ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್, ಚೀನಾ ಸೊಕ್ಕು ಮುರಿಯಲು ದೊರೆಯುವುದೇ ಟ್ರಂಪ್ ಸಖ್ಯ!

ಟ್ರಂಪ್ ನೀಡಿದ್ದ ಹಲವು ಹೇಳಿಕೆಗಳು ಭಾರತೀಯರ ಮನಸ್ಸು ಗೆದ್ದಿದ್ದವು. ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಲಿ ಎಂದು ಭಾರತದಲ್ಲಿ ಪ್ರಾರ್ಥನೆ ಕೂಡ ಮಾಡಲಾಗಿತ್ತು. ಹಿಂದೂ ಸೇನಾ ಅಂತೂ ಟ್ರಂಪ್ ನನ್ನು ಒಬ್ಬ ನಾಯಕನಂತೆ ಬಿಂಬಿಸಿತ್ತು.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 9: ನನಗೆ ಹಿಂದೂಗಳ ಬಗ್ಗೆ ತುಂಬ ಗೌರವವಿದೆ. ಅನೇಕ ಮಂದಿ ಹಿಂದೂಗಳು ನನ್ನ ಸ್ನೇಹಿತರು. ಅವರು ಬಹಳ ಒಳ್ಳೆ ಜನ, ತುಂಬ ಸೊಗಸಾದ ಮಾಲೀಕತ್ವ ಗುಣ ಅವರಿಗಿದೆ-ಇವು ಅಮೆರಿಕಾದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ಹೇಳಿದ್ದ ಮಾತುಗಳು.

ಟ್ರಂಪ್ ನೀಡಿದ್ದ ಹಲವು ಹೇಳಿಕೆಗಳು ಭಾರತೀಯರ ಮನಸ್ಸು ಗೆದ್ದಿದ್ದವು. ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಲಿ ಎಂದು ಭಾರತದಲ್ಲಿ ಪ್ರಾರ್ಥನೆ ಕೂಡ ಮಾಡಲಾಗಿತ್ತು. ಹಿಂದೂ ಸೇನಾ ಅಂತೂ ಟ್ರಂಪ್ ನನ್ನು ಒಬ್ಬ ನಾಯಕನಂತೆ ಬಿಂಬಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಾರತೀಯರು ಟ್ರಂಪ್ ನ ಫಾಲೋವರ್ ಗಳಾಗಿದ್ದಾರೆ.[ಕಟ್ಟೋಣ ನಾವು ಹೊಸ ನಾಡೊಂದನು: ಡೊನಾಲ್ಡ್ ಟ್ರಂಪ್]

ಇಸ್ಲಾಮಿಕ್ ಭಯೋತ್ಪಾದನೆ ಕೊನೆಯಾಗಬೇಕು ಎಂದರೆ ಅದೇನಿದ್ದರೂ ಟ್ರಂಪ್ ನಿಂದ ಮಾತ್ರ ಎಂಬುದು ಅಂಥ ಭಾರತೀಯ ಫಾಲೋವರ್ ಗಳ ನಂಬಿಕೆ. ಭಾರತದ ಪಾಲಿಗೆ ಟ್ರಂಪ್ ಏನಾಗ್ತಾರೆ? ಟ್ರಂಪ್ ಅಧ್ಯಕ್ಷರಾದರೆ ಅಮೆರಿಕಾದೊಂದಿಗಿನ ಸಂಬಂಧದ ವಿಚಾರದಲ್ಲಿ ಭಾರತಕ್ಕೆ ಆಗಬಹುದಾದ ಲಾಭ-ನಷ್ಟಗಳೇನು? ಒಟ್ಟಿನಲ್ಲಿ ಭಾರತ ಮುಂದಿನ ನಡೆಗಳನ್ನು ಕಾದು ನೋಡಬೇಕಾಗಿರುವುದು ಹೌದು.

ಅದಕ್ಕೂ ಮುನ್ನ ಕೆಲವು ಸಾಧಕ ಹಾಗೂ ಬಾಧಕವಾದ ಅಂಶಗಳು ನಿಮ್ಮ ಗಮನಕ್ಕಿರಲಿ.

ದೇಶದ ಪಾಲಿನ ಒಳಿತುಗಳು

ದೇಶದ ಪಾಲಿನ ಒಳಿತುಗಳು

ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ನೆರೆ ರಾಷ್ಟ್ರ ಪಾಕಿಸ್ತಾನದ ಜತೆಗೆ ತಕರಾರಿದೆ. ಪಾಕಿಸ್ತಾನ ಭಯೋತ್ಪಾದಕರ ಪಾಲಿಗೆ ಹೇಗೆ ಆಶ್ರಯ ತಾಣವಾಗಿದೆ ಅನ್ನೋದನ್ನು ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿನ ಮುಂದೆ ಸಾರುತ್ತಿದ್ದಾರೆ. ಈ ವಿಚಾರದಲ್ಲಿ ಭಾರತಕ್ಕೆ ಟ್ರಂಪ್ ಸಾಥ್ ದೊರೆಯುವ ಸಾಧ್ಯತೆಯಿದೆ. ಏಕೆಂದರೆ ಟ್ರಂಪ್ ಗೆ ಕೂಡ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಪ್ರಬಲವಾದ ಆಕ್ಷೇಪ ಹಾಗೂ ಸಿಟ್ಟಿದೆ.

ಅಪಾಯಕಾರಿ ರಾಷ್ಟ್ರ

ಅಪಾಯಕಾರಿ ರಾಷ್ಟ್ರ

ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾ ಒಮ್ಮೆ ಟ್ರಂಪ್ ಹೇಳಿದ್ದ ಮಾತನ್ನೇ ನೆನಪಿಸಿಕೊಳ್ಳಬೇಕೆಂದರೆ, ಇಡೀ ಜಗತ್ತಿನಲ್ಲೇ ಭಾರೀ ಅಪಾಯಕಾರಿ ರಾಷ್ಟ್ರವೆಂದರೆ ಅದು ಭಾರತದ ನೆರೆಯ ರಾಷ್ಟ್ರ ಎಂದು ಹೇಳಿದ್ದರು. ಮೋದಿ ಸರಕಾರವು ಅಂತರರಾಷ್ಟ್ರೀಯ ಸಮುದಾಯದ ಎದುರು ಏಕಾಂಗಿ ಮಾಡಬೇಕೆಂಬ ಪಣ ತೊಟ್ಟಿದ್ದು, ಈ ಸಂಕಲ್ಪಕ್ಕೆ ಟ್ರಂಪ್ ಬೆಂಬಲ ನಿರೀಕ್ಷಿಸಬಹುದು.

ಚೀನಾಗೂ ಹಬ್ಬ ಕಾದಿದೆ

ಚೀನಾಗೂ ಹಬ್ಬ ಕಾದಿದೆ

ಇನ್ನು ಚೀನಾ ವಿಚಾರದಲ್ಲೂ ದೇಶಕ್ಕೆ ಟ್ರಂಪ್ ನಿಂದ ಹಲವು ಅನುಕೂಲ ದೊರೆಯುವ ಸಾಧ್ಯತೆ ಇದೆ. ಟ್ರಂಪ್ ಗೆ ಚೀನಾ ಬಗ್ಗೆ ಇರುವ ನಿಲವು ಎಂಥದ್ದು ಎಂಬುದು ಜಗಜ್ಜಾಹೀರಾದ ಸಂಗತಿ. ಚುನಾವಣೆ ಪ್ರಚಾರದ ವೇಳೆಯೇ ಚೀನಾ ಬಗ್ಗೆ ಟ್ರಂಪ್ ಕಿಡಿ ಕಾರಿದ್ದರು. ಚೀನಾ ಕರೆನ್ಸಿ ವಿಚಾರವಾಗಿ ನಡೆದುಕೊಂಡ ಬಗ್ಗೆ ಅವರಿಗೆ ಅಸಮಾಧಾನವಿದೆ. ಚೀನಾದ ವ್ಯವಹಾರಗಳ ಬಗ್ಗೆ ಹೊಸ ಒಪ್ಪಂದ ಮಾಡಿಕೊಳ್ಳಲಿಲ್ಲ ಅಂದರೆ ಹೆಚ್ಚಿನ ತೆರಿಗೆ ವಿಧಿಸುವ ಆಲೋಚನೆ ಇದೆ ಎಂದು ಅವರು ಹೇಳಿದ್ದರು. ಅಮೆರಿಕಾ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡರೂ ಭಾರತದ ಆರ್ಥಿಕತೆಗೆ ಅನುಕೂಲ. ಹಾಗೇ ಪಾಕಿಸ್ತಾನವನ್ನು ಬೆಂಬಲಿಸುವ ಚೀನಾವನ್ನು ಟ್ರಂಪ್ ನಿಯಂತ್ರಿಸುವ ಸಾಧ್ಯತೆ ಇದೆ. ಒಂದು ವೇಳೆ ಅದರಲ್ಲಿ ಯಶಸ್ವಿಯಾದರೆ ದೇಶಕ್ಕೇ ಅನುಕೂಲ.

ಪ್ರತಿಕೂಲದ ಅಂಶಗಳು

ಪ್ರತಿಕೂಲದ ಅಂಶಗಳು

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹತ್ತಾರು ಲಕ್ಷ ಭಾರತೀಯರಿಗೆ ಅಮೆರಿಕಾದ H1B ವೀಸಾ ಸಿಕ್ಕಿದೆ. ಈ ಬಗ್ಗೆ ಪುನರ್ ಪರಿಶೀಲಿಸುವುದಾಗಿ ಟ್ರಂಪ್ ಈಗಾಗಲೇ ಹೇಳಿರುವುದರಿಂದ ದೇಶದ ಸಾಫ್ಟ್ ವೇರ್ ಕಂಪನಿಗಳಿಗೆ ಇದರಿಂದ ಹೊಡೆತ ಬೀಳಬಹುದು.

'ಮೇಕ್ ಇನ್ ಇಂಡಿಯಾ'ಗೆ ಹಿನ್ನಡೆ

'ಮೇಕ್ ಇನ್ ಇಂಡಿಯಾ'ಗೆ ಹಿನ್ನಡೆ

ಚುನಾವಣೆ ಪ್ರಚಾರದ ವೇಳೆ ಟ್ರಂಪ್ ಘೋಷಣೆಗಳನ್ನೇ ಗಮನಿಸಿದರೆ, ಅಮೆರಿಕಾ ಮೊದಲು ಎಂಬುದು ಅವರ ಆದ್ಯತೆ. ಅಮೆರಿಕಾವನ್ನು ಮತ್ತೆ ಪ್ರವರ್ಧಮಾನಕ್ಕೆ ತರಬೇಕು ಎಂಬುದು ಟ್ರಂಪ್ ಉದ್ದೇಶ. ಆದ್ದರಿಂದ ಆಮೆರಿಕಾದ ಆಂತರಿಕ ಸಂಗತಿಗಳಿಗೆ ಆದ್ಯತೆ ಸಿಕ್ಕಬಹುದು. ಕಾರ್ಪೋರೆಟ್ ತೆರಿಗೆಯನ್ನು 35ರಿಂದ 15 ಪರ್ಸೆಂಟ್ ಗೆ ಇಳಿಸುವ ಮಾತು ಕೊಟ್ಟಿದ್ದರು. ಹೀಗಾದರೆ ಅಮೆರಿಕಾದ ಹಲವು ಕಾರ್ಪೋರೆಟ್ ಕಂಪನಿಗಳು ಆ ದೇಶಕ್ಕೆ ಹಿಂತಿರುಗುವ ಸಾಧ್ಯತೆಗಳಿವೆ. ಹೀಗಾದರೆ ಭಾರತದ 'ಮೇಕ್ ಇನ್ ಇಂಡಿಯಾ'ಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಕೆಲಸ ಕಸಿಯುತ್ತಿದ್ದಾರೆ

ಕೆಲಸ ಕಸಿಯುತ್ತಿದ್ದಾರೆ

ಅಮೆರಿಕನ್ನರಿಗೆ ಹೆಚ್ಚು ಅನುಕೂಲ ದೊರೆಯಬೇಕು ಎಂಬುದು ಟ್ರಂಪ್ ನಂಬಿಕೆ. ಅಮೆರಿಕಾದಲ್ಲಿ ಭಾರತೀಯರು, ಚೀನಿಯರು ಅಮೆರಿಕನ್ನರ ಕೆಲಸ ಕಸಿಯುತ್ತಿದ್ದಾರೆ ಎಂದಿದ್ದರ್ ಟ್ರಂಪ್. ಈ ಹೇಳಿಕೆ ಭಾರತಕ್ಕೆ ಪೂರಕವಾಗಿರುವುದಂತೂ ಖಂಡಿತಾ ಅಲ್ಲ.

English summary
Several statements made by Trump have impressed Indians. In fact there have been prayers held for his win in India. The Hindu Sena even went on to celebrate him as a hero. Trump has several Indian followers on the social media who feel he has the answer to end Islamic terrorism. The bigger question is what does Trump mean for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X