ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪ ಹತ್ಯೆಯಾಗುತ್ತಾರೆಂದು ಮೊದಲೇ ಗೊತ್ತಿತ್ತು : ರಾಹುಲ್

By Prasad
|
Google Oneindia Kannada News

ಸಿಂಗಪುರ, ಮಾರ್ಚ್ 11 : "ನನ್ನ ಅಜ್ಜಿ ಇಂದಿರಾ ಗಾಂಧಿ ಮತ್ತು ನನ್ನ ತಂದೆ ರಾಜೀವ್ ಗಾಂಧಿಯವರು ಹತ್ಯೆಗೀಡಾಗುತ್ತಾರೆಂದು ನಮ್ಮ (ಗಾಂಧಿ) ಕುಟುಂಬಕ್ಕೆ ಮೊದಲೇ ಗೊತ್ತಿತ್ತು" ಎಂಬ ಹೇಳಿಕೆ ನೀಡಿ ರಾಹುಲ್ ಗಾಂಧಿಯವರು ಬೆಚ್ಚಿಬೀಳಿಸಿದ್ದಾರೆ.

ರಾಜಕೀಯದಲ್ಲಿ ಕೆಟ್ಟ ಶಕ್ತಿಗಳೊಂದಿಗೆ ಸೆಣಸಾಟ ನಡೆಸಿದರೆ, ಮತ್ತು ಆ ಹೋರಾಟವನ್ನು ಸಮರ್ಥಿಸಿಕೊಂಡರೆ ಜೀವ ತೆರಲೇಬೇಕಾಗುತ್ತದೆ. ಅಂಥ ದಿಟ್ಟ ನಿಲುವು ತೆಗೆದುಕೊಂಡಿದ್ದಕ್ಕಾಗಿ ನನ್ನ ಕುಟುಂಬವವರು ಬೆಲೆ ತೆತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ ರಾಹುಲ್.

ನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆ

ಕಳೆದ 5 ದಿನಗಳಿಂದ ಸಿಂಗಪುರದಲ್ಲಿ ಹಲವಾರು ಸಂಘಟನೆಗಳು, ಭಾರತೀಯರು, ಸಿಂಗಪುರದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿರುವ ರಾಹುಲ್ ಅವರು, ತಮ್ಮ ತಂದೆಯ ಹಂತಕರನ್ನು ನಾನು ಮತ್ತು ನನ್ನ ಅಕ್ಕ ಪ್ರಿಯಾಂಕಾ ಗಾಂಧಿ ವದ್ರಾ ಸಂಪೂರ್ಣವಾಗಿ ಮನ್ನಿಸಿದ್ದೇವೆ ಎಂದು ಹೇಳಿದ್ದಾರೆ.

We knew that my father was going to die : Rahul Gandhi

ನಮ್ಮ ತಂದೆಯ ಹತ್ಯೆ (ಮೇ 21, 1991) ನಡೆದ ನಂತರ ಹಲವಾರು ವರ್ಷಗಳ ಕಾಲ ನಾವು ತೀವ್ರ ಘಾಸಿಯಾಗಿದ್ದೆವು, ಹಂತಕರ ಬಗ್ಗೆ ಸಿಟ್ಟು ಮಡುಗಟ್ಟಿತ್ತು. ಆದರೆ, ಕ್ರಮೇಣ ಅದನ್ನೆಲ್ಲ ಮರೆತೆವು, ಹಂತಕರನ್ನು ಮನ್ನಿಸಿದೆವು ಎಂದು ಐಐಎಂ ಅಲಮ್ನಿ ಜೊತೆ ನಡೆಸಿದ ಸಂವಾದವೊಂದರಲ್ಲಿ ರಾಹುಲ್ ಗಾಂಧಿ ಗದ್ಗಿತರಾದರು.

ರಾಹುಲ್ ವೈರಲ್ ವಿಡಿಯೋ ವಿರುದ್ಧ ದಾವೆ ಹೂಡಲು ಹೊರಟ ಲೇಖಕರಾಹುಲ್ ವೈರಲ್ ವಿಡಿಯೋ ವಿರುದ್ಧ ದಾವೆ ಹೂಡಲು ಹೊರಟ ಲೇಖಕ

ನನ್ನ ಅಜ್ಜಿ ನನಗೆ ಮೊದಲೇ ಹೇಳಿದ್ದರು, ನಾನು ಹತ್ಯೆಗೀಡಾಗುತ್ತೇನೆಂದು. ಅದೇ ರೀತಿ ನೀವು ಕೂಡ ಸಾವು ಕಾಣುತ್ತೀರೆಂದು ನಾನು ನನ್ನ ತಂದೆಗೆ ಹೇಳಿದ್ದೆ ಎಂದು ರಾಹುಲ್ ಹಳೆಯ ಗಾಯಗಳನ್ನು ಮತ್ತೆ ಕೆದಕಿದರು. ಶ್ರೀಲಂಕಾ ಎಲ್ಟಿಟಿಇಯಿಂದ ರಾಜೀವ್ ಹತ್ಯೆಗೀಡದರೆ, 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿಯವರು ತಮ್ಮ ಭದ್ರತಾ ಸಿಬ್ಬಂದಿಗಳ ಪಿತೂರಿಯಿಂದಲೇ ಹತ್ಯೆಗೀಡಾದರು.

English summary
AICC president Rahul Gandhi has candidly spoken about the assassination of his father Rajiv Gandhi and his grand-mother Indira Gandhi. He was speaking at an interaction with IIM alumni in Singapore. He said, he knew that some of the other day his family had to pay price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X