ಕೊವಿಡ್-19 ಲಸಿಕೆ ಸಂಶೋಧನೆಯಲ್ಲಿ ಭಾರತದ ಸಹಕಾರ ಕೋರಿದ ಚೀನಾ
ನವದೆಹಲಿ, ನವೆಂಬರ್.17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಬ್ರಿಕ್ಸ್ ರಾಷ್ಟ್ರಗಳೆಲ್ಲ ಒಂದಾಗಬೇಕಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. 12ನೇ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಬ್ರಿಕ್ಸ್ ಸಮ್ಮೇಳನ: ಭಯೋತ್ಪಾದನೆ ವಿರುದ್ಧ ಮೋದಿ ಗುಡುಗು
ಇಡೀ ವಿಶ್ವವನ್ನು ಕಾಡುತ್ತಿರುವ ಕೊವಿಡ್-19 ಸೋಂಕಿನ ನಿಯಂತ್ರಣದ ದೃಷ್ಟಿಯಿಂದ ಎಲ್ಲ ರಾಷ್ಟ್ರಗಳ ಸಹಕಾರ ಅತ್ಯಗತ್ಯವಾಗಿದೆ. ಚೀನಾದ ಕಂಪನಿಗಳು ಈಗಾಗಲೇ ಕೊರೊನಾವೈರಸ್ ಸೋಂಕಿನ ಲಸಿಕೆ ಸಂಶೋಧನೆ ಕಾರ್ಯದಲ್ಲಿ ನಿರತವಾಗಿವೆ ಎಂದು ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ವೈದ್ಯಕೀಯ ಪ್ರಯೋಗಗಳಲ್ಲಿ ಚೀನಾ ಕಂಪನಿಗಳು ನಿರತವಾಗಿವೆ. ರಷ್ಯಾ ಮತ್ತು ಬ್ರೆಜಿಲ್ ಕಂಪನಿಗಳ ಜೊತೆಗೆ ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ಜಿನ್ ಪಿಂಗ್ ಹೇಳಿದ್ದಾರೆ.
ಭಾರತದ ಸಹಕಾರ ಕೇಳಿದ ಚೀನಾ:
ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯದಲ್ಲಿ ಬ್ರೆಜಿಲ್ ಮತ್ತು ರಷ್ಯಾದ ಜೊತೆಗೆ ಸೇರಿಕೊಂಡು ನಡೆಸಿರುವ ವೈದ್ಯಕೀಯ ಪ್ರಯೋಗಗಳು ಮೂರನೇ ಹಂತದಲ್ಲಿವೆ. ದಕ್ಷಿಣ ಆಫ್ರಿಕಾ ಮತ್ತು ಭಾರತದ ಜೊತೆಗೆ ವೈದ್ಯಕೀಯ ಪ್ರಯೋಗಗಳನ್ನು ನಡೆಸುವುದಕ್ಕೆ ಸಹಕಾರ ಕೋರಲು ಚೀನಾ ಸಿದ್ಧತೆ ನಡೆಸುತ್ತಿದೆ ಎಂದು ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳು ಯಾವುವು:
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಒಕ್ಕೂಟವನ್ನು ಬ್ರಿಕ್ಸ್ ಎಂದು ಹೆಸರಿಸಲಾಗಿದೆ.