ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್ ತಂಟೆಗೆ ಬಂದರೆ ಹುಷಾರ್: ಚೀನಾಗೆ ಬೈಡನ್ ಎಚ್ಚರಿಕೆ

|
Google Oneindia Kannada News

ಟೋಕಿಯೋ, ಮೇ 23: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಮಧ್ಯೆ ತೈವಾನ್ ಸಹವಾಸಕ್ಕೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವುದರ ಮೂಲಕ ಚೀನಾಗೆ ಯುಎಸ್ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಜಪಾನ್ ಅಧ್ಯಕ್ಷರೊಂದಿಗಿನ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾಳೆ, ನಾವು ನಮ್ಮ ಸಹವರ್ತಿ ಕ್ವಾಡ್ ಪಾಲುದಾರರನ್ನು ಭೇಟಿ ಮಾಡಲಿದ್ದೇವೆ. ಆಸ್ಟ್ರೇಲಿಯಾ ಮತ್ತು ಭಾರತದ ನಮ್ಮ ನಾಯಕರನ್ನು ಶೃಂಗಸಭೆಯ ಭಾಗವಾಗಿ ನಾವು ಎರಡನೇ ಬಾರಿ ನೇರವಾಗಿ ಭೇಟಿಯಾಗುತ್ತಿದ್ದೇವೆ. ಪ್ರಜಾಪ್ರಭುತ್ವಗಳ ನಡುವಿನ ಸಹಕಾರವು ದೊಡ್ಡ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಕ್ವಾಡ್ ಇಡೀ ಜಗತ್ತಿಗೆ ತೋರಿಸುತ್ತಿದೆ" ಎಂದರು.

ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ! ಕ್ವಾಡ್ ಶೃಂಗಸಭೆಯಲ್ಲಿ ಮೋದಿ-ಬೈಡನ್ ನಡುವೆ 'ಗೋಧಿ' ಚರ್ಚೆ!

ತೈವಾನ್ ವಿಷಯವನ್ನು ಪ್ರಸ್ತಾಪಿಸಿದ ಯುಎಸ್ ಅಧ್ಯಕ್ಷ ಜೋ ಬೈಡನ್, ಚೀನಾಗೆ ಎಚ್ಚರಿಕೆ ನೀಡಿದರು. ನಮ್ಮ ಸಹಪಾಠಿಗಳ ತಂಟೆಗೆ ಬಂದರೆ ಅವರಿಗೆ ರಕ್ಷಣೆಯಾಗಿ ನಾವು ನಿಲ್ಲುತ್ತೇವೆ ಎಂದು ಹೇಳಿದರು. ಬೈಡನ್ ಹೇಳಿಕೆಗೆ ಜಪಾನ್ ಅಧ್ಯಕ್ಷ ಸಹ ಧ್ವನಿಗೂಡಿಸಿದರು. ತೈವಾನ್ ವಿಷಯವಷ್ಟೇ ಅಲ್ಲದೇ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿಯಂತ್ರಣ ಹಾಗೂ ನಿರ್ವಹಣೆ. ಮಂಕಿಪಾಕ್ಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದು ಹಾಗೂ ಡಿಜಿಟಲ್ ಆರ್ಥಿಕತೆಯ ವಿಷಯಗಳ ಬಗ್ಗೆಯೂ ಜೋ ಬೈಡನ್ ತಮ್ಮ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದರು.

ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಚೀನಾಗೆ ನೀಡಿದ ಎಚ್ಚರಿಕೆ ಸಂದೇಶ ಹೇಗಿತ್ತು ಎಂದು ವರದಿ ಓದಿ ತಿಳಿಯಿರಿ.

ತೈವಾನ್ ಬಗ್ಗೆ ಉಲ್ಲೇಖಿಸಿದ ಚೀನಾಗೆ ಬೈಡನ್ ಎಚ್ಚರಿಕೆ

ತೈವಾನ್ ಬಗ್ಗೆ ಉಲ್ಲೇಖಿಸಿದ ಚೀನಾಗೆ ಬೈಡನ್ ಎಚ್ಚರಿಕೆ

ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದಕ್ಕೆ ನಾವು ಬದ್ಧರಾಗಿದ್ದೇವೆ. ಜಪಾನ್ ಮತ್ತು ಇತರ ರಾಷ್ಟ್ರಗಳೊಂದಿಗೆ ಯುಎಸ್ ದೃಢವಾಗಿ ನಿಂತಿದೆ, ಅದು ತೈವಾನ್ ಅನ್ನು ವಶಪಡಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ ಎನ್ನುವ ಮೂಲಕ ಚೀನಾಗೆ ಪರೋಕ್ಷ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಬೈಡನ್ ಜೊತೆಗೆ ಚೀನಾಗೆ ಜಪಾನ್ ಎಚ್ಚರಿಕೆ

ಬೈಡನ್ ಜೊತೆಗೆ ಚೀನಾಗೆ ಜಪಾನ್ ಎಚ್ಚರಿಕೆ

ಚೀನಾ ತೈವಾನ್ ಅನ್ನು ವಶಪಡಿಸಿಕೊಂಡರೆ ಏನಾಗಬಹುದು ಎಂಬ ಪ್ರಶ್ನೆಗೆ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಪ್ರತಿಕ್ರಿಯೆ ನೀಡಿದರು. "ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ. ಏಷ್ಯಾದಲ್ಲಿ, ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯಬೇಕು ಮತ್ತು ರಕ್ಷಿಸಬೇಕು. ನಾವು ನಮ್ಮ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತೇವೆ," ಎಂದರು.

ಕೋವಿಡ್-19 ನಿಯಂತ್ರಣದ ಬಗ್ಗೆ ಬೈಡನ್ ಹೇಳಿಕೆ

ಕೋವಿಡ್-19 ನಿಯಂತ್ರಣದ ಬಗ್ಗೆ ಬೈಡನ್ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗನ್ನು ಎದುರಿಸುವುದಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತಿನ ಸಹಾಯ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವಿಶ್ವದಲ್ಲಿ ಆರೋಗ್ಯ ಭದ್ರತೆಯನ್ನು ಹೆಚ್ಚಿಸುವುದು ಹಾಗೂ ಸುಭದ್ರ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಜಪಾನ್‌ನಲ್ಲಿರುವ ನಮ್ಮ ಹೊಸ CDC ಪ್ರಾದೇಶಿಕ ಕಚೇರಿಯು ಕಾರ್ಯ ನಿರ್ವವಹಿಸಲಿದೆ ಎಂದರು.

ಇಂಡೋ-ಪೆಸಿಫಿಕ್ ಆರ್ಥಿಕತೆ ಬಗ್ಗೆ ಬೈಡನ್ ಮಾತು

ಇಂಡೋ-ಪೆಸಿಫಿಕ್ ಆರ್ಥಿಕತೆ ಬಗ್ಗೆ ಬೈಡನ್ ಮಾತು

ಯುಎಸ್ ಮತ್ತು ಜಪಾನ್ ಸೇರಿ ಇತರೆ 11 ರಾಷ್ಟ್ರಗಳೊಂದಿಗೆ ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು(ಎಕಾನಮಿಕ್ ಫ್ರೇಮ್ ವರ್ಕ್)ಅನ್ನು ಪ್ರಾರಂಭಿಸಲಿವೆ. ಅದರ ಅಡಿಯಲ್ಲಿ ಈ ಪ್ರದೇಶದ ನಿಕಟ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುವ ಬದ್ಧತೆಯನ್ನು ಹೊಂದಿದೆ. ಆರ್ಥಿಕ ಸವಾಲುಗಳನ್ನು ಎದುರಿಸಲು ಸ್ಪರ್ಧಾತ್ಮಕತೆ ಖಾತ್ರಿಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. 21ನೇ ಶತಮಾನದ ಡಿಜಿಟಲ್ ಆರ್ಥಿಕತೆಯಲ್ಲಿ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ತಮ್ಮ ಪ್ರಜೆಗಳಿಗೆ ಅಗತ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ಭದ್ರತೆ, ಆಹಾರ ಪೂರೈಕೆಯಲ್ಲಿ ಸ್ಥಿರತೆ ಮತ್ತು ಭ್ರಷ್ಟಾಚಾರ ನಿಯಂತ್ರಿಸುವುದು ಅಗತ್ಯವಾಗಿದೆ," ಎಂದು ಜೋ ಬೈಡನ್ ಹೇಳಿದ್ದಾರೆ.

English summary
what could happen if China invaded Taiwan; Japanese PM Fumio Kishida and US President Joe Biden Explaines in Press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X