ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮಾನ್ ನಲ್ಲಿ ಮೆಕುನು ರುದ್ರನರ್ತನ: ಮೈನಡುಗಿಸುವ ವೈರಲ್ ವಿಡಿಯೋ

|
Google Oneindia Kannada News

ಸಲಾಲಾಹ್, ಮೇ 29: ಮನಮೋಹಕ ಪ್ರವಾಸೀ ತಾಣಗಳ ಮೂಲಕ ವಿಶ್ವದ ಗಮನ ಸೆಳೆದ ಒಮಾನ್ ನಲ್ಲಿ ಸದ್ಯಕ್ಕೆ ಸೂತಕದ ಛಾಯೆ. ರಸ್ತೆಯೋ, ಸಮುದ್ರವೋ ಗೊತ್ತಾಗದ ಸ್ಥಿತಿ! ಮನೆಯಿಂದ ಆಚೆ ಬಂದರೆ ಬದುಕುವ ಭರವಸೆಯೇ ಇಲ್ಲ ಎಂಬ ಭೀತಿ!

ಕಳೆದ ಕೆಲವು ದಿನಗಳಿಂದ ಒಮಾನ್ ನಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆ, ಅದರೊಟ್ಟಿಗೆ ಹುಟ್ಟಿಕೊಂಡ ಮೆಕುನು ಎಂಬ ಚಂಡಮಾರುತ ಇಡೀ ದೇಶವನ್ನೂ ಮಂಕಾಗಿಸಿದೆ. ಈ ನೈಸರ್ಗಿಕ ವಿಕೋಪಕ್ಕೆ ಇದುವರೆಗೂ 13 ಜನ ಮೃತರಾಗಿದ್ದು, 8 ಜನ ನಾಪತ್ತೆಯಾಗಿದ್ದಾರೆ.

ಮೂರುವರ್ಷಕ್ಕಾಗುವಷ್ಟು ಮಳೆಯನ್ನು ಒಂದೇ ದಿನ ಕಂಡ ಒಮಾನ್!ಮೂರುವರ್ಷಕ್ಕಾಗುವಷ್ಟು ಮಳೆಯನ್ನು ಒಂದೇ ದಿನ ಕಂಡ ಒಮಾನ್!

ಮೂರು ವರ್ಷ ಸುರುಯುವಷ್ಟು ಮಳೆಯನ್ನು ಒಮಾನ್ ಒಂದೇ ದಿನದಲ್ಲಿ ಪಡೆದಿದೆ ಎಂದರೆ, ವರುಣನ ಆರ್ಭಣ ಹೇಗಿತ್ತು ಎಂಬುದನ್ನು ನೀವೇ ಊಹಿಸಿ. ಮೆಕುನು ಚಂಡಮಾರುತ ಮತ್ತು ಎಡಬಿಡದ ಸುರುದ ಮಳೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಕೃತಿಯ ಅಗಾಧ ಶಕ್ತಿಯನ್ನೂ, ಅದರ ವಿರುದ್ಧ ಸೆಣೆಸಲಾರದವರು ಹುಲುಮಾನವರು ಎಂಬುದನ್ನೂ ಈ ಚಿತ್ರಗಳು ಸಾಬೀತುಪಡಿಸಿವೆ.

ಭೂಮಿಯನ್ನೇ ಹಾರಿಸಿಕೊಂಡು ಹೋಗುತ್ತಾ ಗಾಳಿ?!

ಭೂಮಿಯನ್ನೇ ಹಾರಿಸಿಕೊಂಡು ಹೋಗುತ್ತೇನೋ ಎಂಬಷ್ಟು ಜೋರಾಗಿ ಸುರಿಯುತ್ತಿರುವ ಚಂಡಮಾರುತದಿಂದಾಗಿ ರಾಷ್ಟ್ರದಾದ್ಯಂತ ಶಾಲೆ-ಕಾಲೇಜು, ಎಲ್ಲಾ ಪ್ರಮುಖ ಸಂಸ್ಥೆಗಳಿಗೂ ಮೂರು ದಿನಗಳ ರಜೆ ಘೋಷಿಸಲಾಗಿದೆ. ಗಂಟೆಗೆ ಸುಮಾರು 170 ರಿಂದ 180 ಕಿ ಮೀ.ವೇಗದಲ್ಲಿ ಗಾಳಿ ಅಪ್ಪಳಿಸುತ್ತಿದೆ.

ಇದು ಜಲಪಾತವಲ್ಲ, ಮಳೆ!

ಇದು ಖಂಡಿತ ಬೋರ್ಗರೆವ ಜಲಪಾತವಲ್ಲ! ಆಗಸದಿಂದ ಸುರಿಯುತ್ತಿರುವ ಮಳೆ! ಮೂರು ವರ್ಷಗಳ ಕಾಲ ಸುರುಯುವಷ್ಟು ಮಳೆಯನ್ನು ಒಂದೇ ದಿನ ಪಡೆದ ಒಮಾನ್ ಅನ್ನು ಬೆಚ್ಚಿ ಬೀಳಿಸಿದ ಮಳೆಯ ದೃಶ್ಯ ಇದು! ಯಾವುದೋ ಜಲಪಾತದಿಂದ ನೀರು ಉಕ್ಕುತ್ತಿದೆಯೇನೋ ಅನ್ನಿಸುವಷ್ಟು ಭಾರೀ ಮಳೆ ಒಮಾನ್ ಅನ್ನು ಹೈರಾಣಾಗಿಸಿದೆ!

ಮೆರಿಲ್ಯಾಂಡ್‌ನಲ್ಲಿ ಭಾರಿ ಪ್ರವಾಹ: ದಿಗ್ಭ್ರಮೆಗೊಳಿಸುವ ಚಿತ್ರಗಳುಮೆರಿಲ್ಯಾಂಡ್‌ನಲ್ಲಿ ಭಾರಿ ಪ್ರವಾಹ: ದಿಗ್ಭ್ರಮೆಗೊಳಿಸುವ ಚಿತ್ರಗಳು

ರುದ್ರ ರಮಣೀಯ ದೃಶ್ಯ

ಪುಟ್ಟ ಜಲಪಾತವೊಂದು ಮಳೆಯ ನಂತರ ಉಕ್ಕಿ, ಬೆಟ್ಟ ಗುಡ್ಡಗಳನ್ನೆಲ್ಲ ಬಳಸಿ ಬರುತ್ತಿರುವ ಈ ದೃಶ್ಯ ನೋಡುವುದಕ್ಕೇನೋ ಚೆಂದವೇ. ಆದರೆ ಇದು ಉಂಟುಮಾಡಿದ ಪರಿಣಾಮ ಮಾತ್ರ ಘೋರ.

ಸೌಂದರ್ಯದ ಹಿಂದಿನ ಭೀಕರತೆ!

ಇದು ಒಮಾನ್ ನ ದರ್ಬಾತ್ ಜಲಪಾತ. ಮೆಕುನು ಚಂಡಮಾರುತದ ನಂತರ ಈ ಜಲಪಾತ ಉಕ್ಕಿ ಹರಿಯುತ್ತಿದೆ. ನೋಡುವುದಕ್ಕೆ ಸುಂದರವಾಗಿ ಕಾಣುವ ಈ ಜಲಪಾತದ ಹಿಂದಿನ ಭೀಕರತೆ ಬಲ್ಲವರ್ಯಾರು?

ಇದು ಸಮುದ್ರವಲ್ಲ, ರಸ್ತೆ!

ಒಮಾನ್ ನ ಸಲಾಲಾಹ್ ನ ದಾಹರಿಜ್ ಬೀಚಿನ ಎದುರು ರಸ್ತೆಯೆಲ್ಲ ತುಂಬಿಕೊಂದಿರುವ ದೃಶ್ಯ ಇದು. ನೋಡುಗರಿಗೆ ಇದು ಸಮುದ್ರವೋ, ರಸ್ತೆಯೋ ಎಂಬುದೇ ಗೊತ್ತಾಗದ ಮಟ್ಟಿಗೆ ಎಲ್ಲೆಲ್ಲೂ ಜಲಾವೃತವಾಗಿದೆ.

ಪ್ರವಾಸೀ ತಾಣದಲ್ಲೀಗ ಸ್ಮಶಾನ ಮೌನ!

ವಿಶ್ವದ ಪ್ರಸಿದ್ಧ ಪ್ರವಾಸೀ ತಾಣವಾಗಿ, ಸದಾ ಗಿಜುಗುಡುತ್ತಿದ್ದ ಪ್ರವಾಸೀ ತಾಣ ಒಮಾನ್ ನಲ್ಲಿ ಈಗ ಸ್ಮಶಾನ ಮೌನ. ಭೀಕರ ಚಂಡಮಾರುತ ಮತ್ತು ಮಳೆ ಸೃಷ್ಟಿಸಿದ ನೀರವ ಮೌನವನ್ನೂ, ಅದರಿಂದಾದ ಹಾನಿಯನ್ನೂ ವ್ಯಕ್ತಪಡಿಸುವ ಚಿತ್ರಗಳು ಇಲ್ಲಿವೆ.

ತೂಗುಯ್ಯಾಲೆಯಾಡುತ್ತಿರುವ ಮರಗಳು

ರಸ್ತೆಯಲ್ಲಿ ನರಪಿಳೆಳೆಯೂ ಇಲ್ಲ. ಎಲ್ಲೆಲ್ಲೂ ತುಂಬಿರುವ ಮಣ್ಣು ಮಿಶ್ರಿತ ಕೆಂಪು ನೀರು, ಸಾಲಾಗಿ ಪಾರ್ಕ್ ಮಾಡಲಾದ ವಾಹನ, ಗಾಳಿ, ಮಳೆಯ ಸದ್ದಲ್ಲದೆ ಬೇರೆ ಧ್ವನಿ ಇಲ್ಲ. ಇವೆಲ್ಲದರೊಂದಿಗೆ ಚಂಡಮಾರುತದ ಶಾಪವನ್ನು ತಲೆಯಲ್ಲಾಡಿಸಿ ಸ್ವೀಕರಿಸುತ್ತಿರುವಂತೆ, ತೂಗಾಡುತ್ತಿವೆ ಮರಗಳು.

English summary
Oman rain and Mekunu cyclone viral videos: Storm in Oman has brought 3 years worth of rain in one day. 13 people dead and 8 people were also missing as Cyclone Mekunu caused flash flooding that tore away whole roadways
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X