ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಮತ್ತೊಂದು ವೈರಸ್ ಹಿಡಿತದಲ್ಲಿ ಚೀನಾ, ಎದುರಾಗಿದೆ ಮತ್ತೊಂದು ಆತಂಕ

|
Google Oneindia Kannada News

ಕೊರೊನಾ ವೈರಸ್‌ನಿಂದಾಗಿ ತತ್ತರಿಸಿರುವ ಚೀನಾಕ್ಕೆ ಮತ್ತೊಂದು ವೈರಸ್‌ನ ಆತಂಕ ಎದುರಾಗಿದೆ.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮೊದಲಿಗೆ ವುಹಾನ್‌ನಿಂದ ಹುಟ್ಟಿದ ಕೊರೊನಾವೈರಸ್‌ ನೊಂದಿಗೆ ಜಗತ್ತು ಇನ್ನೂ ಹೋರಾಡುತ್ತಿದೆ, ಈ ಮಧ್ಯೆ ಚೀನಾದಲ್ಲಿ ಮತ್ತೊಂದು ವೈರಸ್ ಸದ್ದು ಮಾಡಿದೆ.

ಚೀನಾ ಕೊರೊನಾ ಲಸಿಕೆಯ ಸುರಕ್ಷತೆಯ ಕುರಿತು ಹೆಚ್ಚಿದ ಆತಂಕಚೀನಾ ಕೊರೊನಾ ಲಸಿಕೆಯ ಸುರಕ್ಷತೆಯ ಕುರಿತು ಹೆಚ್ಚಿದ ಆತಂಕ

ಚೀನಾ ಈಗ ಬ್ರೂಸೆಲೋಸಿಸ್ ವೈರಸ್ ಎಂಬ ಜೂನೋಟಿಕ್ ಬ್ಯಾಕ್ಟೀರಿಯಾದ ಸೋಂಕಿನಿಂದ ಹಾನಿಗೊಳಗಾಗುತ್ತಿದೆ.

ಎರಡು ತಿಂಗಳಲ್ಲಿ ದುಪ್ಪಟ್ಟಾದ ಪ್ರಕರಣ

ಎರಡು ತಿಂಗಳಲ್ಲಿ ದುಪ್ಪಟ್ಟಾದ ಪ್ರಕರಣ

ಬ್ರೂಸೆಲೋಸಿಸ್ ವೈರಸ್‌ನಿಂದ 6 ಸಾವಿರಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಸರ್ಕಾರವು ಒಟ್ಟು 55,725 ಜನರ ಪರೀಕ್ಷೆಯನ್ನು ನಡೆಸಿದ್ದು, ಅದರಲ್ಲಿ 6,620 ಜನರಿಗೆ ಬ್ರೂಸೆಲೋಸಿಸ್ ವೈರಸ್ ಸೋಂಕು ತಗುಲಿದೆ. ಈ ಜನರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಚೀನಾದ ಗನ್ಸು ಪ್ರಾಂತ್ಯದ ರಾಜಧಾನಿಯಾದ ಲ್ಯಾನ್ಛೌ ಆರೋಗ್ಯ ಇಲಾಖೆ ದೃಢಪಡಿಸಿದೆ.

ಸೆಪ್ಟೆಂಬರ್ ಹೊತ್ತಿಗೆ ಕಂಡು ಬಂದ ಪ್ರಕರಣ

ಸೆಪ್ಟೆಂಬರ್ ಹೊತ್ತಿಗೆ ಕಂಡು ಬಂದ ಪ್ರಕರಣ

ಸೆಪ್ಟೆಂಬರ್ 14ರ ಹೊತ್ತಿಗೆ 3,245 ಬ್ರೂಸೆಲೋಸಿಸ್ ವೈರಸ್ ಪ್ರಕರಣಗಳು ಕಂಡುಬಂದಿವೆ ಎಂದು ಸ್ಥಳೀಯ ಸರ್ಕಾರ ಒಪ್ಪಿಕೊಂಡಿದೆ. ಎರಡು ತಿಂಗಳಲ್ಲಿ ಈ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.

ಸೋಂಕು ಹರಡುವುದು ಹೇಗೆ?

ಸೋಂಕು ಹರಡುವುದು ಹೇಗೆ?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಸೋಂಕಿತ ಪ್ರಾಣಿಗಳು, ಡೈರಿ ಉತ್ಪನ್ನಗಳು ಅಥವಾ ಗಾಳಿಯೊಂದಿಗೆ ನೇರ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಈ ವೈರಸ್‌ನ ಲಕ್ಷಣಗಳು ಜ್ವರಕ್ಕೆ ಹೋಲುತ್ತವೆ. ಕಳೆದ ವರ್ಷ ಜೈವಿಕ ಔಷಧೀಯ ಕಂಪನಿಯೊಂದರಲ್ಲಿ ಉಂಟಾಗಿರುವ ಸೋರಿಕೆಯಿಂದಾಗಿ ಚೀನಾದಲ್ಲಿ ಈ ವೈರಸ್ ಹರಡಿದೆ ಎಂದು ತಿಳಿದುಬಂದಿದೆ.

ನಿರ್ಗಮಿಸಿದ ಜೈವಿಕ ಔಷಧೀಯ ಕಂಪನಿ

ನಿರ್ಗಮಿಸಿದ ಜೈವಿಕ ಔಷಧೀಯ ಕಂಪನಿ

ಬ್ರೂಸಿಲೋಸಿಸ್ ವೈರಸ್ ಅನ್ನು ಮಾಲ್ಟಾ ಫೀವರ್ ಎಂದೂ ಕರೆಯುತ್ತಾರೆ. ಚೀನಾದಲ್ಲಿ ಈ ಕಾಯಿಲೆಯ ರೋಗಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ.

Recommended Video

UGC ಮಾರ್ಗಸೂಚಿ ಅಲ್ಲಿ ಏನಿದೆ ಗೊತ್ತಾ?? | UGC Guidelines | Karnataka | Oneindia Kannada

English summary
As the world battles one deadly disease in the form of the COVID-19 pandemic, the risk of other diseases still persists. This holds true for China as well, which was also the epicentre of the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X