• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಥ್‌ ಅವರ್ 2020:ಸಣ್ಣ ಕ್ರಮ, ವಿದ್ಯುತ್ ಉಳಿತಾಯದಲ್ಲಿ ದೊಡ್ಡ ಪಾತ್ರ

|

ನವದೆಹಲಿ, ಮಾರ್ಚ್ 28: ಮಾರ್ಚ್ 28 ಬಂದೇ ಬಿಟ್ಟಿದೆ. ಇಂದು ಪ್ಯಾರಿಸ್‌ನ ಐಫೆಲ್ ಟವರ್ ಮಂಕಾಗಲಿದೆ. ಮತ್ತೊಮ್ಮೆ ಅರ್ಥ್ ಅವರ್ ಮತ್ತೆ ಬಂದಿದೆ. ಇದೇ ಶನಿವಾರ ಅಂದರೆ ಮಾರ್ಚ್ 28 ರಂದು ರಾತ್ರಿ 8.30 ರಿಂದ 9.30 ರವರೆಗೆ ಎಲ್ಲ ಮನೆಯ ವಿದ್ಯುತ್ ದೀಪಗಳು ಬಂದ್ ಆಗಲಿವೆ.

ಜಾಗತಿಕ ತಾಪಮಾನ ನಿಯಂತ್ರಣ, ಏರುತ್ತಿರುವ ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಅರ್ಥ್ ಅವರ್ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

170 ದೇಶಗಳ ವಿವಿಧ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಒಂದು ಗಂಟೆ ಕಾಲ ಬಂದ್ ಮಾಡಲಾಗುತ್ತದೆ. ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ . ಅರ್ಥ್ ಅವರ್ ಕಾರ್ಯಕ್ರಮವನ್ನು ಪಾಲಿಸಲು ಅನೇಕ ಸಂಸ್ಥೆಗಳು, ಕಚೇರಿಗಳು ಸಜ್ಜಾಗಿವೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಸಾಕಷ್ಟು ಕಾರ್ಯಕ್ರಮಗಳು ರದ್ದಾಗಿವೆ.

ಅರ್ಥ್ ಅವರ್ ಎಂದರೇನು?

-ಆಸ್ಟ್ರೇಲಿಯಾದ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸ್ವಯಂ ಸೇವಾ ಸಂಸ್ಥೆ ಈ ಆಂದೋಲನದ ಜನಕ.

-2007ರಲ್ಲಿ ಸಿಡ್ನಿಯಲ್ಲಿ ಜಾರಿಗೆ ಬಂದ ಇದು ಜಾಗತಿಕವಾಗಿ ಮನ್ನಣೆ ಪಡೆಯಿತು.

-ಈ ಅಭಿಯಾನದಲ್ಲಿ ಭಾರತ ಸೇರಿದಂತೆ 162 ದೇಶಗಳು ಭಾಗವಹಿಸಿವೆ. ಬೆಂಗಳೂರು ಸೇರಿ 7 ಸಾವಿರಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿವೆ.

-ಸಾಮಾನ್ಯವಾಗಿ ಮಾರ್ಚ್ 28 ಅಥವಾ 29 ಇದನ್ನು ಆಚರಸಲಾಗುತ್ತೆ.

ಅರ್ಥ್‌ ಅವರ್ ಆಚರಣೆಗೆ ಪ್ರಮುಖ ಕಾರಣಗಳು

-ಸಣ್ಣ ಪ್ರಯತ್ನ ದೊಡ್ಡ ಬದಲಾವಣೆ ಮನೆಯಲ್ಲಿ ಕೋಣೆಯನ್ನು ಉಪಯೋಗಿಸದೇ ಇದ್ದಾಗ ಲೈಟ್ ಆಫ್ ಮಾಡುವುದು, ಅನಗತ್ಯ ವಿದ್ಯುತ್ ಬಳಸದೇ ಇರುವುದು , ಕಡಿಮೆ ಶಾಖದಲ್ಲಿ ಬಲ್ಬ್‌ಗಳನ್ನು ಬಳಸುವುದರಿಂದ ಕೋಣೆಯ ತಾಪಮಾನ ನಿಯಂತ್ರಣದಲ್ಲಿರುತ್ತದೆ. ಹೀಗೆ ವಿದ್ಯುತ್ ಉಳಿತಾಯದಲ್ಲಿ ಸಣ್ಣ ಪುಟ್ಟ ಕ್ರಮಗಳು ಕೂಡ ತಾಪಮಾನ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ.

-ಅರಿವು ಮೂಡಿಸುವ ಸಣ್ಣ ಪ್ರಯತ್ನ ವರ್ಷಕ್ಕೆ ಒಂದು ತಾಸು ವಿದ್ಯುತ್ ಸ್ವಿಚ್‌ಗಳನ್ನು ಆಫ್ ಮಾಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಮಿತವ್ಯಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ವಿದ್ಯುತ್ ಬಳಕೆ ಹೆಚ್ಚಿದಂತೆಲ್ಲಾ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತದೆ.

English summary
Join millions of people around the world and switch off your lights in support of nature and our planet on Saturday, 28 March, 2020 at 8:30pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X