• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ- ಪಾಕಿಸ್ತಾನ ಬಾಂಧವ್ಯ ವೃದ್ಧಿ ನಮ್ಮ ಗುರಿ : ಇಮ್ರಾನ್

By Mahesh
|
   ಭಾರತ- ಪಾಕಿಸ್ತಾನ ಬಾಂಧವ್ಯದ ಬಗ್ಗೆ ಮಾತನಾಡಿದ ಇಮ್ರಾನ್ | Oneindia kannada

   ವಇಸ್ಲಾಮಾಬಾದ್, ಜುಲೈ 26: ಪಾಕಿಸ್ತಾನ ಚುನಾವಣೆಯಲ್ಲಿ ಸರ್ಕಾರ ರಚನೆಯ ಹೊಸ್ತಿಲಲ್ಲಿರುವ ಪಿಟಿಐ ಪಕ್ಷದ ಪರವಾಗಿ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಇಮ್ರಾನ್ ಖಾನ್ ಅವರು, ಭಾರತದ ಜತೆ ಉತ್ತಮ ಬಾಂಧವ್ಯ ವೃದ್ಧಿಗೊಳಿಸುವುದು ನಮ್ಮ ಗುರಿ ಎಂದರು.

   ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಪಾಕಿಸ್ತಾನದಲ್ಲಿ ಬಡತನ ಹಾಗೂ ಆರೋಗ್ಯ ಸಮಸ್ಯೆ ಅಧಿಕವಾಗಿದ್ದು, ಇದರತ್ತ ಹೆಚ್ಚಿನ ಗಮನ ಹರಿಸಲಾಗುವುದು. ಭಾರತದ ಜೊತೆ ಚರ್ಚಿಸಿ ಕಾಶ್ಮೀರ ಸಮಸ್ಯೆ ಬಗೆಹರಿಸುವತ್ತ ನಮ್ಮ ನಿಲುವು ಇದೆ ಎಂದರು.

   ಚೀನಾ ಜತೆಗಿನ ಸಂಬಂಧ ಬಗ್ಗೆ ಪ್ರಸ್ತಾಪಿಸಿದ ಇಮ್ರಾನ್ ಖಾನ್, ಚೀನಾದ ದೇಶದ ಅನೇಕ ನೀತಿಗಳನ್ನು ಅಳವಡಿಸಿಕೊಂಡು, ಭಾರತದೊಡನೆ ಚರ್ಚಿಸಬೇಕಿದೆ ಎಂದು ಹೇಳಿದರು.

   ಈ ಕ್ಷಣದ ಫಲಿತಾಂಶದಂತೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ (64), ಪಿಎಂಎಲ್ -ಎನ್ (27), ಪಿಪಿಪಿ (13), ಇತರೆ (13) ರಷ್ಟಿದೆ. ಸರಳ ಬಹುಮತಕ್ಕೆ 137 ಸ್ಥಾನಗಳು ಬೇಕಿದೆ.

   ಇಮ್ರಾನ್ ಖಾನ್ ಸುದ್ದಿಗೋಷ್ಠಿ ಮುಖ್ಯಾಂಶಗಳು:

   * ನಾನು ಅಲ್ಲಾಹ್ ನಿಗೆ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. 22 ವರ್ಷಗಳ ಕಾಲ ಹೋರಾಟಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ನನ್ನ ಕನಸಿನ ಪಾಕಿಸ್ತಾನ ನಿರ್ಮಿಸುವ ಅವಕಾಶ ಸಿಗುತ್ತಿದೆ.

   * ನಾನು ರಾಜಕೀಯ ಪ್ರವೇಶಿಸಬೇಕೆಂಬುದು ಅಲ್ಲಾಹ್ ನ ಆದೇಶವಾಗಿತ್ತು. ನನಗೆ ಎಲ್ಲವನ್ನು ಆತ ನೀಡಿದ್ದಾನೆ. ರಾಜಕೀಯ ಪ್ರವೇಶಿಸುತ್ತಿದ್ದಂತೆ ಮೊಹಮ್ಮದ್ ಅಲಿ ಜಿನ್ನಾ ಅವರ ಕನಸಿನ ಪಾಕಿಸ್ತಾನ ನಿರ್ಮಾಣದ ಗುರಿ ಹೊತ್ತುಕೊಂಡೆ.

   * ಚೀನಾದ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕಾಗಿದೆ. ಬಡತನದ ರೇಖೆಯಲ್ಲಿದ್ದ 70 ಕೋಟಿ ಮಂದಿಯನ್ನು ಆರ್ಥಿಕ ಸುಸ್ಥಿತಿಗೆ ತಂದ ಚೀನಾ ನಮಗೆ ಮಾದರಿ.

   * ಪಾಕಿಸ್ತಾನವನ್ನು ಮದೀನಾ ಮಾದರಿಯಲ್ಲಿ ಅಭಿವೃದ್ಧಿಶೀಲ ಪ್ರದೇಶವನ್ನಾಗಿಸಬೇಕಿದೆ ಪ್ರವಾದಿಗಳ ಕಾಲದ ಆಡಳಿತ ವ್ಯವಸ್ಥೆ ತರಬೇಕಿದೆ.

   * ವ್ಯಾಪಾರ, ವಹಿವಾಟಿನ ಆರ್ಥಿಕ ವೆಚ್ಚವನ್ನು ತಗ್ಗಿಸಬೇಕಿದೆ. ಬಂಡವಾಳ ಹೂಡಿಕೆ ಹಿಗ್ಗಿಸಬೇಕಿದೆ.

   * ಪ್ರಧಾನ ಮಂತ್ರಿಗಳ ನಿವಾಸದಲ್ಲಿ ನೆಲೆಸಲು ನಾನು ಇಚ್ಛೆ ಪಡುವುದಿಲ್ಲ. ಅದನ್ನು ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸುತ್ತೇನೆ. ನಾನು ಬಾದ್ ಶಹಾ ರೀತಿಯಲ್ಲಿ ಜೀವಿಸಲಾರೆ

   * ಭಾರತದ ಮಾಧ್ಯಮಗಳು ನನ್ನನ್ನು ವಿಲನ್ ಎಂಬಂತೆ ಬಿಂಬಿಸಿವೆ. ಸಾಮಾಜಿಕ ನ್ಯಾಯ, ಉತ್ತಮ ಬಾಂಧವ್ಯ,ಶಾಂತಿ ನೆಲೆಸುವುದು ನಮಗೆ ಮುಖ್ಯ.

   English summary
   In his first address to Pakistan after getting massive lead, Imran Khan talked of several key issues facing the nation including poverty and health issues.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X