ಉತ್ತರ ಕೊರಿಯಾ ಕ್ಷಿಪಣಿ ದಾಳಿ ಮಾಡಿದರೆ ಅಮೆರಿಕದ ಉತ್ತರ ಹೇಗಿರುತ್ತೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಅಮೆರಿಕದ ಮೇಲಾಗಲೀ ಅದಕ್ಕೆ ಸಂಬಂಧಿಸಿದ ಸ್ಥಳಗಳ ಮೇಲಾಗಲೀ ಉತ್ತರ ಕೊರಿಯಾ ಕ್ಷಿಪಣಿ ದಾಳಿ ನಡೆಸಿದರೆ ಏನಾಗಬಹುದು? ಅಂಥ ಆತಂಕವೊಂದು ದೊಡ್ಡ ಮಟ್ಟದಲ್ಲಿ ಗೋಚರಿಸುತ್ತಿದೆ ಮತ್ತು ಇಂಥ ಬೆಳವಣಿಗೆಗಳನ್ನು ಇಡೀ ಜಗತ್ತು ಭಯದಿಂದ ಗಮನಿಸುತ್ತಿದೆ.

ಒಂದು ವೇಳೆ ಕಿಮ್ ಜಾಂಗ್ ಉನ್ ಅಮೆರಿಕದ ವಿರುದ್ಧ ಕ್ಷಿಪಣಿ ದಾಳಿಗೆ ನಿರ್ಧರಿಸಿದರೆ ಏನಾಗಬಹುದು ಎಂಬ ವಿಶ್ಲೇಷಣೆ ಮಾಡುವುದೇ ಆಸಕ್ತಿಕರವಾದದ್ದು. ಇಂಥ ಸನ್ನಿವೇಶ ಎದುರಾದರೆ ಏನಾಗಬಹುದು ಅನ್ನೋದನ್ನು ಅಣ್ವಸ್ತ್ರ ರಕ್ಷಣಾ ತಜ್ಞ ಹಾಗೂ ಗ್ಲೋಬಲ್ ಜೀರೋದ ಸಹ ಸಂಸ್ಥಾಪಕ ಡಾ.ಬ್ರೂಸ್ ಬ್ಲೇರ್ ವಿವರಿಸಿದ್ದಾರೆ.

ಅಮೆರಿಕವನ್ನು ನಾಶ ಮಾಡಬಲ್ಲ ಕ್ಷಿಪಣಿಯ ಪ್ರಯೋಗ ನಡೆಸಿದ ಉ.ಕೊರಿಯಾ

"ಒಂದು ವೇಳೆ ಉತ್ತರ ಕೊರಿಯಾವು ಅಮೆರಿಕಾ ಅಥವಾ ಅದಕ್ಕೆ ಸೇರಿದ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿಗೆ ಪ್ರಯತ್ನಿಸಿದ ಒಂದು ನಿಮಿಷದೊಳಗೆ ಅಮೆರಿಕದ ಉಪಗ್ರಹಗಳು ಎಚ್ಚರಿಸುತ್ತವೆ. ಏಕೆಂದರೆ ಅವುಗಳಲ್ಲಿ ಹೀಟ್ ಡಿಟೆಕ್ಟರ್ ಗಳಿವೆ. ಹೀಗೆ ಗೊತ್ತಾದ ತಕ್ಷಣವೇ ಕ್ಷಿಪಣಿಗೆ ಪ್ರತಿರೋಧ ಒಡ್ಡಲು ಏನು ಮಾಡಬೇಕು ಹಾಗೂ ಪ್ರತೀಕಾರವಾಗಿ ಅಣ್ವಸ್ತ್ರ ಬಳಕೆಗೆ ಬೇಕಾದ ತಯಾರಿ ಆರಂಭವಾಗುತ್ತದೆ".

ಉನ್ನತ ಮಟ್ಟದ ಸಲಹೆಗಾರರ ಸಭೆ

ಉನ್ನತ ಮಟ್ಟದ ಸಲಹೆಗಾರರ ಸಭೆ

ಅಲಾಸ್ಕ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಮತ್ತು ಮಿತ್ರ ರಾಷ್ಟ್ರಗಳಲ್ಲಿರುವ (ದಕ್ಷಿಣ ಕೊರಿಯಾ, ಜಪಾನ್), ಯುಎಸ್ (ಏಜೀಸ್) ಕ್ಷಿಪಣಿ ನಾಶಕಗಳು ತಕ್ಷಣ ಶತ್ರು ಪಾಳಯದ ಕ್ಷಿಪಣಿಗಳನ್ನು ಗುರುತಿಸುತ್ತವೆ. ಜತೆಜತೆಗೆ ತಂತ್ರಗಾರಿಕೆ ರೂಪಿಸುವ ಪಡೆ ಮತ್ತು ಅಮೆರಿಕ ರಾಷ್ಟ್ರಾಧ್ಯಕ್ಷ ಹಾಗೂ ಅವರ ಉನ್ನತ ಮಟ್ಟದ ಸಲಹೆಗಾರರ ತುರ್ತು ಸಭೆ ನಡೆಯುತ್ತದೆ.

ಮುಖಾಮುಖಿ ಡಿಕ್ಕಿ

ಮುಖಾಮುಖಿ ಡಿಕ್ಕಿ

ಕೆಲ ನಿಮಿಷದಲ್ಲೇ ಅಲಾಸ್ಕದ ಮುಖ್ಯ ರಾಡಾರ್ ಮೂಲಕ ಕ್ಷಿಪಣಿಯ ಹಾದಿಯನ್ನು ಗುರುತಿಸಲಾಗುತ್ತದೆ. ಅವುಗಳು ಬರುವ ಹಾದಿಯ ಮಧ್ಯೆಯೇ ಮುಖಾಮುಖಿಯಾಗಿ ಹೊಡೆದು ಹಾಕುವ ಸಾಮರ್ಥ್ಯ ಶೇ ಇಪ್ಪತ್ತೈದರಷ್ಟಿದೆ ಎಂದು ನಂಬಲಾಗಿದೆ. ಆದರೆ ಅದರ ನಿಜವಾದ ಸಾಮರ್ಥ್ಯ ಅಷ್ಟೆಲ್ಲ ಇಲ್ಲ, ಇನ್ನೂ ಕಡಿಮೆಯಿದೆ ಎಂದು ಹಲವು ತಜ್ಞರು ಅಭಿಪ್ರಾಯ ಪಡುತ್ತಾರೆ.

ಯಾವ ರೀತಿಯ ಪ್ರತೀಕಾರ

ಯಾವ ರೀತಿಯ ಪ್ರತೀಕಾರ

ಆ ನಂತರದ ಕೆಲವು ನಿಮಿಷದಲ್ಲಿ ಕ್ಷಿಪಣಿಯ ಮಾರ್ಗವು ಖಚಿತವಾಗುತ್ತದೆ. ಒಂದು ವೇಳೆ ಉತ್ತರ ಅಮೆರಿಕಕ್ಕೆ ಅದು ಗಂಡಾಂತರಕಾರಿ ಅಂತಾದರೆ ಅಣ್ವಸ್ತ್ರ ಅಥವಾ ಅಣ್ವಸ್ತ್ರರಹಿತವಾದ ಪ್ರತೀಕಾರ ಮುಂದುವರಿಯುತ್ತದೆ. ಮುಂದಿನ ಕೆಲ ನಿಮಿಷದಲ್ಲೇ ಅದ್ಯಾವ ರೀತಿಯಲ್ಲಿ ಶತ್ರು ಪಾಳಯದ ಮೇಲೆ ಮುಗಿ ಬೀಳಬೇಕು ಎಂದು ರಾಷ್ಟ್ರಾಧ್ಯಕ್ಷರು ತೀರ್ಮಾನಿಸುತ್ತಾರೆ.

 ಇಡೀ ಸೈನ್ಯ ಸನ್ನದ್ಧ

ಇಡೀ ಸೈನ್ಯ ಸನ್ನದ್ಧ

ಆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಮೆರಿಕದ ಇಡೀ ಸೈನ್ಯವನ್ನು ಸನ್ನದ್ಧಗೊಳಿಸಲಾಗುತ್ತದೆ. ಆ ರೀತಿ ಸಿದ್ಧಗೊಳ್ಳುವ ರೀತಿಯನ್ನು ಡಿಫೆನ್ಸ್ ಕಂಡೀಷನ್ ಟೂ ಎಂದು ಕರೆಯಲಾಗುತ್ತದೆ (ಇಂಥ ಸನ್ನದ್ಧ ಸ್ಥಿತಿ ಐವತ್ತೈದು ವರ್ಷದ ಹಿಂದೆ ಕ್ಯೂಬಾ ಕ್ಷಿಪಣಿ ಸಂದಿಗ್ಧ ತಲೆದೋರಿದ ವೇಳೆ ಬಂದಿತ್ತು). ಅಮೆರಿಕ ಸೇನಾ ಪಡೆ ಎಲ್ಲ ರೀತಿಯೂ ಸಜ್ಜಾಗಿ ಪ್ರತೀಕಾರ ಹಾಗೂ ದಾಳಿಯ ಆದೇಶಕ್ಕಾಗಿ ಕಾಯುತ್ತದೆ.

ಇನ್ನೆರಡು ತುರ್ತು ಯೋಜನೆ

ಇನ್ನೆರಡು ತುರ್ತು ಯೋಜನೆ

ತುರ್ತು ಸಭೆಯ ವೇಳೆಯಲ್ಲೇ ಇನ್ನೆರಡು ತುರ್ತು ಯೋಜನೆಗಳು ಚಾಲನೆಯಾಗುತ್ತವೆ. ಒಂದು ಸರಕಾರಕ್ಕೆ ಸಂಬಂಧಿಸಿದ ರಾಷ್ಟ್ರಾಧ್ಯಕ್ಷರೂ ಸೇರಿದಂತೆ ಪ್ರಮುಖ ನಾಯಕರ ಸ್ಥಳಾಂತರ ಮಾಡಲಾಗುತ್ತದೆ. ದೇಶದ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕಾದ ನಾಯಕರು, ಅಧಿಕಾರಿಗಳು ಇತರರು ಇದರಲ್ಲಿ ಒಳಗೊಂಡಿರುತ್ತಾರೆ. ಈ ರೀತಿ ಸೆಪ್ಟೆಂಬರ್ 11, 2001ರಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗಿತ್ತು. ಆಗಿನ ರಾಷ್ಟ್ರಾಧ್ಯಕ್ಷರನ್ನು ಲೂಸಿಯಾನ ಹಾಗೂ ನೆಬ್ರಸ್ಕದಲ್ಲಿರುವ ವಾಯು ನೆಲೆಗೆ ಸ್ಥಳಾಂತರ ಮಾಡಲಾಗಿತ್ತು.

ಡೂಮ್ಸ್ ಡೇ ವಿಮಾನ

ಡೂಮ್ಸ್ ಡೇ ವಿಮಾನ

ಒಂದು ವೇಳೆ ರಾಷ್ಟ್ರಾಧ್ಯಕ್ಷರು ವೈಟ್ ಹೌಸ್ ನಲ್ಲಿದ್ದರೆ ಕೆಲವೇ ನಿಮಿಷದಲ್ಲಿ ಡೂಮ್ಸ್ ಡೇ ವಿಮಾನ ಇರುವಲ್ಲಿಗೆ ತೆರಳಬೇಕಾಗುತ್ತದೆ. ಅದೊಂದು ಬೋಯಿಂಗ್ ವಿಮಾನ. ಅಲ್ಲಿಂದ ಸಬ್ ಮರೀನ್, ಕ್ಷಿಪಣಿ ದಾಳಿ ಪಡೆ ಹಾಗೂ ಬಾಂಬ್ ಸ್ಫೋಟಕ ದಳಕ್ಕೆ ಸೂಚನೆ ಕೊಡಬಹುದು.

ಟಿವಿ, ರೇಡಿಯೋ ಮೂಲಕ ಎಚ್ಚರಿಕೆ

ಟಿವಿ, ರೇಡಿಯೋ ಮೂಲಕ ಎಚ್ಚರಿಕೆ

ಇನ್ನು ದೇಶದ ಸುರಕ್ಷೆಗೆ ಅಗತ್ಯವಾದ ಕ್ರಮಗಳನ್ನು ಆರಂಭಿಸಲಾಗುತ್ತದೆ. ಟಿವಿ, ರೇಡಿಯೋಗಳ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ. ವಿಶೇಷ ಸೈರನ್ ಬಳಸಿ ತಕ್ಷಣಕ್ಕೆ ಎಲ್ಲೆಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ರವಾನಿಸಲಾಗುತ್ತದೆ. ರಾಷ್ಟ್ರಾಧ್ಯಕ್ಷರು ತಕ್ಷಣವೇ ದೇಶದ ಜನರನ್ನು ಉದ್ದೇಶಿಸಿ ಟಿ ಚಾನಲ್ ಗಳಲ್ಲಿ ಮಾತನಾಡುತ್ತಾರೆ. ಈ ಹಿಂದೆ 9/11 ದಾಳಿಯಾದಾಗ ಅಧ್ಯಕ್ಷ ಬುಷ್ ಇಂಥ ಮಾತನಾಡಿದ್ದರು. ರಾಷ್ಟ್ರದ ಸುರಕ್ಷತೆ, ಇತರ ರಕ್ಷಣಾ ಕ್ರಮ ಮತ್ತು ಪೊಲೀಸರು ಕೆಲಸ ಆರಂಭಿಸುತ್ತಾರೆ.

ಒಂದು ವೇಳೆ ಅಣ್ವಸ್ತ್ರ ದಾಳಿ ಮಾಡಿದರೆ

ಒಂದು ವೇಳೆ ಅಣ್ವಸ್ತ್ರ ದಾಳಿ ಮಾಡಿದರೆ

ಒಂದು ವೇಳೆ ಉತ್ತರ ಕೊರಿಯಾವು ಅಮೆರಿಕಾದ ಮೇಲೆ ಅಣ್ವಸ್ತ್ರ ಕ್ಷಿಪಣಿ ದಾಳಿಯನ್ನೇ ಮಾಡಿಬಿಟ್ಟಿತು ಅಂದುಕೊಳ್ಳಿ. ಆಗ ಕತ್ರೀನಾ ಚಂಡಮಾರುತ ಅಪ್ಪಳಿಸಿದ ಸನ್ನಿವೇಶ ಹಾಗೂ ಜಪಾನ್ ನ ಫುಕುಶಿಮಾದ ಅಣು ವಿದ್ಯುತ್ ಘಟಕ ದುರಂತದ ವೇಳೆ ಹೇಗೆ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲಾಯಿತೋ ಅದೇ ಮಾದರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತದೆ. ಅಣ್ವಸ್ತ್ರ ವಿಕಿರಣ ಹಾಗೂ ಕಲ್ಮಶಗಳಿಂದ ಆಗುವ ದೊಡ್ಡ ಅನಾಹುತದಿಂದ ಜನರನ್ನು ರಕ್ಷಿಸುವುದೇ ಆದ್ಯತೆಯಾಗುತ್ತದೆ. ಅಂಥ ವಿಕಿರಣಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಜ್ಜಾಗಿರುವ ಕೆಲವೇ ಆಸ್ಪತ್ರೆಗೆಳು ಮಾತ್ರ ಇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What if North Korea launches a missile at the US or allied territory? The threat is looming large and the world watches these developments with fear. It would be interesting to analyse what would happen if Kim Jong Un decides to fire a missile at the US.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ