ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡೀಯೋ: ವಿಮಾನದಿಂದ ಉದುರುವ ಮೀನುಗಳು, ಇದು ಪವಾಡವಲ್ಲ!

|
Google Oneindia Kannada News

ನೀವು ಜಗತ್ತಿನ ಅತ್ಯಂತ ಸುಂದರ ಪರ್ವತ ಸರೋವರದ ತಾಣವೊಂದಕ್ಕೆ ತೆರಳಿದ್ದೀರಿ ಅಂದುಕೊಳ್ಳಿ. ನಿಂತು ಆ ಪರ್ವತದ, ಸರೋವರದ ಮೋಹಕತೆಯನ್ನು ಕಣ್ತುಂಬಿಸಿಕೊಳ್ಳುತ್ತಿರುವಾಗ ಗಗನದಲ್ಲಿ ಎಲ್ಲಿಂದಲೋ ಬಂದ ವಿಮಾನವೊಂದು ರಾಶಿ ರಾಶಿ ಮೀನುಗಳನ್ನು ಆ ಸರೋವರಕ್ಕೆ ನಿಮ್ಮೆದುರಲ್ಲೇ ಉದುರಿಸಿ ಹೋಗುತ್ತದೆ! ಇದೇನಿದು? ದೇವಕನ್ಯೆಯರಿದ್ದ ಪುಷ್ಪಕ ವಿಮಾನದಲ್ಲಿ ನಡೆದ ಪವಾಡವೇ ಎಂದೆಲ್ಲ ಯೋಚಿಸುವುದಕ್ಕೆ ಶುರುವಿಟ್ಟರೆ ಅಚ್ಚರಿಯೇನಿಲ್ಲ!

ವಿಶ್ವ ಜೀವವೈವಿಧ್ಯ ದಿನ: ನಿಸರ್ಗ ಎಂಬ ವಿಸ್ಮಯದ ಗೂಡುವಿಶ್ವ ಜೀವವೈವಿಧ್ಯ ದಿನ: ನಿಸರ್ಗ ಎಂಬ ವಿಸ್ಮಯದ ಗೂಡು

ಆದರೆ ಇದರಲ್ಲಿ ಪವಾಡವೂ ಇಲ್ಲ, ಎಂಥದೂ ಇಲ್ಲ. ಅಮೆರಿಕದ ಉಟಾಹ್ ಎಂಬ ಪರ್ವತ ಶ್ರೇಣಿಯಲ್ಲಿರುವ ಸರೋವರದಲ್ಲಿ ಆಗಾಗ ಕಂಡುಬರುವ ಮಾಮೂಲಿ ದೃಶ್ಯ ಇದು! ಇಂಥದೊಂದು ವಿಡಿಯೋವನ್ನು ಉಟಾಹ್ ವನ್ಯಜೀವಿ ಸಂಪನ್ಮೂಲ ವಿಭಾಗ ಟ್ವೀಟ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.

ಮತ್ಸ್ಯಗಳ ರಕ್ಷಣೆಗೆ, ಮತ್ತು ಉಟಾಹ್ ಪ್ರದೇಶದ ಆಕರ್ಷಣೆಯನ್ನು ಉಳಿಸುವುದಕ್ಕೆ ಈ ಭಾಗದಲ್ಲಿ ಸದಾ ಮೀನುಗಳ ಸಂತತಿ ಹೆಚ್ಚುವಂತೆ ಮಾಡಬೇಕಿದೆ. ಆದ್ದರಿಂದ ಇಲ್ಲಿಗೆ ಮೀನುಗಳನ್ನು ತಂದು ಸುರಿಯಲಾಗುತ್ತದೆ. ಮೀನಿಗಳನ್ನು ಅವುಗಳ ಪಾಡಿಗೆ ಬಿಡದೆ, ಒತ್ತಾಯ ಪೂರ್ವಕವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ತಂದು ಸುರಿಯವುದು ತಪ್ಪು ಎಂದು ಕೆಲ ಜೀವವಿಜ್ಞಾನಿಗಳು ದೂರುತ್ತಿದ್ದಾರೆ.

ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು

Viral video: Thousands of Fish Are Dropped From a Plane into a Utah Lake, America

ಆದರೆ ಪುಟ್ಟ ಪುಟ್ಟ ಗಾತ್ರದ ಈ ಮೀನುಗಳು ಯಾವ ಪ್ರದೇಶದ ನೀರಿನಲ್ಲಿ ಬೇಕಾದರೂ ಹೊಂದಿಕೊಂದು ಬದುಕುವುದರಿಂದ ಇದಕ್ಕೆ ಯಾವುದೇ ಅಪಾಯವೂ ಆಗುವುದಿಲ್ಲ ಎಂಬುದು ಉಟಾಹ್ ದ ವನ್ಯಜೀವಿ ಸಂಪನ್ಮೂಲ ವಿಭಾಗದ ಸಮಜಾಯಿಷಿ!

English summary
The US state of Utah is well-known for excellent trout fishing in high mountain lakes. But keeping these remote tourism spot alive Utah wildlife resources division pouring fishes to the lake from flight oftenly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X