ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಸಿನೋವಾಕ್ ಲಸಿಕೆ ಬಳಕೆಗೆ ಒಪ್ಪಿದ ವಿಶ್ವ ಆರೋಗ್ಯ ಸಂಸ್ಥೆ

|
Google Oneindia Kannada News

ನವದೆಹಲಿ, ಜೂನ್ 01; ಚೀನಾದ ಸಿನೋವಾಕ್ ಬಯೋಟೆಕ್ ತಯಾರಿಸಿದ ಸಿಒವಿಐಡಿ -19 ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ನೀಡಿದೆ. ಕೋವಿಡ್ ವಿರುದ್ಧದ ಬಳಕೆಗೆ ಅಂಗೀಕರಿಸಿದ 2ನೇ ಲಸಿಕೆ ಇದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಲಸಿಕೆಗಳ ಪಟ್ಟಿಯಲ್ಲಿ ಸಿನೋವಾಕ್ ತಯಾರು ಮಾಡಿದ ಲಸಿಕೆ ಸೇರಿದೆ. ಮುಖ್ಯವಾಗಿ ಬಡ ದೇಶಗಳಿಗೆ ಈ ಲಸಿಕೆಗಳನ್ನು ಒದಗಿಸಲು ಜಾಗತಿಕ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ.

ಯುದ್ಧ ಬೇಡ, ಶಾಂತಿ ಬೇಕು! ವ್ಯಾಪಾರ ಮಾತುಕತೆಗೆ ಕೂತ ಅಮೆರಿಕ-ಚೀನಾ!ಯುದ್ಧ ಬೇಡ, ಶಾಂತಿ ಬೇಕು! ವ್ಯಾಪಾರ ಮಾತುಕತೆಗೆ ಕೂತ ಅಮೆರಿಕ-ಚೀನಾ!

ತಜ್ಞರ ಸಮಿತಿಯು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಸಿನೋವಾಕ್‌ನ ಲಸಿಕೆಯನ್ನು ಶಿಫಾರಸು ಮಾಡಿದೆ. ಮೇ 5ರಂದು ನಡೆಸಿದ ಸಭೆಯಲ್ಲಿ ತಾಂತ್ರಿಕ ಸಲಹಾ ಗುಂಪು, ಸಿನೋವಾಕ್ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ವಿವರವಾದ ಚರ್ಚೆ ನಡೆಸಿತ್ತು.

ಕೊರೊನಾ ಲಸಿಕೆ ಮಿಶ್ರಣ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ ಕೊರೊನಾ ಲಸಿಕೆ ಮಿಶ್ರಣ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

WHO Approved Use Of Chinese Vaccine Sinovac Biotech

ಈ ಲಸಿಕೆಯನ್ನು ಸುಲಭವಾಗಿ ಶೇಖರಣೆ ಮಾಡಬಹುದಾಗಿದೆ. ಇದರಿಂದಾಗಿ ಬಡದೇಶಗಳಿಗೆ ಸಹಾಯಕವಾಗಲಿದೆ. ಇದುವರೆಗೂ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಸಂದರ್ಭದಲ್ಲಿ 8 ಲಸಿಕೆಗಳ ಬಳಕೆಗೆ ಅನುಮತಿ ನೀಡಿದೆ.

ಜುಲೈನಿಂದ ಪ್ರತಿದಿನ ಕೋಟಿ ಜನರಿಗೆ ಲಸಿಕೆ ಕೊಡಬಹುದು; ಐಸಿಎಂಆರ್ಜುಲೈನಿಂದ ಪ್ರತಿದಿನ ಕೋಟಿ ಜನರಿಗೆ ಲಸಿಕೆ ಕೊಡಬಹುದು; ಐಸಿಎಂಆರ್

ಚೀನಾದ ಕ್ಯಾನ್‌ಸಿನೊ ಬಯೋಲಾಜಿಕ್ಸ್ ತಯಾರು ಮಾಡಿದ ಮೂರನೇ ಲಸಿಕೆ ಕ್ಲಿನಿಕಲ್ ಪ್ರಯೋಗದ ವಿವರವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆ ಮಾಡಲಾಗಿದೆ. ಆದರೆ ತಜ್ಞರ ಸಮಿತಿ ಇದರ ವಿಮರ್ಶೆ ಮಾಡಿಲ್ಲವಾದ ಕಾರಣ, ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

ಸಿನೋವಾಕ್ ಲಸಿಕೆಯನ್ನು ಮೇ ಅಂತ್ಯದ ತನಕ ವಿವಿಧ ದೇಶ, ವಿದೇಶದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದೆ. ಈ ಲಸಿಕೆ ಪಡೆದವರಲ್ಲಿ ರೋಗದ ಲಕ್ಷಣಗಳನ್ನು ಶೇ 51ರಷ್ಟು ತಡೆಗಟ್ಟಲಿದೆ ಎಂದು ಅಧ್ಯಯನ ಹೇಳಿದೆ. ಆಸ್ಪತ್ರೆಗೆ ದಾಖಲಾಗುವುದನ್ನು ಶೇ 100ರಷ್ಟು ತಡೆಯುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಲಸಿಕೆಯನ್ನು ಪಡೆದ 120,000 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನವನ್ನು ಆಧರಿಸಿ ರೋಗ ಲಕ್ಷಣ ತಡೆಗಟ್ಟುವಲ್ಲಿ ಶೇ 94ರಷ್ಟು ಪರಿಣಾಮಕಾರಿಯಾಗಿದೆ ಎಂದು ಇಂಡೋನೇಷ್ಯಾ ಹೇಳಿದೆ.

ಚೀನಾ ಈಗಾಗಲೇ ಸಿನೊಫಾರ್ಮ್ ಲಸಿಕೆಗಳನ್ನು ಅನೇಕ ದೇಶಗಳಿಗೆ ರಫ್ತು ಮಾಡಿದೆ. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಲಕ್ಷಾಂತರ ಜನರು ಈ ಲಸಿಕೆ ಪಡೆದಿದ್ದಾರೆ.

English summary
WHO has approved to use of COVID-19 vaccine Sinovac Biotech for emergency use. This is the second Chinese vaccine approved by WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X