ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿಲಿಗೂ ಹೆದರಲಿಲ್ಲ ಮುಂಗುಸಿಗೂ ಸೋಲಲಿಲ್ಲ ಹಳದಿ ಹಾವು!

|
Google Oneindia Kannada News

ನಾಗರಹಾವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದರಲ್ಲಿ ಕೇವಲ ಒಂದು ಮಾರಣಾಂತಿಕ ಪ್ರಭೇದವಿದೆ. ಅದು ಕೇಪ್ ಕೋಬ್ರಾ. ಅದರ ಎಲ್ಲಾ ಗುಣಲಕ್ಷಣಗಳು ಸಾಮಾನ್ಯ ನಾಗರಹಾವಿನಂತೆಯೇ ಇರುತ್ತವೆ. ಆದರೆ ಅದರ ದೇಹವು ಹಳದಿ ಬಣ್ಣದಲ್ಲಿರುತ್ತದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಕೇಪ್ ಕೋಬ್ರಾ ಎರಡು ಸಣ್ಣ ಜೀವಿಗಳನ್ನು ಬೇಟೆಯಾಡಲು ಯತ್ನಿಸುತ್ತದೆ.

ಈ ವಿಡಿಯೋ ದಕ್ಷಿಣ ಆಫ್ರಿಕಾದ ಕಲ್ಗಾಡಿ ಟ್ರಾನ್ಸ್‌ಫ್ರಾಂಟಿಯರ್ ಪಾರ್ಕ್‌ನಲ್ಲಿಯದ್ದು. ಅಲ್ಲಿ ಕೆಲವು ಪ್ರವಾಸಿಗರು ವಾಕಿಂಗ್‌ಗೆ ಹೋಗಿದ್ದರು. ನೊಸೊಬ್ ಶಿಬಿರದ ಬಳಿ, ಅವರು ಕೇಪ್ ಕೋಬ್ರಾವನ್ನು ನೋಡಿದರು. ಅದು ಆಹಾರಕ್ಕಾಗಿ ಹುಡುಕುತ್ತಿತ್ತು.

 ನಾನು ನಾಗರಹಾವು... ಬಿಜೆಪಿ ಸೇರುತ್ತಿದ್ದಂತೆ ಮಿಥುನ್ ಚಕ್ರವರ್ತಿ ಹೊಸ ಡೈಲಾಗ್ ನಾನು ನಾಗರಹಾವು... ಬಿಜೆಪಿ ಸೇರುತ್ತಿದ್ದಂತೆ ಮಿಥುನ್ ಚಕ್ರವರ್ತಿ ಹೊಸ ಡೈಲಾಗ್

ಈ ವೇಳೆ ಕೆಲವು ಅಳಿಲುಗಳು ಅದನ್ನು ಸುತ್ತುವರೆದವು. ಆರಂಭದಲ್ಲಿ ಪ್ರವಾಸಿಗರು ನಾಗರ ಹಾವನ್ನು ನೋಡುತ್ತಾ ತೆರಳುತ್ತಿದ್ದರು. ಆದರೆ ನಂತರ ನಾಗರಹಾವು ಅಳಿಲುಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಅದರ ನಂತರ ಎಲ್ಲರೂ ತಮ್ಮ ಕ್ಯಾಮೆರಾವನ್ನು ಆನ್ ಮಾಡಿ ಅದನ್ನು ಚಿತ್ರೀಕರಿಸಲು ಪ್ರಾರಂಭಿಸಿದರು.

ವಿಡಿಯೋ ವೈರಲ್

ವಿಡಿಯೋ ವೈರಲ್

ಕೇಪ್ ಕೋಬ್ರಾ ಅಳಿಲುಗಳು ಮತ್ತು ಅವುಗಳ ಮರಿಗಳನ್ನು ಭೇಟೆಯಾಡಲು ಪ್ರಯತ್ನಿಸುತ್ತಿತ್ತು. ಅಳಿಲುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿತ್ತು. ಆದರೆ ಅವುಗಳು ಕೇಪ್ ಕೋಬ್ರಾ ದಾಳಿಯಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ವೇಳೆ ಅಳಿಲುಗಳೂ ಕೇಪ್ ಕೋಬ್ರಾ ಮೇಲೆ ದಾಳಿ ನಡೆಸುತ್ತಿದ್ದವು. ಸ್ವಲ್ಪ ಸಮಯದಲ್ಲೇ ಅಲ್ಲಿ ಅನೇಕ ಅಳಿಲುಗಳು ಜಮಾಯಿಸಿದವು. ಎಲ್ಲವೂ ಕೇಪ್ ಕೋಬ್ರಾ ವನ್ನು ಸುತ್ತುವರೆದವು. ನಾಗರಹಾವು ಅವರ ಮೇಲೆ ಪ್ರಾಬಲ್ಯ ಸಾಧಿಸಿತು. ಏಕೆಂದರೆ ಅದರ ವಿಷದ ಒಂದು ಹನಿ ಎಲ್ಲಾ ಅಳಿಲುಗಳನ್ನು ಕೊಲ್ಲುತ್ತದೆ.

ಅಳಿಲುಗಳ ಸಹಾಯಕ್ಕೆ ಬಂದ ಮುಂಗುಸಿ

ಅಳಿಲುಗಳ ಸಹಾಯಕ್ಕೆ ಬಂದ ಮುಂಗುಸಿ

ಕೆಲವೇ ಕ್ಷಣಗಳಲ್ಲಿ ಈ ಫೈಟ್ ರೋಚಕವಾಯಿತು. ಅಳಿಲುಗಳು ತೊಂದರೆ ಅನುಭವಿಸುತ್ತಿರುವುದನ್ನು ನೋಡಿ ಮುಂಗುಸಿಯೊಂದು ಅಲ್ಲಿಗೆ ಬಂದಿತು. ಮುಂಗುಸಿ ಮತ್ತು ಹಾವಿನ ದ್ವೇಷದ ಕಥೆಗಳು ಈಗಾಗಲೇ ಸಾಕಷ್ಟು ಪ್ರಸಿದ್ಧವಾಗಿವೆ. ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಹಾವಿಗೆ ಈಗ ಎರಡು ಸವಾಲುಗಳಿದ್ದವು. ಮೊದಲು ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ಎರಡನೆಯದಾಗಿ ಅಳಿಲುಗಳನ್ನು ಬೇಟೆಯಾಡುವ ಮೂಲಕ ತನ್ನ ಹಸಿವನ್ನು ನೀಗಿಸಿಕೊಳ್ಳುವುದು. ಹಾವು ಅಳಿಲನ್ನು ತಿನ್ನಲಾಗಲಿಲ್ಲ.

ನೆಮ್ಮದಿಯ ನಿಟ್ಟುಸಿರು ಬಿಟ್ಟ ಅಳಿಲು

ಇದಾದ ನಂತರವೂ ಮುಂಗುಸಿ ಹಾವಿನ ಮೇಲೆ ದಾಳಿ ಮಾಡುತ್ತಲೇ ಇತ್ತು. ಹಾವು ಕೂಡ ಹಲವು ಬಾರಿ ಕಚ್ಚಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಕೊನೆಗೆ ಅಲ್ಲಿಂದ ಓಡಿ ಹೋಗುವುದೇ ಸರಿ ಎನಿಸಿತು. ಆಗ ಮುಂಗುಸಿ ಮತ್ತು ಅಳಿಲು ನೆಮ್ಮದಿಯ ನಿಟ್ಟುಸಿರು ಬಿಟ್ಟವು.

ವಿಡಿಯೋ ಸೆರೆಹಿಡಿದವರು ಹೇಳಿದ್ದೇನು?

ವಿಡಿಯೋ ಸೆರೆಹಿಡಿದವರು ಹೇಳಿದ್ದೇನು?

ವಿಡಿಯೋವನ್ನು ಚಿತ್ರೀಕರಿಸಿದ ಲಾರಾ ಡಿ ಮ್ಯಾಟೋಸ್, ನಾವು ಹತ್ತಿರ ಬಂದಾಗ ಅಳಿಲು ಕೇಪ್ ಕೋಬ್ರಾವನ್ನು ತನ್ನ ಬಿಲದಿಂದ ದೂರವಿರಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದೆವು, ನಾಗರಹಾವನ್ನು ಓಡಿಸಲು ಅಳಿಲು ಹಲವು ಬಾರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಆದರೆ, ನಂತರ ಮುಂಗುಸಿ ಅಲ್ಲಿಗೆ ಬಂದು ಪರಿಸ್ಥಿತಿಯನ್ನು ನೋಡಿಕೊಂಡಿತು. ಆ ನಂತರ ಅಲ್ಲಿ ಬಹಳ ಹೊತ್ತು ತಂಗಿದ್ದರೂ ಮತ್ತೆ ನಾಗರ ಹಾವು ಬರಲಿಲ್ಲ ಎಂದು ಹೇಳಿದ್ದಾರೆ.

Recommended Video

Hubli ಯಲ್ಲಿ ಧ್ವಜ ತಯಾರಿಕ ಕಾರ್ಖಾನೆಗೆ ಭೇಟಿ ಕೊಟ್ಟ Rahul Gandhi | *Politics | OneIndia Kannada

English summary
Video of Squirrel and Mongoose Fight with Cape Cobra in South Africa's Kalgadi Transfrontier Park has gone viral. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X