ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿಗಳ ಪ್ರಾಣ ಉಳಿಸಲು 'ಓಂ'ಕಾರ ಪಠಿಸಿದ ಸ್ಪೇನ್ ವೈದ್ಯರು!

|
Google Oneindia Kannada News

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಲ್ಲಿಯವರೆಗೂ ವಿಶ್ವದಾದ್ಯಂತ 37,816 ಮಂದಿ ಸಾವಿಗೀಡಾಗಿದ್ದಾರೆ. 7,85,797 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು ಅಮೇರಿಕಾ, ಇಟಲಿ ಮತ್ತು ಸ್ಪೇನ್ ನಲ್ಲಿ ಮರಣ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ.

Recommended Video

UNICEF had clarified People can eat ice creams | viral whatsapp message is fake | WHO

ಕೋವಿಡ್-19 ನಿಂದಾಗಿ ಇಟಲಿಯಲ್ಲಿ 11,591 ಮಂದಿ ಮೃತಪಟ್ಟಿದ್ದು, ಸ್ಪೇನ್ ನಲ್ಲಿ 7,716 ಮಂದಿ ಜೀವ ಕಳೆದುಕೊಂಡಿದ್ದಾರೆ. ಅ ಮೂಲಕ ಕೊರೊನಾ ವೈರಸ್ ನಿಂದ ಅತಿ ಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನಕ್ಕೇರಿದೆ.

ಉತ್ತಮ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ ಇದ್ದರೂ, ಸ್ಪೇನ್ ಹೀನಾಯ ಸ್ಥಿತಿ ತಲುಪಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಸ್ಪ್ಯಾನಿಶ್ ವೈದ್ಯರು ದೇವರ ಮೊರೆ ಹೋಗಿದ್ದಾರೆ.

'ವೈದ್ಯೋ ನಾರಾಯಣೋ ಹರಿಃ' ಅಂತಾರೆ. ಇದರ ಅರ್ಥ ವೈದ್ಯನಾದವನು ನಾರಾಯಣ (ದೇವರ) ಸ್ವರೂಪ ಎಂದು. ಆದ್ರೀಗ, ಸ್ಪೇನ್ ನಲ್ಲಿನ ಸ್ಥಿತಿ ಕೈಮೀರುತ್ತಿದ್ದು, ವೈದ್ಯರೇ ಭಗವಂತನನ್ನು ಪಾರ್ಥಿಸುತ್ತಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಸಾಗಿಸಲು ಸೇನೆಗೆ ಹೇಳಿದ ಸ್ಪೇನ್!ಕೊರೊನಾದಿಂದ ಮೃತಪಟ್ಟವರ ಸಾಗಿಸಲು ಸೇನೆಗೆ ಹೇಳಿದ ಸ್ಪೇನ್!

ರೋಗಿಗಳ ಪ್ರಾಣ ಉಳಿಸಲು ಸ್ಪೇನ್ ನ ವೈದ್ಯರು ಭಾರತೀಯ ಪವಿತ್ರ ಬೀಜಾಕ್ಷರ ಮಂತ್ರ 'ಓಂ'ಕಾರ ಪಠಿಸಿ, ಜೀವ ಸಂಕುಲ ಉಳಿಸಲು ದೇವರಲ್ಲಿ ಬೇಡಿಕೊಂಡಿದ್ದಾರೆ. ಇದು ದೈವೀಶಕ್ತಿಯ ವಿಶ್ವಾಸತೆಗೊಂದು ನಿದರ್ಶನವಾಗಿ ಕಾಣಿಸಿಕೊಂಡಿದೆ.

ಹೀಗೆ ಸ್ಪೇನ್ ನ ಡಾಕ್ಟರ್ ಗಳು ಮಾಡಿದ್ದಾರೆ ಎನ್ನಲಾದ 'ಓಂ'ಕಾರ ಪಠಣದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರತೀಯರನ್ನು ಬೆರಗುಗೊಳಿಸಿದೆ.

ವೈರಲ್ ಆದ ವಿಡಿಯೋ!

''ಸ್ಪೇನ್ ಆಸ್ಪತ್ರೆಯಲ್ಲಿ ವೈದ್ಯರು 'ಓಂ'ಕಾರ ಪಠಣ ಮಾಡಿದ್ದಾರೆ. ಕೋವಿಡ್-19 ರೋಗಿಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಲು ಸ್ಪ್ಯಾನಿಶ್ ವೈದ್ಯರು 'ಓಂ'ಕಾರ ಜಪಿಸಿದ್ದಾರೆ'' ಎಂದು ಸಾರುವ ವಿಡಿಯೋ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿವೆ.

ಭಾರತೀಯರಿಗೆ ಹೆಮ್ಮೆ

ಭಾರತೀಯರಿಗೆ ಹೆಮ್ಮೆ

''ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸ್ಪ್ಯಾನಿಶ್ ವೈದ್ಯರು 'ಓಂ' ಉಚ್ಛಾರಣೆ ಮಾಡಿದ್ದಾರೆ'' ಎಂದು ಹೆಮ್ಮೆಯಿಂದ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸ್ಪೇನ್ ಜನರ ಒತ್ತಡ ನಿವಾರಿಸಲು ಬೀದಿಯಲ್ಲಿ ಡ್ಯಾನ್ಸ್ ಮಾಡಿದ ಪೊಲೀಸರುಸ್ಪೇನ್ ಜನರ ಒತ್ತಡ ನಿವಾರಿಸಲು ಬೀದಿಯಲ್ಲಿ ಡ್ಯಾನ್ಸ್ ಮಾಡಿದ ಪೊಲೀಸರು

ವಿಡಿಯೋದ ಅಸಲಿತ್ತು.?

ವಿಡಿಯೋದ ಅಸಲಿತ್ತು.?

ಅಸಲಿಗೆ, ಈ ವಿಡಿಯೋ ಸೆರೆಹಿಡಿದಿರುವುದು ಎಲ್ಲಿ.? ಸ್ಪೇನ್ ಆಸ್ಪತ್ರೆಯಲ್ಲೇ ಈ ವಿಡಿಯೋ ಸೆರೆ ಹಿಡಿಯಲಾಗಿದ್ಯಾ.? ಅಥವಾ ಬೇರೆ ದೇಶದ್ದಾ.? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ. ಯಾಕಂದ್ರೆ, ಇದು ಸ್ಪೇನ್ ದೇಶದ ವಿಡಿಯೋ ಎಂದು ಖಚಿತ ಪಡಿಸಿಕೊಳ್ಳಲು ವಿಡಿಯೋದಲ್ಲಿ ಯಾವುದೇ ಪುರಾವೆ ಇಲ್ಲ. ಇನ್ನು ಆಡಿಯೋ ಎಡಿಟ್ ಆಗಿರುವ ಸಾಧ್ಯತೆಯೂ ಇದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶಿಸುತ್ತಿದ್ದಾರೆ.

'ಓಂ' ಮಹತ್ವ

'ಓಂ' ಮಹತ್ವ

ಹಿಂದೂ, ಸಿಖ್, ಜೈನ, ಬೌದ್ಧ ಧರ್ಮಗಳಲ್ಲಿ 'ಓಂ'ಕಾರವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಮಹತ್ವ ಮಾತ್ರ ಅಲ್ಲ 'ಓಂ' ಶಾರೀರಿಕ ಮಹತ್ವವನ್ನೂ ಹೊಂದಿದೆ. 'ಓಂ' ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಜೊತೆಗೆ 'ಓಂ' ಉಚ್ಛಾರಣೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ ರಕ್ತ ಸಂಚಾರ ಸುಗಮವಾಗುತ್ತದೆ, ಶ್ವಾಸಕೋಶದ ತೊಂದರೆಯೂ ಕಮ್ಮಿ ಆಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.

ವಿದೇಶಗಳಲ್ಲಿ ಹಿಂದೂ ಧರ್ಮ ಪ್ರಭಾವ

ವಿದೇಶಗಳಲ್ಲಿ ಹಿಂದೂ ಧರ್ಮ ಪ್ರಭಾವ

ಧಾರ್ಮಿಕ ನೆಲೆಗಟ್ಟಿನ ಸಾಮುದಾಯಿಕ ಆಚರಣೆಗಳ ಸಲುವಾಗಿ ವಿದೇಶಗಳಲ್ಲೂ ಹಿಂದೂ ಸಂಸ್ಕೃತಿ ಜನಮನ್ನಣೆ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಭಾವಿತರಾಗಿ ಸ್ಪೇನ್ ವೈದ್ಯರು 'ಓಂ'ಕಾರ ಮಂತ್ರ ಜಪ ಮಾಡಿರಬಹುದು. ಹೀಗೆ ಮಾಡಿದ್ದೇ ಆದಲ್ಲಿ, ಅದು ಭಾರತೀಯರ ಧರ್ಮ ಸಂಸ್ಕೃತಿಗೆ ಗೌರವದ ವಿಚಾರ. ಜೊತೆಗೆ ಕೆಲಸದ ಒತ್ತಡದಿಂದ, ಸಾಲು ಸಾಲು ಸಾವಿನಿಂದ ಕಂಗೆಟ್ಟಿರುವ ಕಾರಣ ವೈದ್ಯರುಗಳು ಅನಿವಾರ್ಯವಾಗಿ ಒತ್ತಡದಿಂದ ಹೊರಬರಬೇಕಾಗಿದೆ. ಹೀಗಾಗಿ, 'ಓಂ'ಕಾರ ಸೇರಿದಂತೆ ಅವರವರ ಧರ್ಮಾನುಸಾರ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

English summary
Viral Video: Spain Doctors chanting OM To fight against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X