ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಲ್ಟ್ ಡಿಸ್ನಿ: 250 ಅಮೆರಿಕನ್ನರ ಜಾಗಕ್ಕೆ ಭಾರತೀಯರು

|
Google Oneindia Kannada News

ನ್ಯೂಯಾರ್ಕ್, ಜೂ. 05: ಪ್ರಖ್ಯಾತ ಮನರಂಜನಾ ಸಂಸ್ಥೆ ವಾಲ್ಟ್ ಡಿಸ್ನಿ 250 ಭಾರತೀಯ ಮೂಲದ ಹೆಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳನ್ನು ಹೊಸದಾಗಿ ನೇಮಕ ಮಾಡಿಕೊಂಡಿದೆ.

ಅಮೇರಿಕದ 250 ಜನರ ಜಾಗಕ್ಕೆ ಭಾರತೀಯರ ನೇಮಕವಾದಂತೆ ಆಗಿದೆ. ಇದರಿಂದಾಗಿ ಹೆಚ್‌-1 ಬಿ ವೀಸಾ ಹೊಂದಿರುವ ಭಾರತೀಯರು ಅಮೆರಿಕಾದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು ಅಮೇರಿಕದ ಪ್ರಜೆಗಳು ಆಕ್ರೋಶ ಹೊರಹಾಕಿದ್ದಾರೆ. ಇದೊಂದು ಮೋಸದ ತಂತ್ರ ಎಂದು ಅಮೆರಿಕನ್ನರು ಹೇಳಿದ್ದಾರೆ.[ಎಚ್ 1 ಬಿ ಉಳ್ಳ ದಂಪತಿಗೆ ವರ್ಕ್ ಪರ್ಮಿಟ್]

america

ಕಳೆದ ಅಕ್ಟೋಬರ್‌ನಲ್ಲಿ ಡಿಸ್ನೆ 250 ಜನ ಅಮೆರಿಕನ್ನರನ್ನು ಕೈಬಿಟ್ಟಿತ್ತು. ಹೊಸದಾಗಿ ನೇಮಕ ಮಾಡಿಕೊಂಡ ಭಾರತೀಯರಿಗೆ ಅಮೇರಿಕನ್ನರು ತರಬೇತಿ ನೀಡಬೇಕು ಎಂದು ಸಂಸ್ಥೆ ತಿಳಿಸಿದೆ.[ವೀಸಾ ಆನ್ ಅರೈವಲ್ ಪಡೆದ 43 ದೇಶಗಳ ಪಟ್ಟಿ ನೋಡಿ]

ಭಾರತೀಯ ಮೂಲದವರು ಅಮೆರಿಕನ್ನರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಅಲ್ಲದೇ ಇವರ ಮೇಲೆ ವಿವಿಧ ನಿರ್ಬಂಧಗಳನ್ನು ಸುಲಭವಾಗಿ ಹೇರಬಹುದು. ಹಾಗಾಗಿ ಸಂಸ್ಥೆ ಇಂಥ ಕ್ರಮ ತೆಗೆದುಕೊಂಡಿದೆ ಎಂದು ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ವಿಶ್ಲೇಷಣೆ ಮಾಡಿದೆ.

ಅಮೆರಿಕನ್ನರ ಬದಲಿಗೆ ಅಗ್ಗದ ವೆಚ್ಚಕ್ಕೆ ಎಚ್-1ಬಿ ವೀಸಾದ ಅಡಿಯಲ್ಲಿ ಬೇರೆಯವರನ್ನು ನಿಯುಕ್ತಿಗೊಳಿಸುವುದು ಆಕರ್ಷಕ ಬಿಸಿನೆಸ್ ಕಾರ್ಯತಂತ್ರವಾಗಿ ಮಾರ್ಪಟ್ಟಿದೆ ಎಂದು ಹಾರ್ವರ್ಡ್ ವಿವಿಯ ಪ್ರೊಫೆಸರ್ ರೋನ್ಲಿ ಹಿರಾ ಹೇಳುತ್ತಾರೆ.

English summary
Entertainment giant Walt Disney has laid off about 250 employees and replaced them with Indians holding H1-B visas, raising new questions on how outsourcing companies are using the temporary visas to bring immigrants into technology jobs in the US, according to a media report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X