• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಪ್ಪು ಖಾತೆ ವಿವರ ಲೀಕ್ ಮಾಡಿದ್ದ ಎಲ್ಮಾರ್ ಎಲ್ಲಿ?

By Mahesh
|

ಬೆಂಗಳೂರು, ಅ.29: ಸ್ವಿಸ್ ಬ್ಯಾಂಕ್ ವೊಂದರ ಮಾಜಿ ಉದ್ಯೋಗಿ ಎಲ್ಮಾರ್ ಕಪ್ಪು ಹಣ ಹೊಂದಿರುವ ಖಾತೆದಾರರ ವಿವರಗಳನ್ನು ವಿಕಿಲೀಕ್ಸ್ ಗೆ ಕೊಟ್ಟು ಜನಪ್ರಿಯತೆ, ಪ್ರಶಂಸೆ ಜೊತೆಗೆ ಬೇಡದ ಹಿಂಸೆಯನ್ನು ಅನುಭವಿಸಿದ್ದು ಈಗ ಹಳೆ ಕಥೆ. ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುವುದರಲ್ಲಿ ಭಾರತ 'ವಿಶ್ವ ಚಾಂಪಿಯನ್' ಎಂದು ಈಗ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಈಗ ನರೇಂದ್ರ ಮೋದಿ ಸರ್ಕಾರ ಬಂದಿರುವುದು ವಿದೇಶಗಳಲ್ಲಿನ ಬ್ಯಾಂಕ್ ಗಳಿಂದ ಕಪ್ಪು ಹಣ ವಾಪಸ್ ತರುವ ವಿಚಾರದಲ್ಲಿ ಸಾಕಷ್ಟು ಚರ್ಚೆ, ಕೋರ್ಟಿನಲ್ಲಿ ವಿಚಾರಣೆ ಎಲ್ಲವೂ ತಿಳಿದಿದೆ. ಅದರೆ, ಮೋದಿ ಸರ್ಕಾರವಿರಲಿ ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರವಾಗಲಿ ವಿಳಂಬ ನೀತಿ ಅನುಸರಿಸುವುದರಲ್ಲಿ ಎತ್ತಿದ ಕೈ ಎಂದು ಎಲ್ಮಾರ್ ಹೇಳಿದ್ದಾರೆ.

ಬ್ಯಾಂಕಿನ ಖಾತೆದಾರರ ಸಂಪೂರ್ಣ ಮಾಹಿತಿ ಹೊಂದಿರದ ಹೊರತು ಈ ವಿಷಯದಲ್ಲಿ ಮುಂದುವರೆಯುವುದು ಕಷ್ಟ. ಸ್ವಿಸ್ ನಲ್ಲಿ ತನ್ನ ಖಾತೆದಾರರಿಗೆ ಗರಿಷ್ಠ ಪ್ರಮಾಣದ ಭದ್ರತೆ ಒದಗಿಸಲಾಗುತ್ತದೆ. ಸ್ವಿಸ್ ಸರ್ಕಾರದಿಂದ ಮಾಹಿತಿ ನಾಳೆ ಸಿಗಬಹುದು ಅಥವಾ 2019ರ ಹೊತ್ತ್ತಿಗೆ ಸಿಗಬಹುದು(ಈ ವೇಳೆಗೆ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಗೊಳ್ಳಲಿದೆ) ಹೀಗಾಗಿ ಮಾಹಿತಿ ಕೈಗೆ ಸಿಗದ ಹೊರತು ಹೆಸರು ಬಹಿರಂಗ ಪಡಿಸುವುದು, ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾಗುವುದು ಎಲ್ಲವೂ ಸಮಯ ವ್ಯರ್ಥ ಮಾಡಿದಂತೆ ಎಂದಿದ್ದಾರೆ. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ಆದರೆ, ಕಪ್ಪು ಹಣದ ಬಗ್ಗೆ ಮಾಹಿತಿ ಕೋರಿ ಭಾರತ ಸರ್ಕಾರದಿಂದ ಯಾವುದೇ ಕೋರಿಕೆ ಬಂದಿಲ್ಲ ಹಾಗೂ ತಾನು ಯಾವುದೇ ಮಾಹಿತಿಯನ್ನು ಯುಪಿಎ ಸರ್ಕಾರಕ್ಕೆ ನೀಡಿಲ್ಲ ಎಂದು ಎಲ್ಮಾರ್ ಹೇಳಿದ್ದಾರೆ. ರಾಜಕಾರಣಿಗಳು, ಕ್ರಿಕೆಟರ್ ಗಳು ಇದ್ದಾರೆ ಎಂದು 2012ರಲ್ಲಿ ಸಿಎನ್ಎನ್ ಐಬಿಎನ್ ಜೊತೆ ಮಾತನಾಡುವಾಗ ಹೇಳಿದ್ದರು[ವಿವರ ಇಲ್ಲಿ ಓದಿ]

ಯಾರೀತ ಎಲ್ಮಾರ್ ?: ಜ್ಯೂರಿಚ್ ನಲ್ಲಿರುವ ಜ್ಯೂಲಿಯಸ್ ಬಾರ್ ಎಂಬ ಖಾಸಗಿ ಸ್ವಿಸ್ ಬ್ಯಾಂಕ್ ನಲ್ಲಿ ಸುಮಾರು ಎರಡು ದಶಕಗಳ ಕಾಲ ಉದ್ಯೋಗಿಯಾಗಿದ್ದರು. 2008ರಲ್ಲಿ ವಿಕಿಲೀಕ್ಸ್ ಗೆ ಬ್ಯಾಂಕಿನ ರಹಸ್ಯ ದಾಖಲೆಗಳನ್ನು ಒದಗಿಸಿ ಬೆಳಕಿಗೆ ಬಂದರು. ಒಬ್ಬ ಬ್ಯಾಂಕರ್ ಆಗಿ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ತೆರಿಗೆ ವಂಚಕರ ವಿರುದ್ಧ ದಾಖಲೆ ಸಂಗ್ರಹಿಸಿ ಅದನ್ನು ಜುಲಿಯನ್ ಅಸ್ಸಾಂಜೆಗೆ ಕೈಗಿತ್ತಿದ್ದೇನೆ ಇದರಲ್ಲಿ ತಪ್ಪೇನಿಲ್ಲ. ಇಲ್ಲಿರುವ ವ್ಯವಸ್ಥೆಯಿಂದ ಇಡೀ ಸಮಾಜ ಹಾಳಾಗುವುದನ್ನು ತಡೆಗಟ್ಟು ಈ ಕ್ರಮ ಕೈಗೊಂಡೆ ಎಂದು 17 ಜನವರಿ, 2011 ರಂದು ಬಹಿರಂಗವಾಗಿ ಎಲ್ಮಾರ್ ಹೇಳಿಕೆ ನೀಡಿದ್ದರು.[ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]

ಮಾಹಿತಿ ಹೊರ ಹಾಕಿದ್ದಕ್ಕಾಗಿ 7,200 ಸ್ವಿಸ್ ಫ್ರಾಂಕ್ ದಂಡ ಹಾಗೂ 240 ದಿನ ಜೈಲುವಾಸ ಕಂಡಿದ್ದ ಎಲ್ಮಾರ್ 25 ಜುಲೈ 2011ರಂದು ಬಿಡುಗಡೆ ಹೊಂದಿದ್ದರು. ಒಂದು ಅಂದಾಜಿನ ಪ್ರಕಾರ 2011ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿರುವ ಒಟ್ಟಾರೆ ಭಾರತದ ಹಣ 11,673 ಕೋಟಿ ರು ಇತ್ತು ಎನ್ನಲಾಗಿದೆ. ನಂತರ 2012ರಲ್ಲಿ ಮತ್ತೊಮ್ಮೆ ಬಂಧನಕ್ಕೊಳಲ್ಪಟ್ಟು ಜೈಲು ಸೇರಿ ನಂತರ ಬಿಡುಗಡೆಯಾಗಿದ್ದರು. ಎಲ್ಮಾರ್ ಪರ ಅಮೆರಿಕ ಮೂಲದ ವಕೀಲ ಜಾಕ್ ಬ್ಲಮ್ ಬೆಂಬಲಕ್ಕೆ ನಿಂತಿದ್ದಾರೆ.ಅದರೆ, ಮತ್ತೊಮ್ಮೆ @SwissWB ನಾಲ್ಕೂವರೆ ವರ್ಷ ಶಿಕ್ಷೆ ಭೀತಿ ಎದುರಿಸುತ್ತಿದ್ದಾರೆ.

English summary
A former Swiss bank employee a whistleblower Rudolf Elmer has claimed that several politicians, cricketers and internationally well-known people have black money in the Swiss banks. He says that India must press for names and figures before attending the trail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X