ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲಿದ್ದ ಎರಡೇ ಎರಡು ಬಿಳಿ ಜಿರಾಫೆಗಳಿಗೆ ಇದೆಂತಾ ಗತಿ!

|
Google Oneindia Kannada News

ಕೀನ್ಯಾ, ಮಾರ್ಚ್ 11: ಮನುಷ್ಯನ ಕ್ರೂರತ್ವ, ಮನುಷ್ಯನ ಆಸೆ ಮುಂದೆ ಇನ್ನಾವುದು ಸರಿಗಟ್ಟುವುದಿಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಹಣದಾಸೆಗೆ ನಿಸರ್ಗವನ್ನು ನಾಶ ಮಾಡಿರುವ ಮಾನವ ಅಲ್ಲಿ ಅಳಿದುಳಿದಿರುವ ಅಪರೂಪದ ವನ್ಯಮೃಗಗಳನ್ನು ಬಿಡುವುದಿಲ್ಲ ಎಂಬುದು ಕೀನ್ಯಾದಲ್ಲಿ ನಡೆದ ಘಟನೆಯೊಂದು ಸಾಕ್ಷಿಕರಿಸಿದೆ.

ಜಗತ್ತಿನಲ್ಲಿ ಇದ್ದ ಎರಡೇ ಎರಡು ಅತಿ ಅಪರೂಪದ ಬಿಳಿ ಜಿರಾಫೆಗಳನ್ನು ಕೀನ್ಯಾದ ಕಾಡುಗಳ್ಳರು ಭೇಟೆಯಾಡಿ ಕೊಂದು ಹಾಕಿರುವ ಅಮಾನುಷ ಘಟನೆ, ಜಗತ್ತಿನಾದ್ಯಂತ ಪ್ರಾಣಿಪ್ರಿಯರ ಎದೆ ಝೆಲ್ಲೆನ್ನುವಂತೆ ಮಾಡಿದೆ.

ಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳುಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳು

ಕೀನ್ಯಾದ ಆಡಳಿತಕ್ಕೆ ಒಳಪಟ್ಟಿರುವ ಗಾರಿಸ್ಸಾ ಪ್ರಾಂತ್ಯದ ಹಿರೋಲಾ ರಾಷ್ಟ್ರೀಯ ಉದ್ಯಾನದಲ್ಲಿ ಕಳ್ಳ ಬೇಟೆಗಾರರು ಅಪರೂಪದ ಒಂದು ಹೆಣ್ಣು ಬಿಳಿ ಜಿರಾಫೆ ಹಾಗೂ ಅದರ ಮರಿಯನ್ನು ಕಳೆದ ಭಾನುವಾರ ಬಂದೂಕುಗಳಿಂದ ಕೊಂದು ಹಾಕಿ, ಅದರ ದೇಹದ ಭಾಗಗಳನ್ನು ಹೊತ್ತೊಯ್ದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಅಪರೂಪದ ಆಸ್ತಿ ಎಂಬಂತೆ ಇದ್ದವು

ಅಪರೂಪದ ಆಸ್ತಿ ಎಂಬಂತೆ ಇದ್ದವು

ಆಫ್ರೀಕಾದ ಹುಲ್ಲುಗಾವಲುಗಳಲ್ಲಿ ಯಥೇಚ್ಚವಾಗಿ ಜಿರಾಫೆಗಳು ಕಾಣ ಸಿಗುತ್ತವೆ. ಆದರೆ, ಬಿಳಿ ಜಿರಾಫೆಗಳು ಕೀನ್ಯಾದ ಈ ಹಿರೋಲಾ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ ಕೀನ್ಯಾದ ಅಪರೂಪದ ಆಸ್ತಿ ಎಂಬಂತೆ ಇದ್ದವು. ಆದರೆ, ಕಳ್ಳಬೇಟೆಗಾರರು ಅದೆಷ್ಟು ದಿನದಿಂದ ಇವುಗಳ ಮೇಲೆ ಕಣ್ಣಿಟ್ಟಿದ್ದರೋ ಅಂತೂ ಆ ಎರಡು ಜಿರಾಫೆಗಳನ್ನು ಹುರಿದು ಮುಕ್ಕಿದ್ದಾರೆ.

ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದವು

ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದವು

ಹಿರೋಲಾ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬಂದಿದ್ದ ಎರಡು ಸಂಪೂರ್ಣ ಬಿಳಿ ಬಣ್ಣದ ಜಿರಾಪೆಗಳ ಬಗ್ಗೆ ಡಿಸ್ಕವರಿ ಚಾನೆಲ್‌ನಲ್ಲಿ 2017 ರಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಅಂದಿನಿಂದ ಅಪರೂಪದ ಬಿಳಿ ಜಿರಾಫೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದವು.

ವಿಡಿಯೋ; ಬೀಚ್ ಟವೆಲ್ ನುಂಗಿದ ಹೆಬ್ಬಾವನ್ನು ಬದುಕಿಸಿದ ವೈದ್ಯರುವಿಡಿಯೋ; ಬೀಚ್ ಟವೆಲ್ ನುಂಗಿದ ಹೆಬ್ಬಾವನ್ನು ಬದುಕಿಸಿದ ವೈದ್ಯರು

ಮೃತಪಟ್ಟ ಎರಡೂ ಬಿಳಿ ಜಿರಾಫೆಗಳು ಹೆಣ್ಣು

ಮೃತಪಟ್ಟ ಎರಡೂ ಬಿಳಿ ಜಿರಾಫೆಗಳು ಹೆಣ್ಣು

ಒಂದು ಹೆಣ್ಣು ಹಾಗೂ ಅದರ ಒಂದು ಮರಿ ಸಂಪೂರ್ಣ ಬಿಳಿ ಬಣ್ಣದಿಂದ ಕೂಡಿದ್ದವು. ಇನ್ನೊಂದು ಗಂಡು ಜಿರಾಫೆ ಕೂಡ ಬಿಳಿಯಾಗಿದ್ದರೂ ಸ್ವಲ್ಪ ಕಂದು ಬಣ್ಣದಿಂದ ಕೂಡಿತ್ತು. ಒಟ್ಟು ಪ್ರಪಂಚದಲ್ಲಿ ಮೂರೇ ಮೂರು ಬಿಳಿ ಜಿರಾಫೆಗಳು ಇದ್ದವು. ಅದರಲ್ಲಿ ಸಂತಾನೋತ್ಪತ್ತಿ ಮುಂದುವರೆಸಲಿದ್ದ ಹೆಣ್ಣು ಜಿರಾಫೆ ಹಾಗೂ ಜಿರಾಫೆ ಮರಿ (ಹೆಣ್ಣು) ಕಳ್ಳಬೇಟೆಗಾರರಿಗೆ ತುತ್ತಾಗಿರುವುದು ಜಗತ್ತಿನ ಪ್ರಾಣಿ ಪ್ರಿಯರಿಗೆ ತೀವ್ರ ನೋವು ತರಿಸಿದೆ.

ನಮಗೆ ಕರಾಳ ದಿನ

ನಮಗೆ ಕರಾಳ ದಿನ

ಈ ಕುರಿತು ಬಿಬಿಸಿಯೊಂದಿಗೆ ಮಾತನಾಡಿರುವ ಹಿರೋಲಾ ರಾಷ್ಟ್ರೀಯ ಉದ್ಯಾನದ ಮ್ಯಾನೇಜರ್ ಮೊಹೆಮ್ಮದ್ ಅಹಮೆದ್ ನೂರ್, 'ಆ ಎರಡು ಅತಿ ಅಪರೂಪದ ಬಿಳಿ ಜಿರಾಫೆಗಳನ್ನು ಕಳೆದುಕೊಂಡಿದ್ದಕ್ಕೆ ನಮ್ಮ ದೇಶದ ಪ್ರಾಣಿ ಪ್ರಿಯರು ಮಾತು ಕಳೆದುಕೊಂಡು ಮೂಗರಾಗಿದ್ದಾರೆ. ಅವು ನಮ್ಮ ದೇಶದ ಆಸ್ತಿ ಎಂಬಂತೆ ಇದ್ದವು. ಅವುಗಳನ್ನು ಕಳೆದುಕೊಂಡಿದ್ದಕ್ಕೆ ಅತೀವ ನೋವಾಗಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದವು. ಇದೊಂದು ನಮಗೆ ಕರಾಳ ದಿನ' ಎಂದು ಹೇಳಿ ಕಣ್ಣಿರಿಟ್ಟಿದ್ದಾರೆ.

English summary
White Giraffe And Her Calf Killed In Kenya. These white Giraffes are only the in world. shocking for animal lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X