ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?

|
Google Oneindia Kannada News

ಪ್ಯಾರಿಸ್, ಮೇ 5: ಲಕ್ಷಾಂತರ ಮಂದಿಯ ಜೀವ ಹಿಂಡುತ್ತಿರುವ ಮಾರಣಾಂತಿಕ ನೋವೆಲ್ ಕೊರೊನಾ ವೈರಸ್ ಕುರಿತಾದ ಮೊಟ್ಟ ಮೊದಲ ಪ್ರಕರಣ ದಾಖಲಾಗಿದ್ದು ಚೀನಾದಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಚೀನಾದಲ್ಲಿ ದಾಖಲಾಗುವ ಮುನ್ನವೇ ಕೊರೊನಾ ವೈರಸ್ ಸದ್ದಿಲ್ಲದೆ ಇತರೆ ದೇಶಗಳಲ್ಲೂ ಕಾಣಿಸಿಕೊಂಡಿತ್ತೇ?

Recommended Video

ಬೇರೆ ರಾಜ್ಯಗಳ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಬೆಂಗಳೂರು ಕಮಿಷನರ್ ಹೇಳಿದ್ದೇನು? | Bhaskar Rao | Bengaluru

ಫ್ರಾನ್ಸ್ ನಲ್ಲಿ ಕೋವಿಡ್-19 ಪಾಸಿಟಿವ್ ಕೇಸ್ ಗಳು 'ಅಧಿಕೃತ'ವಾಗಿ ಪತ್ತೆಯಾಗಿದ್ದು ಜನವರಿ ಅಂತ್ಯದಲ್ಲಿ. ಆದ್ರೀಗ ನೀವೆಲ್ಲ ಬೆಚ್ಚಿ ಬೀಳುವ ಅಂಶವೊಂದು ಅಧ್ಯಯನವೊಂದರಿಂದ ಬಹಿರಂಗವಾಗಿದೆ. ಡಿಸೆಂಬರ್ ತಿಂಗಳಲ್ಲೇ ಫ್ರಾನ್ಸ್ ನಲ್ಲಿ ಕೊರೊನಾ ವೈರಸ್ ಹರಡಲು ಆರಂಭಿಸಿತ್ತು ಎಂಬ ಶಾಕಿಂಗ್ ಸಂಗತಿ ಅಧ್ಯಯನದಿಂದ ತಿಳಿದುಬಂದಿದೆ.

ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!

ಹಾಗಾದ್ರೆ, ಚೀನಾದಲ್ಲಿ 'ಅಧಿಕೃತ'ವಾಗಿ ಪತ್ತೆಯಾಗುವ ಮುನ್ನವೇ ಕೊರೊನಾ ವೈರಸ್ ಯೂರೋಪ್ ನಲ್ಲಿತ್ತಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಮುಂದಾಗಿದ್ದಾರೆ. ಕೊರೊನಾ ವೈರಸ್ ಜನ್ಮ ರಹಸ್ಯವನ್ನು ಕಂಡುಹಿಡಿಯುವ ಜೊತೆಗೆ 'ಪೇಷೆಂಟ್-0' ಯಾರು ಎಂಬುದನ್ನು ವಿಜ್ಞಾನಿಗಳು ಹುಡುಕಾಡುತ್ತಿದ್ದಾರೆ. ವಿಶ್ವದಾದ್ಯಂತ ತನ್ನ ಕಬಂದಬಾಹು ಚಾಚಿರುವ ಕೊರೊನಾ ವೈರಸ್ 'ಫ್ಯಾಮಿಲಿ ಟ್ರೀ'ಯನ್ನು ಪತ್ತೆ ಹಚ್ಚಲು ಅನುವಂಶಿಕ ಪತ್ತೇದಾರಿ ಕಾರ್ಯಕ್ಕೆ ವಿಜ್ಞಾನಿಗಳು ಚಾಲನೆ ನೀಡಿದ್ದಾರೆ.

ಡಿಸೆಂಬರ್ ನಲ್ಲೇ ಫ್ರಾನ್ಸ್ ನಲ್ಲಿ ಕೊರೊನಾ!

ಡಿಸೆಂಬರ್ ನಲ್ಲೇ ಫ್ರಾನ್ಸ್ ನಲ್ಲಿ ಕೊರೊನಾ!

ಜನವರಿ ಅಂತ್ಯದ ವೇಳೆಗೆ ಫ್ರಾನ್ಸ್ ನಲ್ಲಿ ಕೋವಿಡ್-19 ಕೇಸ್ ಗಳು ಪತ್ತೆಯಾದವು. ಆದ್ರೀಗ, ಇಂಟರ್ ನ್ಯಾಷನಲ್ ಜರ್ನಲ್ ಆಫ್ Anti-microbial ಏಜೆಂಟ್ಸ್ ಪ್ರಕಟ ಮಾಡಿರುವ ಅಧ್ಯಯನದ ಪ್ರಕಾರ ಡಿಸೆಂಬರ್ ತಿಂಗಳಲ್ಲೇ ಫ್ರಾನ್ಸ್ ನಲ್ಲಿ ನೋವೆಲ್ ಕೊರೊನಾ ವೈರಸ್ ಇತ್ತು.!

ಸೋಂಕಿನ ಮೊದಲ ಪ್ರಕರಣ

ಸೋಂಕಿನ ಮೊದಲ ಪ್ರಕರಣ

ಪ್ಯಾರಿಸ್ ನಲ್ಲಿರುವ Avicenne ಮತ್ತು Jean-Verdier ಆಸ್ಪತ್ರೆಗಳಲ್ಲಿ Influenza ರೋಗದ ಲಕ್ಷಣಗಳನ್ನು ಹೊಂದಿದ್ದ, ಐ.ಸಿ.ಯು ನಲ್ಲಿ ದಾಖಲಾಗಿದ್ದ 14 ರೋಗಿಗಳ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ ಒಬ್ಬರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡುಬಂದಿದೆ. ಸೋಂಕಿತ 42 ವರ್ಷದ ಫ್ರಾನ್ಸ್ ಪ್ರಜೆಯಾಗಿದ್ದು, ಆತ ಚೀನಾಗೆ ಪ್ರಯಾಣ ಬೆಳೆಸಿರಲಿಲ್ಲ. ಅಸಲಿಗೆ, ಆ ವ್ಯಕ್ತಿ ರೋಗ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು ಯಾವಾಗ ಗೊತ್ತಾ.? ಡಿಸೆಂಬರ್ 27 ರಂದು.!

ವುಹಾನ್ ಲ್ಯಾಬ್ ನಲ್ಲೇ ಕೊರೊನಾ ಜನ್ಮ: 'ಸಾಕ್ಷಿ' ಇದೆ ಎಂದ ಡೊನಾಲ್ಡ್ ಟ್ರಂಪ್!ವುಹಾನ್ ಲ್ಯಾಬ್ ನಲ್ಲೇ ಕೊರೊನಾ ಜನ್ಮ: 'ಸಾಕ್ಷಿ' ಇದೆ ಎಂದ ಡೊನಾಲ್ಡ್ ಟ್ರಂಪ್!

ಸೈಲೆಂಟ್ ಆಗಿ ಹಬ್ಬಿತೇ ಕೊರೊನಾ?

ಸೈಲೆಂಟ್ ಆಗಿ ಹಬ್ಬಿತೇ ಕೊರೊನಾ?

''ವೈರಾಣು ಮೊದಲು ಸೈಲೆಂಟ್ ಆಗಿ ಜನರಲ್ಲಿ ಪಸರಿಸುತ್ತದೆ. ಅದರ ಉಪಸ್ಥಿತಿಯನ್ನು ಯಾರೂ ಪತ್ತೆ ಮಾಡಲಾಗುವುದಿಲ್ಲ'' ಎಂಬ ವಿಜ್ಞಾನಿಗಳ ಮಾತಿಗೆ ''ಫ್ರಾನ್ಸ್ ನಲ್ಲಿ ಡಿಸೆಂಬರ್ ನಲ್ಲೇ ಸೋಂಕು ಪತ್ತೆಯಾಗಿರುವುದು ಸಾಕ್ಷಿ'' ಅಂತ Avicenne ನಲ್ಲಿನ ಇನ್ಫೆಕ್ಷಿಯಸ್ ಡಿಸೀಸ್ ಡಿಪಾರ್ಟ್ಮೆಂಟ್ ನ Olivier Bouchaud ಹೇಳಿದ್ದಾರೆ.

ಕೊರೊನಾ ಬಗ್ಗೆ ಜಗತ್ತಿಗೆ ಇನ್ನೂ ಗೊತ್ತಿರಲಿಲ್ಲ

ಕೊರೊನಾ ಬಗ್ಗೆ ಜಗತ್ತಿಗೆ ಇನ್ನೂ ಗೊತ್ತಿರಲಿಲ್ಲ

ಜನವರಿಯ ಆರಂಭದಲ್ಲಿ 57 ವರ್ಷದ ವೈದ್ಯಕೀಯ ಕಾರ್ಯದರ್ಶಿ ಐಷಾ ತೀವ್ರ ಉಸಿರಾಟದ ತೊಂದರೆಯಿಂದ Merseille ನಲ್ಲಿನ ಆಸ್ಪತ್ರೆಗೆ ದಾಖಲಾದರು. ಆ ಸಮಯದಲ್ಲಿ ಚೀನಾದ ವುಹಾನ್ ನಲ್ಲಿನ್ನೂ 'ನಿಗೂಢ ನ್ಯೂಮೋನಿಯಾ' ಮಾದರಿಯ ಪ್ರಕರಣಗಳು ದಾಖಲಾಗುತ್ತಿದ್ದವು. ಅದಕ್ಕೆ 'ಕೋವಿಡ್-19' ಎಂದು ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಹೆಸರು ನೀಡಿರಲಿಲ್ಲ. ''ಐಷಾಗೆ ಕೋವಿಡ್-19 ರೋಗದ ಎಲ್ಲಾ ಲಕ್ಷಣಗಳು ಕಂಡುಬಂದಿತ್ತು. ರುಚಿ ಮತ್ತು ವಾಸನೆ ಕಂಡುಹಿಡಿಯುವ ಸಾಮರ್ಥ್ಯವನ್ನೂ ಆಕೆ ಕಳೆದುಕೊಂಡಿದ್ದಳು. ಆದರೆ, ಪರೀಕ್ಷೆಗಳ ಫಲಿತಾಂಶ ಆಗ ನಿರ್ದಿಷ್ಟವಾಗಿ ಕಂಡುಬರಲಿಲ್ಲ'' ಎನ್ನುತ್ತಾರೆ ಐಷಾ ಪತಿ ಜ್ಯಾಕ್ಸ್.

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

ಶವಪರೀಕ್ಷೆಯಲ್ಲಿ ಕಂಡುಬಂದಿದ್ದೇನು?

ಶವಪರೀಕ್ಷೆಯಲ್ಲಿ ಕಂಡುಬಂದಿದ್ದೇನು?

ಇನ್ನೂ ಯು.ಎಸ್.ಎ ನಲ್ಲಿ ಜನವರಿ 21 ರಂದು ಮೊಟ್ಟ ಮೊದಲ ಕೋವಿಡ್-19 ಪ್ರಕರಣ ದಾಖಲಾಯಿತು. ಆದರೆ, ಅದಕ್ಕೂ ಮುನ್ನ ಕ್ಯಾಲಿಫೋರ್ನಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದವರ ಶವಪರೀಕ್ಷೆಗಳಲ್ಲಿ 'ಕೊರೊನಾ ಸೋಂಕು' ಇರುವ ಅಂಶ ಬೆಳಕಿಗೆ ಬಂದಿದೆ.

ಇಟಲಿಯಲ್ಲೂ ವರ್ಷಾರಂಭದಲ್ಲೇ ಕೊರೊನಾ

ಇಟಲಿಯಲ್ಲೂ ವರ್ಷಾರಂಭದಲ್ಲೇ ಕೊರೊನಾ

ಇಟಲಿಯಲ್ಲಿ ಮೊಟ್ಟ ಮೊದಲ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದಿದ್ದು ಫೆಬ್ರವರಿ 20 ರಂದು. ಆದ್ರೆ, ಅಧ್ಯಯನದ ಪ್ರಕಾರ, ಜನವರಿಯಲ್ಲೇ ಲೊಂಬಾರ್ಡಿಗೆ ಕೊರೊನಾ ವೈರಸ್ ಕಾಲಿಟ್ಟಿತ್ತು. ''ಜನವರಿಯ ಆರಂಭದಲ್ಲೇ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ನಮ್ಮನ್ನ ಬಾಧಿಸಿತ್ತು'' ಎಂದು ಇಂಟರ್ ಮಿಲಾನ್ ನ ಫುಟ್ಬಾಲ್ ಆಟಗಾರರು ಹೇಳಿದ್ದಾರೆ. ಆದರೆ ಆ ಸಮಯದಲ್ಲಿ ಕೊರೊನಾ ವೈರಸ್ ಬಗ್ಗೆ ಜಗತ್ತಿಗೆ ಇನ್ನೂ ತಿಳಿದಿರಲಿಲ್ಲ. ಹೀಗಾಗಿ, ವೈರಾಣು ಪರೀಕ್ಷೆ ನಡೆಸಲಿಲ್ಲ. ಈಗ ಪರೀಕ್ಷೆ ಮಾಡಿದರೂ ಸೋಂಕಿನ ಗುರುತು ಸಿಗುವುದಿಲ್ಲ. ಹಾಗಾದ್ರೆ, ಜನವರಿ ಆರಂಭದಲ್ಲೇ ಫುಟ್ಬಾಲ್ ಆಟಗಾರರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತೇ.? ''ಸ್ಪಷ್ಟ ಉತ್ತರ ನೀಡುವುದು ಕಷ್ಟ'' ಅಂತಾರೆ ಸಂಶೋಧಕರು.

ಚೀನಾದಲ್ಲಿ ಪ್ರಕರಣ ಕಂಡುಬಂದಿದ್ದು ಯಾವಾಗ.?

ಚೀನಾದಲ್ಲಿ ಪ್ರಕರಣ ಕಂಡುಬಂದಿದ್ದು ಯಾವಾಗ.?

ಡಿಸೆಂಬರ್ 8 ರಂದು ಚೀನಾದಲ್ಲಿ ಆರಂಭಿಕ ಪ್ರಕರಣಗಳ ಬಗ್ಗೆ ವುಹಾನ್ ಆರೋಗ್ಯ ಅಧಿಕಾರಿಗಳು ಮಾತನಾಡಿದ್ದರು. ಅಧ್ಯಯನ ಪ್ರಕಾರ, ವುಹಾನ್ ನಲ್ಲಿನ ಮೊದಲ ಸೋಂಕಿತನಿಗೆ ಡಿಸೆಂಬರ್ 1 ರಿಂದ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು.

ರೂಪಾಂತರ ಹೊಂದುವ ವೈರಸ್

ರೂಪಾಂತರ ಹೊಂದುವ ವೈರಸ್

ಇಲ್ಲಿಯವರೆಗೂ ಹೊಸ ಕೊರೊನಾ ವೈರಸ್ ನ 15,000 ಕ್ಕೂ ಹೆಚ್ಚು ಮಾದರಿಯ ಜೀನೋಮ್ ಗಳನ್ನು ಅನುಕ್ರಮಿಸಲಾಗಿದೆ. ''ಅನುವಂಶಿಕ ಅನುಕ್ರಮದಲ್ಲಿ ತಿಂಗಳಲ್ಲಿ ಎರಡು ಬಾರಿ ವೈರಾಣು ರೂಪಾಂತರ ಹೊಂದಲಿದೆ. ಎರಡು ವೈರಾಣುಗಳನ್ನು ಹೋಲಿಸಿದರೆ, ಎಷ್ಟು ರೂಪಾಂತರಗಳು ಅವುಗಳನ್ನು ಬೇರ್ಪಡಿಸುತ್ತವೆ ಎಂಬುದು ಗೊತ್ತಾಗಲಿದೆ. ಇದೇ ಚೇನ್ ಅನುಸರಿಸಿದರೆ ಎಲ್ಲಾ ಸೋಂಕಿಗೂ ಕಾರಣವಾದ 'Ancestor' ಅನ್ನು ಪತ್ತೆ ಹಚ್ಚಬಹುದು'' ಎಂದು ಆಲಿಝಾನ್ ಹೇಳಿದ್ದಾರೆ.

ವೈರಸ್ ಯಾವಾಗ ಹೊರಹೊಮ್ಮಿರಬಹುದು?

ವೈರಸ್ ಯಾವಾಗ ಹೊರಹೊಮ್ಮಿರಬಹುದು?

ಸಾರ್ವಜನಿಕವಾಗಿ ಹಂಚಿಕೊಂಡ ಜೀನೋಮ್ ಅನುಕ್ರಮಗಳನ್ನು ಬಳಸಿಕೊಂಡು, ಎಡಿನ್ ಬರ್ಗ್ ವಿಶ್ವವಿದ್ಯಾನಿಲಯದ ಆಂಡ್ರ್ಯೂ ರಾಂಬೌಟ್ ''ವೈವಿಧ್ಯತೆಯ ಕೊರತೆಯು ಈ ಎಲ್ಲಾ ವೈರಸ್ ಗಳಿಗೆ ಕಾಮನ್ ಆಗಿರುವ Ancestor ಅನ್ನು ಸೂಚಿಸುತ್ತಿದೆ. ಹೀಗಾಗಿ, ಆ ಮೂಲ Ancestor ವೈರಾಣು 2019, ನವೆಂಬರ್ 17 ರಂದು ಹೊರಹೊಮ್ಮಿರಬಹುದು'' ಎನ್ನುತ್ತಾರೆ.

ವುಹಾನ್ ವೈರಾಣುವಿನ ವಂಶಾವಳಿ

ವುಹಾನ್ ವೈರಾಣುವಿನ ವಂಶಾವಳಿ

''ಡಿಸೆಂಬರ್ ಮತ್ತು ಜನವರಿಯಲ್ಲಿ ವುಹಾನ್ ನಲ್ಲಿ ಸಂಗ್ರಹಿಸಿದ ವೈರಾಣುವಿನ ಅನುವಂಶಿಕ ಅನುಕ್ರಮಗಳು ಬಹುತೇಕ ಒಂದೇ ರೀತಿಯ ಜೀನೋಮ್ ಗಳನ್ನು ಹೊಂದಿವೆ. ಪ್ರಸ್ತುತ ವಿಶ್ವದ ಎಲ್ಲೆಡೆ ಹಬ್ಬಿರುವ ಎಲ್ಲಾ ವೈರಸ್ ಗಳೂ ವುಹಾನ್ ವೈರಾಣುವಿನ ವಂಶಾವಳಿಯೇ ಆಗಿದೆ'' ಎನ್ನುತ್ತಾರೆ ಇಂಪೀರಿಯಲ್ ಕಾಲೇಜಿನ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ವೋಲ್ಜ್.

English summary
Was Covid-19 in France before the first case was recorded in China?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X