ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧದ ಮನಸ್ಥಿತಿ ನಮಗಿಲ್ಲ ಎಂದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

|
Google Oneindia Kannada News

ನ್ಯೂಯಾರ್ಕ್, ಸಪ್ಟೆಂಬರ್.23: ಯಾವುದೇ ದೇಶದೊಂದಿಗೆ ಆದರೂ ಚೀನಾ ಯುದ್ಧವನ್ನು ಮಾಡುವುದಕ್ಕೆ ಬಯಸುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾತನಾಡಿದರು. ಈ ವೇಳೆ "ನಾವು ಯಾವುದೇ ರೀತಿಯ ಸಮರವನ್ನು ಬಯಸುವುದಿಲ್ಲ. ಶೀತಲ ಸಮರವಾಗಲಿ, ಯುದ್ಧವೇ ಆಗಲಿ ಚೀನಾ ಪಾಲಿಗೆ ಅದರ ಅಗತ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.

3 ವರ್ಷದಲ್ಲೇ ಭಾರತದ ಗಡಿಯಲ್ಲಿ 2 ಪಟ್ಟಾಯ್ತು ಚೀನಾದ ಸೇನೆ!3 ವರ್ಷದಲ್ಲೇ ಭಾರತದ ಗಡಿಯಲ್ಲಿ 2 ಪಟ್ಟಾಯ್ತು ಚೀನಾದ ಸೇನೆ!

ಭಾರತ-ಚೀನಾ ನಡುವಿನ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಚೀನಾ ಅಧ್ಯಕ್ಷರು ಈ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡುವುದು ಸಹಜ. ಆದರೆ ಅದನ್ನು ಶಾಂತಿ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಶಾಂತಿ ಮಾತುಕತೆ ಮಂತ್ರ ಜಪಿಸಿದ ಚೀನಾ

ಶಾಂತಿ ಮಾತುಕತೆ ಮಂತ್ರ ಜಪಿಸಿದ ಚೀನಾ

"ಚೀನಾ ಒಂದು ಶಾಂತಿಯುತ, ಮುಕ್ತ, ಸಹಕಾರಿ ಮತ್ತು ಸಾಮಾನ್ಯ ಅಭಿವೃದ್ಧಿಗೆ ಬದ್ಧವಾಗಿರುವ ವಿಶ್ವದ ಅತಿ ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ನಾವು ಎಂದಿಗೂ ಪ್ರಾಬಲ್ಯ, ವಿಸ್ತರಣೆ ಅಥವಾ ಪ್ರಭಾವ ಬೀರುವ ಕಾರ್ಯಕ್ಕೆ ಕೈ ಹಾಕುವವರಲ್ಲ. ಶೀತಲ ಸಮರ ಅಥವಾ ಯಾವುದೇ ದೇಶದೊಂದಿಗೆ ಯುದ್ಧ ಸಾರುವ ಉದ್ದೇಶವೂ ನಮಗಿಲ್ಲ" ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಿಳಿಸಿದ್ದಾರೆ.

ನಮ್ಮ ಅಭಿವೃದ್ಧಿಯೊಂದೇ ನಮ್ಮ ಉದ್ದೇಶವಲ್ಲ

ನಮ್ಮ ಅಭಿವೃದ್ಧಿಯೊಂದೇ ನಮ್ಮ ಉದ್ದೇಶವಲ್ಲ

"ನಾವು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗುವುದಕ್ಕೆ ಬಯಸುತ್ತೇವೆ. ಈ ನಿಟ್ಟಿನಲ್ಲಿ ಶಾಂತಿ ಮಾತುಕತೆ ಮತ್ತು ಸಮಾಲೋಚನೆ ಮೂಲಕ ಬೇರೆ ರಾಷ್ಟ್ರಗಳೊಂದಿಗಿನ ವಿವಾದಗಳನ್ನು ಇತ್ಯರ್ಥಗೊಳಿಸಲು ಬಯಸುತ್ತೇವೆ. ಏಕೆಂದರೆ ನಾವು ನಮ್ಮನ್ನು ಮಾತ್ರ ಅಭಿವೃದ್ಧಿಪಡಿಸಿಕೊಳ್ಳುವುದಕ್ಕಾಗಿ ಶ್ರಮಿಸುವವರಲ್ಲ. ಶೂನ್ಯ ಮೊತ್ತದ ಆಟದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

193 ಸದಸ್ಯ ರಾಷ್ಟ್ರಗಳ ನಾಯಕರ ಭಾಷಣಕ್ಕೆ ಅನುಮತಿ

193 ಸದಸ್ಯ ರಾಷ್ಟ್ರಗಳ ನಾಯಕರ ಭಾಷಣಕ್ಕೆ ಅನುಮತಿ

ವಿಶ್ವದಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಬಹುತೇಕ ರಾಷ್ಟ್ರಗಳ ಆರ್ಥಿಕತೆಗೆ ಕೊವಿಡ್-19 ಭಾರಿ ಹೊಡೆತ ಕೊಟ್ಟಿದೆ. ಈ ಹಿನ್ನೆಲೆ ಮಂಗಳವಾರದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಗತ್ತಿನ 193 ಸದಸ್ಯ ರಾಷ್ಟ್ರಗಳ ನಾಯಕರ ಭಾಷಣಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ತಮ್ಮ ದೇಶದಲ್ಲಿ ಕೊರೊನೊವೈರಸ್ ನಿಂದ ಸೃಷ್ಟಿಯಾಗಿರುವ ಪರಿಸ್ಥಿತಿ ಬಗ್ಗೆ ವಿವರಿಸುವುದಕ್ಕೆ ಅನುಮತಿ ನೀಡಲಾಗಿದೆ.

ವಿಶ್ವದಾದ್ಯಂತ ಕೊವಿಡ್-19 ಅಂಕಿ-ಅಂಶಗಳು

ವಿಶ್ವದಾದ್ಯಂತ ಕೊವಿಡ್-19 ಅಂಕಿ-ಅಂಶಗಳು

ಕೊರೊನಾವೈರಸ್ ಅಟ್ಟಹಾಸಕ್ಕೆ ಭಾರತವಷ್ಟೇ ಅಲ್ಲದೇ ವಿಶ್ವದ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಜಗತ್ತಿನಲ್ಲಿ ಇದುವರೆಗಿನ ಅಂಕಿ ಅಂಶಗಳ ಪ್ರಕಾರ ಮಹಾಮಾರಿಗೆ 9,75,315 ಜನರು ಪ್ರಾಣ ಬಿಟ್ಟಿದ್ದಾರೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 31771441ರಷ್ಟಿದ್ದು, 23386714 ಸೋಂಕಿತರು ಗುಣಮುಖರಾಗಿದ್ದಾರೆ.

English summary
We Has No Intention To Fight a war, Hot Or Cold: China President Xi Jinping Say's At UNGA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X