• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ವಿರುಷ್ಕಾ' ಮದುವೆಯ ಅಪರೂಪದ ವಿಡಿಯೋಗಳು

|
   Virat Anushka Marriage | ವಿರಾಟ್ ಅನುಷ್ಕಾ ಮದುವೆಯ ಕೆಲವು ತುಣುಕುಗಳು | Oneindia Kannada

   ಟಸ್ಕನಿ(ಇಟಲಿ), ಡಿಸೆಂಬರ್ 12: ಹಲವು ದಿನಗಳ, ವರ್ಷಗಳ 'ಅಂತೆ-ಕಂತೆ' ಕಥೆಗಳಿಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ. ಬಾಲಿವುಡ್ ನ ಕೋಲ್ಮಿಂಚು ಅನುಷ್ಕಾ ಶರ್ಮಾ ಮತ್ತು ಕ್ರಿಕೆಟ್ ದಿಗ್ಗಜ ವಿರಾಟ್ ಕೋಹ್ಲಿ ಸಪ್ತಪದಿ ತುಳಿದಿದ್ದಾರೆ. ಇಟಲಿಯ ಟಸ್ಕನಿ ಎಂಬಲ್ಲಿ ಇವರ ವಿವಾಹ ಮಹೋತ್ಸವ ನಡೆದಿದೆ. ಅದೂ ಕುಟುಂಬಸ್ಥರು, ತೀರಾ ಆಪ್ತ ಬಂಧುಗಳು, ಸ್ನೇಹಿತರ ಉಪಸ್ಥಿತಿಯಲ್ಲಿ.

   ಚಿತ್ರಗಳು : ಇಟಲಿಯಲ್ಲಿ ವಿರಾಟ್- ಅನುಷ್ಕಾ ಕಲ್ಯಾಣ

   ಇಷ್ಟು ದಿನ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕ್ಯೂಟ್ ಜೋಡಿಯನ್ನು ಕಂಡವರು, ಇಬ್ಬರೂ ಮದುವೆಯಾದರೆ ಎಷ್ಟು ಚೆನ್ನ ಎಂದುಕೊಂಡಿದ್ದಿದೆ. ನಿರಂತರ ಶೂಟಿಂಗ್ ನಡುವೆಯೂ ಬಿಡುವು ಮಾಡಿಕೊಂಡು ವಿರಾಟ್ ಕೋಹ್ಲಿ ಅವರ ಆಟವನ್ನು ನೋಡಲು ಹೋಗುತ್ತಿದ್ದ ಅನುಷ್ಕಾ, ಅನುಷ್ಕಾ ಚಿತ್ರಗಳನ್ನು ನೋಡಿ ಮನಸಾರೆ ಮೆಚ್ಚಿಕೊಂಡು ಅಭಿನಂದಿಸುತ್ತಿದ್ದ ಕೋಹ್ಲಿ.... ಒಟ್ಟಿನಲ್ಲಿ ಅನುರೂಪ ಅನ್ನಿಸುವಂಥ ಈ ಜೋಡಿಯನ್ನು ಕಂಡು ಮತ್ಸರ ಪಟ್ಟವರಿಗಿಂತ ಖುಷಿ ಪಟ್ಟವರೇ ಹೆಚ್ಚು.

   ಇಟಲಿಯಲ್ಲಿ ಕೊಹ್ಲಿ- ಅನುಷ್ಕಾ ಮದ್ವೆಯಂತೆ, ಗುಲ್ಲೋ ಗುಲ್ಲು!

   ಕೆಲ ದಿನಗಳ ಕಾಲ ಬ್ರೇಕ್ ಅಪ್ ಸುದ್ದಿ ಕೇಳಿದ್ದರೂ, ನಂತರ ಮತ್ತೆ ಒಂದಾದ ಜೋಡಿ, ಬಿಟ್ಟೂ ಬಿಡಲಾರದ ಸೆಳೆತ ಈ ಪ್ರೇಮ ಅನ್ನೋದನ್ನ ಸಾಬೀತುಪಡಿಸಿದರು. ಇಷ್ಟು ದಿನದ ಪ್ರೇಮಿಗಳು, ಈಗ ದಂಪತಿ! ಈ ಇಬ್ಬರು ಸುಂದರ ಜೋಡಿಯ ಮದುವೆಯ ಅಮೂಲ್ಯ ಕ್ಷಣಗಳ ಚಿತ್ರಗಳು, ವಿಡಿಯೋಗಳು ಟ್ವಿಟ್ಟರ್ ನಲ್ಲಿ #VirushkaWEDDING ಎಂಬ ಹ್ಯಾಶ್ ಟ್ಯಾಗ್ ನಲ್ಲಿ ವೈರಲ್ ಆಗಿವೆ. ಇಬ್ಬರ ಅಭಿಮಾನಿಗಳು, ಸಹೋದ್ಯೋಗಿಗಳು, 'ನೂರ್ಕಾಲ ನಗುನಗುತ ಬಾಳಿ' ಎಂದು ಇಬ್ಬರನ್ನೂ ಹರಸಿದ್ದಾರೆ.

   ಈ ಅಭೂತಪೂರ್ವ ಕ್ಷಣದ ಕೆಲವು ವಿಡಿಯೋ ಮತ್ತು ಚಿತ್ರಗಳು ಇಲ್ಲಿವೆ...

   ಆ ಕ್ಯೂಟ್ ಕ್ಯೂಟ್ ಕ್ಷಣ..!

   ತಿಳಿ ಗುಲಾಬಿ ಬಣ್ಣದ ಬ್ರೈಡಲ್ ಲೆಹೆಂಗಾ ತೊಟ್ಟಿದ್ದ ಅನುಷ್ಕಾ ಸುರಸುಂದರಿಯಾಗಿ ಕಂಗೊಳಿಸಿದ್ದರೆ, ಅದಕ್ಕೆ ಸೂಟ್ ಆಗುವಂಥದೇ ಶೆರ್ವಾನಿ ಧರಿಸಿದ್ದ ಕೋಹ್ಲಿ ಸಹ ತಾವೂ ಕಡಿಮೆ ಇಲ್ಲ ಎಂಬಂತೆ ಕಂಡುಬಂದರು. ಮಾಲೆ ಹಾಕುವುದಕ್ಕೆಂದು ಅನುಷ್ಕಾ ಬಳಿ ಬರುತ್ತಿದ್ದಂತೆಯೇ ಕೋಹ್ಲಿ ಅವರೊಂದಿಗಿದ್ದ ಅವರ ಸ್ನೇಹಿತರು, ಕುಟುಂಬಸ್ಥರು ಅವರನ್ನು ಎತ್ತಿ ಹಿಡಿದರು! ಇದರಿಂದ ಮಾಲೆ ಹಾಕುವುದಕ್ಕೆ ಸಾಧ್ಯವಾಗದೆ ಸುಮ್ಮನೆ ನಿಂತಿದ್ದ ಅನುಷ್ಕಾ ಅವರನ್ನು ಅವರ ಸಂಬಂಧಿಕರೂ ಮೇಲಕ್ಕೆತ್ತಿ, ಮಾಲೆ ಹಾಕುವುದಕ್ಕೆ ಸಹಾಯ ಮಾಡಿದರು. ಆ ಕ್ಯೂಟ್ ಕ್ಷಣದ ವಿಡಿಯೋವನ್ನು ಅವರ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

   ವಿರುಷ್ಕಾ ಕಮಾಲ್!

   ಅನುರೂಪ ಸಂಗಾತಿಯನ್ನು ವರಿಸುವುದಕ್ಕೆ ನಾಚಿಕೆಯಿಂದ ಮಂಟಪದತ್ತ ಬಂದ ಸರ್ವಾಲಂಕಾರ ಭೂಷಿತೆ ಅನುಷ್ಕಾರನ್ನು ನೋಡುತ್ತಿದ್ದರೆ ಕಣ್ಣು ಕೀಳುವುದು ಕಷ್ಟ ಎಂಬಂತಿತ್ತು! 'ಸಿಹಿ ಕನಸನ್ನು ಈ ಘಳಿಗೆಯಿಂದಲೇ ಮಾಡಿದ್ದಿರಬೇಕು! ಈ ವಿಡಿಯೂ ನಮ್ಮ ಹೃದಯಕ್ಕೆ ಕಚಗುಳಿ ಇಡುತ್ತದೆ! ಎಷ್ಟು ಕ್ಯೂಟ್ ಈ ಜೋಡಿ!' ಎಂದು ಫಿಲ್ಮ್ ಫೇರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಪರಿಪೂರ್ಣ ಜೋಡಿ!

   ಪರಿಪೂರ್ಣತೆ ಎಂದರೆ ಇದೇ! ಎಂದು ಜೆಯ್ನ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇರಲ್ಲಿ ಈ ಸುಂದರ ಜೋಡಿಯ ಚಿತ್ರಗಳಿವೆ. ಜೊತೆಗೆ ಮೆಹೆಂದಿ ಶಾಸ್ತ್ರ ಮಾಡಿಸಿಕೊಳ್ಳುತ್ತಿರುವ ಅನುಷ್ಕಾ ಫೋಟೋ ಸಹ ಇದೆ.

   ಧಾರ್ಮಿಕ ಕಾರ್ಯಕ್ಕೂ ಪ್ರಾಶಸ್ತ್ಯ

   ಮದುವೆಯ ನಂತರ ಇಬ್ಬರೂ ಕೆಲವು ಧಾರ್ಮಿಕ ಆಚರಣೆಗಳನ್ನೂ ಪಾಲಿಸಿದರು. ಇಬ್ಬರೂ ಭಕ್ತಿಯಿಂದ ಸಂಪ್ರದಾಯ ಪಾಲಿಸುತ್ತಿದ್ದ ವಿಡಿಯೋ ಸಹ ವೈರಲ್ ಆಗಿದೆ. ಈ ವಿಡಯೋವನ್ನು ಸಹ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

   ಉಂಗುರ ಬದಲಿಸಿಕೊಂಡ ಜೋಡಿ

   ವಿರುಷ್ಕಾ ಜೋಡಿ ಉಂಗುರ ಬದಲಿಸಿಕೊಂಡ ಘಳಿಗೆ ವಿಡಿಯೋ ಸಹ ವೈರಲ್ ಆಗಿದೆ. ಆದರೆ ಇದು ಎಲ್ಲಿ ನಡೆದಿದ್ದು, ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.

   ಅರಿಶಿಣ ಶಾಸ್ತ್ರ

   ಸಂಪ್ರದಾಯದಂತೆ ಅರಿಶಿಣ ಶಾಸ್ತ್ರ ಮಾಡಿಸಿಕೊಂಡ ಕೋಹ್ಲಿ, ತಮಾಷೆ ಮಾಡುತ್ತ ಪ್ರತಿ ಕ್ಷಣವನ್ನೂ ಸಂಭ್ರಮಿಸಿದರು. ಈ ವಿಡಿಯೋವನ್ನು ಅವರ ಅಭಿಮಾನಿಗಳೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

   ಸುರಸುಂದರಿಯಾಗಿ ಅನುಷ್ಕಾ

   ಅದ್ಧೂರಿ ಲೆಹೆಂಗಾ ತೊಟ್ಟಿದ್ದ ಅನುಷ್ಕಾ ಸುರಸುಂದರಿಯಂತೆ ಕಂಡರು. ಅದಕ್ಕೊಪ್ಪುವ ನೆಕ್ಲೆಸ್, ಜುಮಕಾ ಇನ್ನಿತರ ಆಭರಣಗಳು ಅವರ ಅಂದಕ್ಕೆ ಮತ್ತಷ್ಟು ಕಳೆ ನೀಡಿದ್ದವು.

   ಕ್ಯೂಟೆಸ್ಟ್ ಬ್ರೈಡ್

   ಅನುಷ್ಕಾ ಶರ್ಮಾ ಸರ್ವಾಲಂಕಾರಭೂಷಿತೆಯಾಗಿ ನಿಂತಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿರುವ ಅವರ ಅಭಿಮಾನಿಗಳು ಇವರಿಗಿಂತ ಹ್ಯಾಪಿಯೆಸ್ಟ್ ಬ್ರೈಡ್ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   One of the most expected celebrity marriages of 2017 has taken place on December 11th, in Tuscan village in Italy. Yes, bollywood beauty Anushka Sharma and Cricket hero Virat Kohli got married. The Most luxurious marriage takes place with family members' and close relatives', friends' presence. Here are few viral videos and pictures of Virushka wedding!

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more