ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಬಿ.1.1.529 ರೂಪಾಂತರ ಬಗ್ಗೆ ಚರ್ಚೆಗೆ WHO ತುರ್ತುಸಭೆ

|
Google Oneindia Kannada News

ನೂಯಾರ್ಕ್, ನವೆಂಬರ್ 26: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರ ತಳಿಯ ಕುರಿತು ಚರ್ಚಿಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ರೋಗಾಣು ವಿಕಸನ ವಿಭಾಗದ ತಾಂತ್ರಿಕ ಸಲಹಾ ಸಮಿತಿಯು ಶುಕ್ರವಾರ ತುರ್ತು ಸಭೆ ಕರೆದಿದೆ.

B.1.1.529 ಎಂದು ಕರೆಯಲ್ಪಡುವ ಈ ರೂಪಾಂತರವು ವಿಜ್ಞಾನಿಗಳ ಪ್ರಕಾರ ರೂಪಾಂತರಗಳ "ಅತ್ಯಂತ ಅಸಾಮಾನ್ಯ ನಕ್ಷತ್ರಪುಂಜ"ದಿಂದ ರಚನೆಯಾಗಿದೆ. ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಹೊಸ ರೂಪಾಂತರದ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಬಿ.1.1.529 ರೂಪಾಂತರ ತಳಿ ಪತ್ತೆದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಬಿ.1.1.529 ರೂಪಾಂತರ ತಳಿ ಪತ್ತೆ

ವಿಶ್ವ ಆರೋಗ್ಯ ಸಂಸ್ಥೆಯು ಹೊಸ ರೂಪಾಂತರದ ಕುರಿತು ಚರ್ಚಿಸುವುದಕ್ಕೆ ಶುಕ್ರವಾರ ತುರ್ತು ಸಭೆ ಕರೆದಿದೆ. ಈ ಸಭೆಯಲ್ಲಿ "ಕೊವಿಡ್-19 ರೂಪಾಂತರವು ಆಸಕ್ತಿಯ ರೂಪಾಂತರವೇ ಅಥವಾ ಕಾಳಜಿಯ ರೂಪಾಂತರವೇ ಎಂಬುದನ್ನು ಗೊತ್ತುಪಡಿಸುವ ಬಗ್ಗೆ ತಜ್ಞರು ಚರ್ಚಿಸಲಿದ್ದಾರೆ. ಹಾಗಿದ್ದಲ್ಲಿ, ನಾವು ಅದಕ್ಕೆ ಗ್ರೀಕ್ ವರ್ಣಮಾಲೆಯಿಂದ ಹೆಸರನ್ನು ನೀಡುತ್ತೇವೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ ಮುಖಂಡರಾದ ಡಾ ಮಾರಿಯಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ.

ಕೊವಿಡ್-19 ಸೋಂಕಿನ ನಾಲ್ಕು ರೂಪಾಂತರ ತಳಿ

ಕೊವಿಡ್-19 ಸೋಂಕಿನ ನಾಲ್ಕು ರೂಪಾಂತರ ತಳಿ

ಜಗತ್ತಿನಲ್ಲಿ ಹರಡಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಈವರೆಗೂ ನಾಲ್ಕು ರೂಪಾಂತರ ತಳಿಯನ್ನು ಗುರುತಿಸಿ ಪಟ್ಟಿ ಮಾಡಿದೆ. ಈ ನಾಲ್ಕು ರೂಪಾಂತರ ಮಾದರಿಯನ್ನು ಕಾಳಜಿಯ ರೂಪಾಂತರಗಳು ಎಂದು ಗೊತ್ತುಪಡಿಸಲಾಗಿದೆ. ಹೀಗೆ ವಿಶ್ವ ಸಂಸ್ಥೆಯು ಗುರುತಿಸಿದ ಕಾಳಜಿಯ ರೂಪಾಂತರಗಳು ಆಲ್ಫಾ (ಬಿ.1.1.7), ಬೀಟಾ (ಬಿ.1.351), ಗಾಮಾ (ಪಿ.1) ಮತ್ತು ಡೆಲ್ಟಾ (ಬಿ.1.617.2) ಆಗಿವೆ.

ಕೊವಿಡ್-19 ಹೊಸ ರೂಪಾಂತರದ ಹರಡುವಿಕೆ ಭೀತಿ

ಕೊವಿಡ್-19 ಹೊಸ ರೂಪಾಂತರದ ಹರಡುವಿಕೆ ಭೀತಿ

ವಿಜ್ಞಾನಿಗಳ ಪ್ರಕಾರ, B.1.1.529 ರೂಪಾಂತರದೊಂದಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ರೂಪಾಂತರಗಳು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರರ್ಥ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರವು ಹೆಚ್ಚಾಗಿ ಹರಡುವ ಅಪಾಯವಿದೆ ಎಂದು ದಕ್ಷಿಣ ಆಫ್ರಿಕಾದ ಸೂಕ್ಷ್ಮಾಣುರೋಗಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರ ತಳಿಯು ಬೋಟ್ಸ್ವಾನ್ ಮತ್ತು ಹಾಂಗ್ ಕಾಂಗ್ ರಾಷ್ಟ್ರಗಳಲ್ಲಿಯೂ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ವಾಪಸ್ ಆದ ಹಾಂಗ್ ಕಾಂಗ್ ಪ್ರಜೆಯಲ್ಲಿ ಬಿ.1.1.529 ರೂಪಾಂತರ ತಳಿಯ ಮಾದರಿ ಪತ್ತೆಯಾಗಿದೆ.

ಗೌತೆಂಗ್ ಪ್ರದೇಶದಲ್ಲಿ ಶೇ.90ರಷ್ಟು ಕೇಸ್

ಗೌತೆಂಗ್ ಪ್ರದೇಶದಲ್ಲಿ ಶೇ.90ರಷ್ಟು ಕೇಸ್

ದಕ್ಷಿಣ ಆಫ್ರಿಕಾದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಗೌತೆಂಗ್ ಪ್ರದೇಶದಲ್ಲಿ ವೇಗವಾಗಿ ಹರಡಿರುವ ಬಗ್ಗೆ ರೋಗನಿರ್ಣಯ ಪ್ರಯೋಗಾಲಯವು ತಿಳಿಸಿದೆ, ಅಲ್ಲದೇ ಇತರೆ ಎಂಟು ಪ್ರದೇಶಗಳಲ್ಲೂ ರೂಪಾಂತರ ವೈರಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 100 ಮಂದಿಯಲ್ಲಿ ಬಿ.1.1.529 ರೂಪಾಂತರ ತಳಿಯ ಮಾದರಿ ಪತ್ತೆಯಾಗಿದೆ. ಹೊಸ ರೂಪಾಂತರ ಬಿ.1.1.529 ತಳಿಯ ಕೊರೊನಾವೈರಸ್ ಸೋಂಕಿನ ಶೇ.90ರಷ್ಟು ಪ್ರಕರಣಗಳು ಗೌತೆಂಗ್ ಪ್ರದೇಶದಲ್ಲಿಯೇ ಪತ್ತೆಯಾಗಿವೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಭಾರತದಲ್ಲಿ ಬಿ.1.1.529 ರೂಪಾಂತರದ ಬಗ್ಗೆ ತೀವ್ರ ಕಟ್ಟೆಚ್ಚರ

ಭಾರತದಲ್ಲಿ ಬಿ.1.1.529 ರೂಪಾಂತರದ ಬಗ್ಗೆ ತೀವ್ರ ಕಟ್ಟೆಚ್ಚರ

ಭಾರತದಲ್ಲಿ ಕೊವಿಡ್-19 ಸೋಂಕಿನ ಬಿ.1.1.529 ರೂಪಾಂತರ ತಳಿಯ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಚ್ಚರಿಕೆ ನೀಡಿದೆ. "ಈ ರೂಪಾಂತರವು ಗಣನೀಯವಾಗಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಹೀಗಾಗಿ, ಇತ್ತೀಚೆಗೆ ಸಡಿಲಿಸಲಾದ ವೀಸಾ ನಿರ್ಬಂಧ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಿರುವುದು ದೇಶ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ," ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೊವಿಡ್-19 ಹೊಸ ರೂಪಾಂತರ ತಳಿಯಿಂದ "ಅಪಾಯ ಎದುರಿಸುತ್ತಿರುವ" ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಕಠಿಣ ತಪಾಸಣೆ ಮತ್ತು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

Recommended Video

Ambaniಯನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ವ್ಯಕ್ತಿಯಾದ Gautam Adani | Oneindia Kannada

English summary
WHO advisory group Emergency meeting to discuss on coronavirus variant found in South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X