• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿ

|
Google Oneindia Kannada News

ನವದೆಹಲಿ, ಮೇ 23: ಸುಪ್ರಸಿದ್ಧ ಟೈಮ್ ನಿಯತಕಾಲಿಕೆ 2022ರ ನೂರು ಅತಿ ಪ್ರಭಾವಿ ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇರುವ ಅಚ್ಚರಿ ಎಂದರೆ ಯುದ್ಧನಿರತ ಎರಡು ದೇಶಗಳ ಮುಖ್ಯಸ್ಥರ ಹೆಸರು ಇರುವುದು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರು ಈ ಪಟ್ಟಿಯಲ್ಲಿದ್ದಾರೆ.

ಟೈಮ್ ಪತ್ರಿಕೆಯ ಈ ಪಟ್ಟಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಬಗ್ಗೆ ಪರಿಚಯ ಲೇಖನ ಬರೆದವರು ಅಮೆರಿಕ ಅಧ್ಯಕ್ಷ ಜೋ ಬೈಡನ್. "ಉಕ್ರೇನ್ ಜನರ ಶೌರ್ಯ ಮತ್ತು ಪ್ರತಿರೋಧ ಶಕ್ತಿಗೆ ಪ್ರತಿಬಿಂಬವಾಗಿ ಅಧ್ಯಕ್ಷ ಝೆಲೆನ್ಸ್ಕಿ ಇದ್ದಾರೆ.... ಝೆಲೆನ್ಸ್ಕಿಯಿಂದ ಪ್ರೇರಿತರಾದ ಸ್ವತಂತ್ರ ವಿಶ್ವ ರಾಷ್ಟ್ರಗಳು ಹೆಚ್ಚು ಒಗ್ಗಟ್ಟು ತೋರಿವೆ, ಹೆಚ್ಚು ಸಂಕಲ್ಪಿತಗೊಂಡಿವೆ" ಎಂದು ಜೋ ಬೈಡನ್ ತಮ್ಮ ಬರಹದಲ್ಲಿ ಶ್ಲಾಘಿಸಿದ್ದಾರೆ.

ಅತ್ಯಾಚಾರ ನಿಲ್ಲಿಸಿ: Cannes ಚಿತ್ರೋತ್ಸವದಲ್ಲಿ ಟಾಪ್ಲೆಸ್ ಮಹಿಳೆಯಿಂದ ಪ್ರತಿಭಟನೆಅತ್ಯಾಚಾರ ನಿಲ್ಲಿಸಿ: Cannes ಚಿತ್ರೋತ್ಸವದಲ್ಲಿ ಟಾಪ್ಲೆಸ್ ಮಹಿಳೆಯಿಂದ ಪ್ರತಿಭಟನೆ

ಇನ್ನು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಗ್ಗೆ ಟೈಮ್ ಪತ್ರಿಕೆಯಲ್ಲಿ ಪರಿಚಯ ಲೇಖನ ಬರೆದವರು ಆ ದೇಶದ ವಿಪಕ್ಷ ನಾಯಕ ಅಲೆಕ್ಸೇ ನವಾಲ್ನಿ. ಸದ್ಯ ಇವರು ಒಂಬತ್ತು ವರ್ಷ ಜೈಲುವಾಸ ಶಿಕ್ಷೆ ಅನುಭವಿಸುತ್ತಿದ್ಧಾರೆ.

ಒಂದೇ ಪಟ್ಟಿಯಲ್ಲಿ ಇವರಿಬ್ಬರು ಯಾಕೆ?
ವ್ಲಾದಿಮಿರ್ ಪುಟಿನ್ ಆಕ್ರಮಣಗಾರ, ಝೆಲೆನ್ಸ್ಕಿ ಡಿಫೆಂಡರ್. ಟೈಮ್ ಪಾಲಿಗೆ ಪುಟಿನ್ ವಿಲನ್, ಝೆಲೆನ್ಸ್ಕಿ ಹೀರೋ. ಹೀಗಿರುವಾಗ ಒಂದೇ ಪಟ್ಟಿಯಲ್ಲಿ ಇಬ್ಬರನ್ನು ಸೇರಿಸುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಟೈಮ್ ಪತ್ರಿಕೆಯ ಸಿಇಒ ಸಮಜಾಯಿಷಿ ನೀಡುತ್ತಾರೆ: "...ಒಳ್ಳೆಯದಾಗಲೀ, ಕೆಟ್ಟದಾಗಲೀ ಈ ವರ್ಷದಲ್ಲಿ ಯಾರ ಪ್ರಭಾವ ಎಷ್ಟಿತ್ತು ಎಂಬುದು ನಮ್ಮ ಮಾನದಂಡ. ಪಟ್ಟಿಯಲ್ಲಿ ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೂ ಇದ್ದರೂ ಇಬ್ಬರದ್ದೂ ವಿರುದ್ಧ ಧ್ರುವ. ರಷ್ಯಾದ ಸರ್ವಾಧಿಕಾರಿ ನಿರ್ದಯವಾಗಿ ಯುದ್ಧ ಮಾಡುತ್ತಿದ್ದರೆ ಅವರ ಎದುರಾಳಿ ಉಕ್ರೇನ್ ಅಧ್ಯಕ್ಷರು ಅಪರೂಪದ ನಾಯಕನೆಂಬಂತೆ ಕಂಗೊಳಿಸಿದ್ದಾರೆ" ಎಂದು ಹೇಳಿದ್ದಾರೆ.

Vladimir Putin and Zelensky both in TIME Top 100 Influential Peoples list

ಪುಟಿನ್‌ಗೆ ಡಕ್ ಟೆಸ್ಟ್ ಉದಾಹರಣೆ:
ಟೈಮ್ ಪತ್ರಿಕೆಯಲ್ಲಿ ಪುಟಿನ್ ಬಗ್ಗೆ ಅಲೆಕ್ಸೇ ನವಾಲ್ನಿ ಬಹಳ ಮಾರ್ಮಿಕವಾಗಿ ಬರೆಯುತ್ತಾ ಡಕ್ ಪರೀಕ್ಷೆಗೆ ಹೋಲಿಸಿದ್ದಾರೆ. "ಬಾತುಕೋಳಿ ತರಹ ಏನಾದರೂ ಕಂಡರೆ, ಬಾತುಕೋಳಿ ತರಹ ಈಜುತ್ತಿದ್ದರೆ, ಬಾತುಕೋಳಿ ತರಹ ಶಬ್ದ ಮಾಡಿದರೆ, ಅದು ಬಹುಶಃ ಬಾತುಕೋಳಿಯೇ ಆಗಿರುತ್ತದೆ... ಅದೇ ಲಾಜಿಕ್ ಅನ್ನು ಪುಟಿನ್ ವಿಚಾರಕ್ಕೂ ಅನ್ವಯಿಸಬಹುದು. ಯಾರಾದರೂ ಸ್ವತಂತ್ರ ಮಾಧ್ಯಮವನ್ನು ನಾಶ ಮಾಡಿದರೆ, ರಾಜಕೀಯ ಹತ್ಯೆಗಳನ್ನು ಆಯೋಜಿಸಿದರೆ, ತನ್ನ ಭ್ರಮೆಗಳಿಗೆ ಸಿಲುಕಿಕೊಂಡಿದ್ದರೆ, ಈ ಹುಚ್ಚುವ್ಯಕ್ತಿ 21ನೇ ಶತಮಾನದಲ್ಲಿ ಯೂರೋಪ್‌ನ ಕೇಂದ್ರಭಾಗದಲ್ಲಿ ರಕ್ತಪಾತ ಮಾಡುವಷ್ಟು ಸಮರ್ಥನಿರುತ್ತಾನೆ ಎಂದರ್ಥ" ಎಂದು ಅವರು ಬರೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
TIME Magazine's 2022 list of Top 100 Most Influential Persons has both Russia president Vladimir Putin and Ukraine President Zelensky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X