ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟದಲ್ಲಿ ನಮಗೆ ಸುಸ್ತಾಗಿರಬಹುದು, ಆದರೆ ವೈರಸ್‌ಗೆ ಆಗಿಲ್ಲ: WHO

|
Google Oneindia Kannada News

ಜಿನೀವಾ, ನವೆಂಬರ್ 9: ಪ್ರತಿಯೊಬ್ಬರೂ ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಲೇ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯಿಸಸ್ ಕರೆ ನೀಡಿದ್ದಾರೆ.

ವೈರಸ್ ನಿಯಂತ್ರಣದ ಪ್ರಯತ್ನದಲ್ಲಿ ನಾವು ಹೋರಾಡಿ ಹೈರಾಣಾಗಿರಬಹುದು, ಆದರೆ ನಮ್ಮ ಬಗ್ಗೆ ವೈರಸ್‌ಗೆ ಯಾವುದೇ ಸುಸ್ತಾಗಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದು ಸಾಂಕ್ರಾಮಿಕದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆಮತ್ತೊಂದು ಸಾಂಕ್ರಾಮಿಕದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸೋಮವಾರ ಮಾತನಾಡಿದ ಟೆಡ್ರೊಸ್, ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಜೋ ಬೈಡನ್ ಅವರನ್ನು ಆಯ್ಕೆ ಮಾಡಿರುವುದನ್ನು ಶ್ಲಾಘಿಸಿದರು. ಕೊರೊನಾ ವೈರಸ್ ಪಿಡುಗನ್ನು ಅಂತ್ಯಗೊಳಿಸುವ ಜಾಗತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಬೈಡನ್ ಆಯ್ಕೆ ನೆರವಾಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.

 We Might Be Tired Of Covid-19, But It Is Not Tired Of Us: WHO Chief

ಜನರು ವಿಜ್ಞಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ ಎಂದ ಅವರು, ವೈರಸ್ ವಿಚಾರವಾಗಿ ಕುರುಡುತನ ಪ್ರದರ್ಶಿಸದಂತೆ ಮನವಿ ಮಾಡಿದರು. 'ಕೋವಿಡ್ 19ರಿಂದ ನಾವು ಸುಸ್ತಾಗಿರಬಹುದು, ಆದರೆ ನಮ್ಮಿಂದಾಗಿ ವೈರಸ್ ಹೈರಾಣಾಗಿಲ್ಲ' ಎಂದರು.

ಹೊಸ ಕೋವಿಡ್ ಕೇಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳಹೊಸ ಕೋವಿಡ್ ಕೇಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ದುರ್ಬಲ ಆರೋಗ್ಯದಲ್ಲ ಕೋವಿಡ್ 19 ಅಪಾಯಕಾರಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 'ಅದು ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲ, ಅಸಮಾನತೆ, ವಿಭಜನೆ, ನಿರಾಕರಣೆ, ಕೆಟ್ಟ ಆಲೋಚನೆ ಮತ್ತು ಕಡೆಗಣನೆಯಂತಹ ಇತರೆ ದೌರ್ಬಲ್ಯಗಳನ್ನೂ ಮೂಡಿಸುತ್ತದೆ. ನಾವು ಅದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ. ನಾವು ಕಣ್ಣುಮುಚ್ಚಿ ಅದು ಹೋಗುತ್ತದೆ ಎಂದು ಭಾವಿಸಲಾಗದು' ಎಂದು ಹೇಳಿದರು.

English summary
WHO chief Tedros Ghebreyesus said the world might be tired of Covid 19, But it is not tired of us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X