ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷರ ಮೆದುಳೇ ಬೇರೆ ಮಹಿಳೆಯ ಮೆದುಳು ಬೇರೆ

By Srinath
|
Google Oneindia Kannada News

Washington men women brains differs- So their ability different
ವಾಷಿಂಗ್ಟನ್, ಡಿ.4: ಪುರುಷರ ಯೋಚನೆ/ ಆಲೋಚನೆಗಳೇ ಬೇರೆ; ಮಹಿಳೆಯರದ್ದೇ ಬೇರೆ. ಇನ್ನು ಪುರುಷರ ಯೋಚನಾ ಸಾಮರ್ಥ್ಯಕ್ಕೂ, ಮಹಿಳೆಯ ಯೋಚನಾ ಸಾಮರ್ಥ್ಯಕ್ಕೂ ಅಜಗಜಾಂತರವಿದ್ದು, ಅದಕ್ಕೆ ಮೆದುಳಿನ ರಚನೆಯೇ ಕಾರಣ ಎಂದು ಸಂಶೋಧಕರು ಮೆದುಳಿಗೆ ಕೈಹಾಕಿದ್ದಾರೆ.

ಪುರುಷ ಮತ್ತು ಮಹಿಳೆ ಒಂದೇ ಕಾಲದಲ್ಲಿ ಒಂದೇ ಕೆಲಸ ಮಾಡುವಾಗ ಅವರ ಮೆದುಳು ಭಾಗಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅವು ಭಿನ್ನವಾಗಿರುತ್ತವೆ. ಮಹಿಳೆಯರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲಾರರು. ಆದರೆ ಮೆದುಳಿನ ಸಂಪರ್ಕ ಭಿನ್ನವಾಗಿರುವುದರಿಂದ ಅವರಿಗೆ ನೆನಪಿನ ಶಕ್ತಿ ಉತ್ತಮವಾಗಿದೆ ಎಂದು ನೂತನ ಸಂಶೋಧನೆ ಹೇಳಿದೆ.

ಪುರುಷರಲ್ಲಿ gray matter ಎಂಬುದು ಮಹಿಳೆಯರದ್ದಕ್ಕಿಂತ 6 ಪಟ್ಟು ಹೆಚ್ಚಾಗಿರುತ್ತದೆ. ಇದು ಮಾಹಿತಿ ಸಂಸ್ಕರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಅದೇ ಮಹಿಳೆಯರಲ್ಲಿ white matter ಎಂಬುದು ಪುರುಷರದ್ದಕ್ಕಿಂತ 10 ಪಟ್ಟು ಹೆಚ್ಚಾಗಿರುತ್ತದೆ. ಇದು ಇಡೀ ಮೆದುಳಿನ ಜಾಲ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಮತ್ತೊಂದು ಪ್ರಧಾನ ಅಂಶವೂ ಸಂಶೋಧನೆಯಿಂದ ತಿಳಿದುಬಂದಿದೆ. ಏನಪ್ಪಾ ಅಂದರೆ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇದ್ದರೆ ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ಹೆಚ್ಚು ಸಂತೋಷದಿಂದ ಇರುತ್ತಾರೆ. ಅದೇ ಪ್ರತ್ಯತೇಕವಾಗಿ ಏಕಾಂಗಿಯಾಗಿದ್ದರೆ ಅವರಲ್ಲಿ ಸಂತೋಷ ಅಷ್ಟಕ್ಕಷ್ಟೇ!

ಅವರಿಬ್ಬರ ಮಧ್ಯೆ ಮದುವೆಯಂತಹ ಗಟ್ಟಿ ಸಂಬಂಧಗಳು ಇದ್ದರಂತೂ ಇಬ್ಬರೂ ನಿಜಕ್ಕೂ ಅಪಾರ ಸಂತೋಷಿಗಳೇ ಸರಿ. ಅದಕ್ಕೇ ಹೇಳೋದು ಮದುವೆಯಾದವರು ಹೆಚ್ಚು ಸುಖಿ/ ಸಂತೋಷಿಗಳು ಎಂದು. ಅದೇ ಮದುವೆಯಾಗದವರಲ್ಲಿ ಸ್ವಸಾಮರ್ಥ್ಯ ಕ್ಷೀಣವಾಗಿರುತ್ತದೆ. ಜೀವನ ತೃಪ್ತಿ ಕಡಿಮೆಯಾಗಿರುತ್ತದೆ. ಸಂತೋಷ ಕಡಿಮೆಯಾಗಿರುತ್ತದೆ! ವ್ಯಾಕುಲತೆ ಹೆಚ್ಚಾಗಿರುತ್ತದೆ!! ಬ್ರಹ್ಮಾಚಾರಿಗಳಿಗೆ ಇದು ಅರ್ಥವಾಯಿತಾ?

ಅಂದಹಾಗೆ, ಭಾರತೀಯ ಮೂಲದ ವಿಜ್ಞಾನಿಯೊಬ್ಬರ ನೇತೃತ್ವದಲ್ಲಿ ನಡೆದ ನೂತನ ಅಧ್ಯಯನದಿಂದ ಈ ಅಂಶಗಳು ತಿಳಿದುಬಂದಿವೆ. ಪುರುಷ ಮತ್ತು ಮಹಿಳೆಯರ ನರಜೋಡಣೆಯಲ್ಲಿ ಗಮನಾರ್ಹ ಭಿನ್ನತೆಗಳಿರುವುದನ್ನು ಸಂಶೋಧನೆ ಪತ್ತೆ ಹಚ್ಚಿದೆ.

ಕೆಲ ಕೆಲಸಗಳಲ್ಲಿ ಪುರುಷರು ಹಾಗೂ ಬೇರೆ ಕೆಲ ಕೆಲಸಗಳಲ್ಲಿ ಮಹಿಳೆಯರು ಏಕೆ ಶ್ರೇಷ್ಠರಾಗಿರುತ್ತಾರೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪೆರಲ್ಮನ್ ಸ್ಕೂಲ್ ಆಫ್ ಮೆಡಿಸಿನ್‌ ರೇಡಿಯೋಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ರಾಗಿಣಿ ವರ್ಮ ಈ ಸಂಶೋಧನೆಯ ನೃತೃತ್ವ ವಹಿಸಿದ್ದರು. ಪುರುಷರಲ್ಲಿ ಮುಂಭಾಗದಿಂದ ಹಿಂಭಾಗದವರೆಗೆ ಹಾಗೂ ಒಂದೇ ಅರ್ಧ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನರಗಳ ಜೋಡಣೆಯಾಗಿರುವುದನ್ನು ಸಂಶೋಧನಾ ತಂಡ ಪತ್ತೆಹಚ್ಚಿತು.

ವಿಷಯವನ್ನು ಗ್ರಹಿಸುವ ಹಾಗೂ ಸಮನ್ವಯತೆಯಿಂದ ಕೆಲಸ ಮಾಡುವ ವಿಭಾಗಗಳ ನಡುವೆ ನರಗಳ ಹೆಚ್ಚಿನ ಜೋಡಣೆಯಿರುವಂತೆ ಪುರುಷರ ಮೆದುಳು ರಚನೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಹಿಳೆಯರಲ್ಲಿ ಎಡ ಮತ್ತು ಬಲ ಅರ್ಧಗಳ ನಡುವೆ ನರಗಳ ಜೋಡಣೆಯಾಗಿದೆ. ಇದು ವಿಶ್ಲೇಷಣೆ ಮತ್ತು ಒಳ ಅರಿವು ವಿಭಾಗಳ ನಡುವೆ ಹೆಚ್ಚಿನ ಸಂಪರ್ಕ ಏರ್ಪಡಿಸುತ್ತದೆ.

English summary
Washington researchers have found proof that men and women are different. Because their brains differ- So their ability also differs. A man’s brain and a woman’s brain really do work differently. Sometimes males and females would perform the same tasks and show different brain activation. Men and women are happier with each other, rather than alone. And the stronger the relationship’s commitment, the greater the happiness and sense of well-being of the partners, the analysis found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X