ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಸ್ಫೋಟ: ಸುತ್ತಾಡುತ್ತಿದ್ದ ಶಂಕಿತ ಉಗ್ರನ ವಿಡಿಯೋ ವೈರಲ್

|
Google Oneindia Kannada News

ಕೋಲಂಬೋ, ಏಪ್ರಿಲ್ 23: ಶ್ರೀಲಂಕಾದಲ್ಲಿ ಚರ್ಚ್, ಹೊಟೇಲ್ ಸೇರಿದಂತೆ ಎಂಟು ಕಡೆ ನಡೆದ ಉಗ್ರದಾಳಿಯನ್ನು ತಾನೇ ಮಾಡಿದ್ದಾಗಿ ಈಗಾಗಲೇ ಐಸಿಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ದಾಳಿಗೂ ಮುನ್ನ ಶಂಕಿತ ಉಗ್ರ ರಾಜಾರೋಷವಾಗಿ ಚರ್ಚ್ ಬಳಿ ಸುತ್ತಾಡಿಕೊಂಡಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ರೈಸ್ಟ್ ಚರ್ಚ್ ನ ಮಸೀದಿ ದಾಳಿಯ ಪ್ರತೀಕಾರವೇ ಶ್ರೀಲಂಕಾದ ಚರ್ಚ್ ದಾಳಿಕ್ರೈಸ್ಟ್ ಚರ್ಚ್ ನ ಮಸೀದಿ ದಾಳಿಯ ಪ್ರತೀಕಾರವೇ ಶ್ರೀಲಂಕಾದ ಚರ್ಚ್ ದಾಳಿ

ಬ್ಯಾಕ್ ಪ್ಯಾಕ್ ಹಾಕಿಕೊಂಡಿರುವ ಶಂಕಿತ ಉಗ್ರ ಚರ್ಚ್ ನ ಹೊರಗಡೆ, ಮತ್ತು ಒಳಗಡೆ ಸುಮ್ಮನೇ ಓಡಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಏಪ್ರಿಲ್ 21 ಭಾನುವಾರದಂದು ಶ್ರೀಲಂಕಾದಲ್ಲಿ ಒಟ್ಟು ಏಳು ಕಡೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಈಗಾಗಲೇ 300 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರೆ, ಸಾವಿರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಎಂತು ಜನ ಭಾರತೀಯರೂ ಇದ್ದರು.

Viral Video of suspected suicide bomber

ಲಂಕಾ ಸ್ಫೋಟ: 9ರಲ್ಲಿ ಒಬ್ಬರ ಮೃತದೇಹ ಇಂದು ಬೆಂಗಳೂರಿಗೆ ತರುವ ಸಾಧ್ಯತೆ ಲಂಕಾ ಸ್ಫೋಟ: 9ರಲ್ಲಿ ಒಬ್ಬರ ಮೃತದೇಹ ಇಂದು ಬೆಂಗಳೂರಿಗೆ ತರುವ ಸಾಧ್ಯತೆ

ಇದುವರೆಗೂ ಯಾವ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಇದೀಗ ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ(ಐಸಿಸ್) ಈ ದಾಳಿಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದೆ.

English summary
CCTV footage of suspected suicide bomber, carrying a backpack walking into St Sebastian church on Easter Sunday becomes viral oon social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X