಾಟಿದೆ.ಅಕ್ಟೋಬರ್ ಮೂರನೇ ವಾರದಲ್ಲಿ ಸರಾಸರಿ ದೈನಂದಿನ ಪಾಸಿಟಿವ್ ದರ ಪ್ರಮಾಣವು ಶೇ. 6.13 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಡಿಮೆಯಾದ ಕೊರೊನಾ ಪ್ರಕರಣಗಳು

ಕಡಿಮೆಯಾದ ಕೊರೊನಾ ಪ್ರಕರಣಗಳು

ಒಂದೆರೆಡು ವಾರಗಳಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಸಮಾಧಾನ ಮಾಡಿಕೊಳ್ಳಬೇಡಿ, ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗುತಿವೆ, ಕೊರೊನಾ ತಡೆಗಟ್ಟಲು ಇನ್ನೂ ಹೆಚ್ಚಿನ ಪ್ರಯತ್ನ ಅಗತ್ಯವಿದೆ .

ಭಾರತದ ಶೇ.50ರಷ್ಟು ಮಂದಿಗೆ ಕೊರೊನಾ ಸೋಂಕು

ಭಾರತದ ಶೇ.50ರಷ್ಟು ಮಂದಿಗೆ ಕೊರೊನಾ ಸೋಂಕು

ಭಾರತದ 135 ಕೋಟಿ ಜನರ ಪೈಕಿ ಶೇ.50ರಷ್ಟು ಮಂದಿಗೆ ಮಹಾಮಾರಿ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ತಜ್ಞರ ಸಮಿತಿಯು ಎಚ್ಚರಿಕೆ ಸಂದೇಶ ನೀಡಿದೆ.
2021ರ ಫೆಬ್ರವರಿ ವೇಳೆಗೆ ದೇಶದ ಅರ್ಧದಷ್ಟು ಜನರಿಗೆ ಕೊವಿಡ್-19 ಸೋಂಕು ಅಂಟಿಕೊಳ್ಳುವ ಅಪಾಯವಿದೆ. ಭಾರತದಲ್ಲಿ ಈಗಾಗಲೇ 75 ಲಕ್ಷ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಅತಿಹೆಚ್ಚು ಪ್ರಕರಣಗಳಿರುವ ಜಗತ್ತಿನ ಎರಡನೇ ರಾಷ್ಟ್ರ ಎಂದು ಭಾರತವು ಗುರುತಿಸಿಕೊಂಡಿದೆ.

Recommended Video

Corona ರೋಗದ ಮೊದಲನೇ ಲಕ್ಷಣ ನೆಗಡಿ | Oneindia Kannada

English summary
The World Health Organization (WHO) on Monday cautioned against any relaxation of response actions following the recent slight decline in COVID-19 cases in the South-East Asia Region, saying the pandemic continues unabated and our response only needs to be strengthened further to curtail virus transmission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X