ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್ V ಕೊರೊನಾ ಲಸಿಕೆ ಶೇ.92ರಷ್ಟು ಪರಿಣಾಮಕಾರಿ: ರಷ್ಯಾ

|
Google Oneindia Kannada News

ಮಾಸ್ಕೋ, ನವೆಂಬರ್ 12: ಸ್ಪುಟ್ನಿಕ್ V ಕೊರೊನಾ ಲಸಿಕೆ ಶೇ.92ರಷ್ಟು ಕೊವಿಡ್ 19 ವಿರುದ್ಧ ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ.

ಸ್ಪುಟ್ನಿಕ್ ವಿ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 92 ರಷ್ಟಿದೆ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ಮತ್ತು ಪ್ಲಾಸ್ಮಾ ಚಿಕಿತ್ಸೆ ಪಡೆದವರ ನಡುವೆ ನಡೆಸಲಾದ 20 ದೃಢೀಕರಿಸಿದ ಕೊವಿಡ್ ಪ್ರಕರಣಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗಿದೆ ಎಂದು ರಷ್ಯಾ ಡೈರೆಕ್ಟ್ ಇವೆಸ್ಟ್ ಮೆಂಟ್ ಫಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಮೊದಲ ಮಧ್ಯಂತರ ವಿಶ್ಲೇಷಣೆಯ ಪ್ರಕಾರವಾಗಿ ತಾನು ಅಭಿವೃದ್ಧಿಪಡಿಸಿದ ಲಸಿಕೆ ಸ್ಪುಟ್ನಿಕ್ ವಿ ಕೋವಿಡ್ ನಿಂದ ಜನರನ್ನು ರಕ್ಷಿಸುವಲ್ಲಿ ಶೇಕಡಾ 92 ರಷ್ಟು ಪರಿಣಾಮಕಾರಿ ಎಂದು ರಷ್ಯಾ ಬುಧವಾರ ಹೇಳಿದೆ.

ಕೊರೊನಾ ಲಸಿಕೆ ರಾಜಕೀಯಗೊಳಿಸಬೇಡಿ: ಪುಟಿನ್ ಎಚ್ಚರಿಕೆಕೊರೊನಾ ಲಸಿಕೆ ರಾಜಕೀಯಗೊಳಿಸಬೇಡಿ: ಪುಟಿನ್ ಎಚ್ಚರಿಕೆ

ಆಗಸ್ಟ್ 11 ರಂದು ವಿಶ್ವದ ಮೊದಲ ಕೊವಿಡ್ -19 ಲಸಿಕೆಯನ್ನು ನೋಂದಾಯಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ರಷ್ಯಾದ ಆರೋಗ್ಯ ಸಚಿವಾಲಯ ವ್ಯಾಪ್ತಿಯ ಗಮಾಲಿಯಾ ನ್ಯಾಷನಲ್ ರಿಸರ್ಚ್​ ಸೆಂಟರ್​ ಫಾರ್ ಎಪಿಡೆಮಿಯೋಲಜಿ ಆ್ಯಂಡ್ ಮೈಕ್ರೋ ಬಯಾಲಜಿ ಸಂಸ್ಥೆ ಈ ಸ್ಪುಟ್ನಿಕ್ ವಿಲಸಿಕೆ ತಯಾರಿಸಿದೆ.

ಮೂರನೇ ಹಂತದ ಪ್ರಯೋಗ

ಮೂರನೇ ಹಂತದ ಪ್ರಯೋಗ

ಪ್ರಸ್ತುತ ಸ್ಪುಟ್ನಿಕ್ ವಿ ಲಸಿಕೆಗಾಗಿನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಅನುಮೋದಿಸಲಾಗಿದೆ ಮತ್ತು ಬೆಲಾರಸ್, ಯುಎಇ, ವೆನೆಜುವೆಲಾ ಮತ್ತು ಇತರ ದೇಶಗಳಲ್ಲಿ ಇದು ನಡೆಯುತ್ತಿದೆ.

ಲಸಿಕೆಯ ಮಧ್ಯಂತರ ವರದಿ

ಲಸಿಕೆಯ ಮಧ್ಯಂತರ ವರದಿ

ಮೊದಲ ಲಸಿಕೆ ನೀಡಿದ 21 ದಿನಗಳ ನಂತರ ಮಧ್ಯಂತರ ವರದಿ ಬಂದಿದೆ. ಇದರ ವಿಶ್ಲೇಷಣೆ ಆಧಾರದ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರದರ್ಶಿಸಲಾಯಿತು. ಪ್ರಯೋಗಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಪ್ರತಿಕೂಲ ಘಟನೆಗಳು ನಡೆದಿಲ್ಲ ಎಂದು ರಷ್ಯಾ ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಲಸಿಕೆಯ ಪ್ರಯೋಗ

ಭಾರತದಲ್ಲಿ ಲಸಿಕೆಯ ಪ್ರಯೋಗ

ಭಾರತದಲ್ಲಿ, ಲಸಿಕೆಯ ಎರಡು, ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಪ್ರಸ್ತುತ, 40,000 ಸ್ವಯಂಸೇವಕರು ಸ್ಪುಟ್ನಿಕ್ ವಿ ವಿವಿಧ ಹಂತದ ಪ್ರಯೋಗದಲ್ಲಿ ನಿರತವಾಗಿದ್ದು 20 ಸಾವಿರ ಮಂದಿಯನ್ನು ಮೊದಲ ಡೋಸ್​ಗೆ ಹಾಗೂ 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಮತ್ತು ಎರಡನೇ ಡೋಸ್​ ಪ್ರಯೋಗಗಳಿಗೆ ಒಳಪಡಿಸಲಾಗಿದೆ.

Recommended Video

ಅಬ್ಬಾ ಇನ್ನೂ ಕೆಲವೇ ದಿನ ಭಾರತಕ್ಕೆ ಕೊರೋನ ಲಸಿಕೆ ! | Sputnik v Covid-19 Vaccine | Oneindia Kannada
ಕೊರೊನಾ ಸೋಂಕು ಹರಡುವಿಕೆ ತಡೆಯಲು ಪರಿಣಾಮಕಾರಿ

ಕೊರೊನಾ ಸೋಂಕು ಹರಡುವಿಕೆ ತಡೆಯಲು ಪರಿಣಾಮಕಾರಿ

ಲಸಿಕೆಯ ಬಳಕೆ ಮತ್ತು ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಪರಿಹಾರವಾಗಿದೆ ಎಂಬುದನ್ನು ತೋರಿಸುತ್ತದೆ ಮತ್ತು ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸುವ ಅತ್ಯಂತ ಯಶಸ್ವಿ ಮಾರ್ಗವಾಗಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ.

English summary
Russia on Wednesday said that its vaccine Sputnik V is 92 per cent effective at protecting people from COVID-19 according to the first interim analysis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X