• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಲು ಹೃದಯವನ್ನು ಕರಗಿಸಬಲ್ಲ ಚರಮಗೀತೆ ವಿಡಿಯೋ

By Mahesh
|

ಲಾಸ್ ಏಂಜಲೀಸ್, ನ.14: ಕಲ್ಲು ಹೃದಯವನ್ನು ಕರಗಿಸಬಲ್ಲಂಥ ವಿಡಿಯೋ ತುಣುಕೊಂಡು ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಕ್ರಿಸ್ ಎಂಬುವರ ಪತ್ನಿ ಶಿಶುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ ನಂತರ ನವಜಾತ ಶಿಶು ಕೂಡಾ ಮರಣ ಶಯ್ಯೆಯಲ್ಲಿರುತ್ತದೆ. ಶಿಶುವಿಗಾಗಿ ಕ್ರಿಸ್ ಚರಮಗೀತೆ ಹಾಡುತ್ತಾನೆ.

ಅವಧಿಗೂ ಮುನ್ನ ಜನಸಿದ ಮಗು ಮರಣ ಹೊಂದುವುದು ಖಾತ್ರಿಯಾಗುತ್ತಿದ್ದಂತೆ ಕ್ರಿಸ್ ಪಿಕ್ಕೋ ಹೃದಯ ಒಡೆದಿದೆ. ಪತ್ನಿಯನ್ನು ಕಳೆದುಕೊಂಡಿದ್ದ ಕ್ರಿಸ್ ತನ್ನ ಕಣ್ಮುಂದೆ ಮಗು ಸಾಯುವುದನ್ನು ನೋಡಬೇಕಾದ ದಾರುಣ ಸ್ಥಿತಿಯಲ್ಲಿರುತ್ತಾನೆ.

ತನ್ನ ಶಿಶುವಿಗಾಗಿ ಚರಮಗೀತೆ ಹಾಡಲು ಕ್ರಿಸ್ ನಿರ್ಧರಿಸುತ್ತಾನೆ. ಐಸಿಯುನಲ್ಲಿದ್ದ ಮಗುವಿನ ಬಳಿ ತೆರಳಿ ಗಿಟಾರ್ ತೆಗೆದು ಬೀಟಲ್ಸ್ ನ ಬ್ಲಾಕ್ ಬರ್ಡ್ ಸಾಂಗ್ ನುಡಿಸುತ್ತಾ ಹಾಡಲು ಮುಂದಾಗುತ್ತಾನೆ. ಇದೇ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. [ನಾಲ್ವರ ಪ್ರಾಣ ಉಳಿಸಿ ತಾನೇ ಕೊಚ್ಚಿಹೋದ ದುರ್ದೈವಿ]

ನವೆಂಬರ್ 8ರಂದು ಸೀ ಸೆಕ್ಷನ್ ಗೆ ಒಳಪಟ್ಟ ಕ್ರಿಸ್ ಪಿಕೋ ಪತ್ನಿ ಆಶ್ಲೆ ಎಲಿಜಬೇತ್(ವುಡ್) ಪಿಕ್ಕೋ(30)ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಕ್ರಿಸ್ ತನ್ನ ಮಗುವಿಗೆ ಲೆನ್ನಾನ್ ಎಂದು ಹೆಸರಿಡುತ್ತಾನೆ. 24 ವಾರಗಳ ವಯಸ್ಸಿನ ಲೆನ್ನಾನ್ ಆಯಸ್ಸು ಮೂರು ದಿನಗಳು ಮಾತ್ರ ಎಂದು ತಿಳಿಯುತ್ತದೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ಲಾಸ್ ಏಂಜಲೀಸ್ ನ ಲೋಮಾ ಲಿಂಡಾ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಲೆನ್ನಾನ್ ನ.11ರಂದು ಸಾವನ್ನಪ್ಪಿದ್ದಾನೆ. ಇಂಕ್ಯೂಬೇಟರ್ ನಲ್ಲಿದ್ದ ಮಗು ಲೆನ್ನಾನ್ ಬಳಿ ತಂದೆ ಕ್ರಿಸ್ ಹಾಡಿರುವ ವಿಡಿಯೋ ಸದ್ಯಕ್ಕೆ 5,236,028 ಸಲ ವೀಕ್ಷಣೆ ಪಡೆದುಕೊಂಡಿದೆ. [ಫಾದರ್ಸ್ ಡೇ ಹಿ(ಮಿ)ಷ್ಟರಿ ಬಹಿರಂಗ]

ಲೆನ್ನಾನ್ ಜೇಮ್ಸ್ ಪಿಕ್ಕೋ ಹೆಸರಿನಲ್ಲಿ ಕ್ರಿಸ್ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ್ದಾರೆ. ಹೆಚ್ಚಿನ ವಿವರಣೆಗಳನ್ನು ಈ ವೆಬ್ ತಾಣದಲ್ಲಿ ಪಡೆಯಬಹುದು. ಮಗ ಲೆನ್ನಾನ್ ಗಾಗಿ ಕ್ರಿಸ್ ಹಾಡಿರುವ ಚರಮಗೀತೆ ವಿಡಿಯೋ ಇಲ್ಲಿದೆ ನೋಡಿ..

English summary
A heartbreaking video of a man singing a Beatles song to his dying newborn baby, after the mother passed away during labor, has gone viral online. Chris Picco took a guitar into the neo-natal ward to sing "Blackbird" to his son Lennon, born prematurely by emergency Caesarian section last weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X