ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಗ್ರಾಸ ಸೂರ್ಯಗ್ರಹಣ ಕುಳಿತಲ್ಲಿಯೆ ನೋಡ್ಕಂಡ್ ಬನ್ನಿ

|
Google Oneindia Kannada News

ಬೆಂಗಳೂರು, ಮಾರ್ಚ್ ,09: ಸೂರ್ಯ ಗ್ರಹಣವನ್ನು ನೋಡಲು ಸಾಧ್ಯವಾಗದಿದ್ದರೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ನಿಮ್ಮನ್ನು ನಿರಾಸೆ ಮಾಡುತ್ತಿಲ್ಲ. ಗ್ರಹಣದ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಟ್ಟಿದೆ.

ಭಾರತದಲ್ಲಿ ಎಷ್ಟೋ ಕಡೆ ಸೂರ್ಯಗ್ರಹಣ ನೋಡಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿಯೂ ಸರಿಯಾಗಿ ಗೋಚರವಾದಂತೆ ಕಂಡುಬಂದಿಲ್ಲ. ಬೆಳಗ್ಗೆ ಸೂರ್ಯ ಉದಯದ ವೇಳೆಗೆ ಗ್ರಹಣ ಹಿಡಿದುಕೊಂಡಿದ್ದರಿಂದ ಹಾಗೆ ಭಾಸವಾಗಿರಲುಬಹುದು.[ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು]

solar eclipse

ಬುಧವಾರ ಮುಂಜಾನೆ 5.46ಕ್ಕೆ ಆರಂಭವಾದ ಗ್ರಹಣ ಬೆಳಗಿನ ಜಾವ 6.47ಕ್ಕೆ ಅಂತ್ಯವಾಯಿತು. ಆಗ್ನೇಯ ಏಷ್ಯಾ ಭಾಗದ ಜನರು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದರು. ಹವಾಯಿ, ಗುವಾಂ ಮತ್ತು ಅಲಾಸ್ಕಾ ಸೇರಿದಂತೆ ಏಷ್ಯಾ ಮತ್ತು ಪೆಸಿಫಿಕ್‌ನ ಹಲವು ರಾಷ್ಟ್ರಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಂಡಿತು.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ನಾಸಾ ತನ್ನ ಫೇಸ್ ಬುಕ್ ಮತ್ತು ಟ್ವಿಟ್ಟರ್ ಪೇಜ್ ಗಳ ಮೂಲಕ ಗ್ರಹಣವನ್ನು ಪ್ರಸಾರ ಮಾಡಿತು. ಪ್ರಪಂಚದ ಕೋಟ್ಯಂತರ ಜನ ಕುಳಿತಲ್ಲಿಯೇ ನಾಸಾದ ಸಹಕಾರದಲ್ಲಿ ಗ್ರಹಣ ವೀಕ್ಷಣೆ ಮಾಡಿದರು. ನೀವು ಸಂಪೂರ್ಣ ಸೂರ್ಯ ಗ್ರಹಣವನ್ನು ನೋಡಿಕೊಂಡು ಬನ್ನಿ...

ನಾಸಾ ಸಹಕಾರದಲ್ಲಿ ಗ್ರಹಣದ ಸಂಪೂರ್ಣ ಚಿತ್ರಣ ನೋಡಿ


ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕಂಡು ಬಂದ ಸೂರ್ಯಗ್ರಹಣದ ವಿವಿಧ ದೃಶ್ಯಾವಳಿಗಳು.



ಮೊಬೈಲ್ ಫೋನ್ ನ ಕ್ಯಾಮಾರಾದಲ್ಲಿ ಸೆರೆಯಾದ ಸೂರ್ಯ.. ಎದುರಿಗೆ ಚಂದ್ರ ಹಾದುಹೋಗುತ್ತಿದ್ದಾನೆ.


ಸುರಕ್ಷತಾ ಕ್ರಮ ಅನುಸರಿಸಿ ಸೂರ್ಯ ಗ್ರಹಣದ ಸೌಂದರ್ಯ ಸವಿದ ಮಕ್ಕಳು. ಗ್ರಹಣದ ವಿವಿಧ ಚಿತ್ರಣ


ಅಮೆರಿಕದ ಬೊಟಾನಿಕ್ ಗಾರ್ಡನ್ ಬಳಿ ಕಂಡು ಬಂದ ಗ್ರಹಣ ಕಾಲದ ಸೂರ್ಯ

English summary
National Aeronautics and Space Administration (NASA) showcased total solar eclipse in their webcast. Million of people watched the solar eclipse through online. Here are some of the most spectacular photos and Video. In Indonesia people watched moon blocked sun. You must enjoy the beauty of solar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X