• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಸೇರಿ ವಿಶ್ವದೆಲ್ಲೆಡೆ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ

|

ಭಾರತದ ಸೇರಿದಂತೆ ವಿಶ್ವದೆಲ್ಲೆಡೆ ವಾಟ್ಸಾಫ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಡೌನ್ ಡಿಟೆಕ್ಟರ್ ವರದಿಯಂತೆ ಸಾವಿರಾರು ಮಂದಿ ವೆಬ್‌ ಹಾಗೂ ಮೊಬೈಲ್ ಅಪ್ಲಿಕೇಷನ್ ಎರಡರಲ್ಲೂ ಸಮರ್ಪಕವಾಗಿ ಸೇವೆ ಇಲ್ಲ ಎಂದು ದೂರಿದ್ದಾರೆ.

ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ, ಫೇಸ್‌ಬುಕ್‌ ಕೂಡ ಲೋಡಿಂಗ್ ಸಮಸ್ಯೆ ಎದುರಿಸುತ್ತಿದೆ.

ಶುಕ್ರವಾರ ರಾತ್ರಿ ಭಾರತೀಯ ಕಾಲಮಾನ 10.55ರಿಂದ ವಿಶ್ವದೆಲ್ಲೆಡೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ನಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ.

ಈ ಮೂರೂ ಆಪ್‌ಗಳಲ್ಲಿ ಸಂದೇಶ ಕಳುಹಿಸಲು ಹಾಗೂ ಪೋಸ್ಟ್‌ ಮಾಡಲು ಸಾಧ್ಯವಾಗುತ್ತಿಲ್ಲ.

ಭಾರತ ಸೇರಿ ವಿವಿಧ ರಾಷ್ಟ್ರಗಳ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಾಪ್‌ ಬಳಕೆದಾರರು ವ್ಯತ್ಯಯಗಳ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಿಂದ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಬಿಡುಗಡೆಯಾಗಿಲ್ಲ, ಹಾಗೂ ವ್ಯತ್ಯಯಕ್ಕೆ ನೈಜ ಕಾರಣ ತಿಳಿದುಬಂದಿಲ್ಲ, ಕಳೆದ ಫೆಬ್ರವರಿ 19 ರಂದು ಕೂಡ ವಿಶ್ವದೆಲ್ಲೆಡೆ ಇದೇ ಸಮಸ್ಯೆ ಕಂಡುಬಂದಿತ್ತು.

ಬಳಕೆದಾರರ ಪ್ರಕಾರ, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಹೊಸ ಪೋಸ್ಟ್‌ಗಳನ್ನು ಮಾಡಲಾಗುತ್ತಿಲ್ಲ, ಹಾಗೂ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತಿಲ್ಲ, ಈ ಕುರಿತು ಈಗಾಗಲೇ ಸಾವಿರಾರು ಬಳಕೆದಾರರು ರಿಪೋರ್ಟ್ ಮಾಡಿದ್ದಾರೆ.

English summary
WhatsApp, Facebook and Instagram faces global outage, including India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X