ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆ ಪಡೆದ ಸ್ವಯಂಸೇವಕರಿಗೆ ಅಡ್ಡಪರಿಣಾಮ

|
Google Oneindia Kannada News

ನವದೆಹಲಿ, ನವೆಂಬರ್ 14: ಮಾಡೆರ್ನಾ ಕೊರೊನಾ ವೈರಸ್ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ನಾರ್ತ್ ಕರೋಲಿನಾ ವಿಶ್ವವಿದ್ಯಾಲಯದ ಚಾಪೆಲ್ ಹಿಲ್ ಸ್ವಯಂ ಸೇವಕ ವಿದ್ಯಾರ್ಥಿಯೊಬ್ಬ ಲಸಿಕೆಯ ಡೋಸ್ ತೆಗೆದುಕೊಂಡ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

'ಮಾಡೆರ್ನಾ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದ ಬಳಿಕ ನನಗೆ ಅಡ್ಡಪರಿಣಾಮದ ಅನುಭವಗಳು ಉಂಟಾದವು. ಸ್ವಲ್ಪ ಆಯಾಸ ಉಂಟಾಯಿತು. ಮರು ದಿನ ಜ್ವರ ಶುರುವಾಯಿತು. ಒಂದೆರಡು ಐಬುಪ್ರೊಫೆನ್ಸ್ ತೆಗೆದುಕೊಂಡ ಬಳಿಕ ಅದು ಕಡಿಮೆಯಾಯಿತು. ಚುಚ್ಚುಮದ್ದು ನೀಡಿದ ಜಾಗದಲ್ಲಿ ಕೊಂಚ ನೋವಿತ್ತು. ಶಿಂಗಲ್ಸ್ ಲಸಿಕೆ ಪಡೆದುಕೊಂಡ ಜನರಿಗೆ ಆದ ಅನುಭವಗಳೇ ನನಗಾಗಿವೆ' ಎಂದು ಆತ ತಿಳಿಸಿದ್ದಾನೆ.

ಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆಡಿಸೆಂಬರ್ ವೇಳೆಗೆ ಭಾರತಕ್ಕೆ ಬರಲಿದೆ 10 ಕೋಟಿ ಕೊರೊನಾ ಲಸಿಕೆ

ಜ್ವರ ಕಾಣಿಸಿಕೊಂಡಿದ್ದರಿಂದ ಆತನನ್ನು ಎರಡು ಬಾರಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಸೋಂಕು ನೆಗೆಟಿವ್ ಎಂದು ವರದಿ ಬಂದಿದೆ. ಅದರ ಹೊರತಾಗಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

 Volunteers Experiences Side Effects After Coronavirus Vaccines Trial

ಹಾಗೆಯೇ ಜಗತ್ತಿನ ಗಮನ ಸೆಳೆದಿರುವ ಫೈಜರ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದ ಸ್ವಯಂಸೇವಕರಲ್ಲಿ ತೀವ್ರ ಆಲಸ್ಯದ ಅನುಭವ ಉಂಟಾಗಿದೆ. ಜತೆಗೆ ಅವರಲ್ಲಿ ಜ್ವರ, ತಲೆನೋವು ಮತ್ತು ಸ್ನಾಯು ನೋವು ಕೂಟ ಉಂಟಾಗಿದೆ. ಅಮೆರಿಕದ ಔ‍ಷಧೀಯ ಕಂಪೆನಿ ಫೈಜರ್ ಮತ್ತು ಅದರ ಜರ್ಮನ್ ಪಾಲುದಾರ ಬಯೋಎನ್‌ಟೆಕ್ ಫೈಜರ್ ಲಸಿಕೆಯು ಕೊಟೊನಾ ವೈರಸ್ ವಿರುದ್ಧ ಶೇ 90ರಷ್ಟು ಪರಿಣಾಮಕಾರಿ ಎಂದು ಹೇಳಿದ ಬೆನ್ನಲ್ಲೇ ಈ ಅಡ್ಡಪರಿಣಾಮದ ಮಾಹಿತಿ ಹೊರಬಂದಿದೆ.

ಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ V ಕೊರೊನಾ ವೈರಸ್ ಲಸಿಕೆಭಾರತಕ್ಕೆ ಬಂತು ರಷ್ಯಾದ ಸ್ಪುಟ್ನಿಕ್ V ಕೊರೊನಾ ವೈರಸ್ ಲಸಿಕೆ

ಆರು ದೇಶಗಳಲ್ಲಿ 43,000ಕ್ಕೂ ಹೆಚ್ಚು ಮಂದಿಯನ್ನು ಈ ಲಸಿಕೆ ಪ್ರಯೋಗಕ್ಕೆ ಸ್ವಯಂ ಸೇವಕರಾಗಿ ಗುರುತಿಸಲಾಗಿದೆ. ಅವರಲ್ಲಿ ಲಸಿಕೆ ಪಡೆದುಕೊಂಡ ಅನೇಕರಲ್ಲಿ ತೀವ್ರ ಆಲಸ್ಯ, ತಲೆನೋವಿನಂತಹ ಅಡ್ಡಪರಿಣಾಮಗಳು ಉಂಟಾಗಿವೆ.

Recommended Video

ಹಾಗಾದ್ರೆ ಈ ಆಟಗಾರರ ಭವಿಷ್ಯ !! | RCB | Oneindia Kannada

English summary
Several volunteers has experienced the side effects including pain, fever after coronavirus vaccines trials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X