ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್ ಭೀಕರ ಭೂಕಂಪಕ್ಕೆ ಮೂಕ ಸಾಕ್ಷಿಯಾಗಿ ವಾಲಿದ ದೈತ್ಯಕಟ್ಟಡ!

|
Google Oneindia Kannada News

Recommended Video

ತೈವಾನ್ ಭೂಕಂಪದ ರುದ್ರನರ್ತನಕ್ಕೆ ನಲುಗಿಹೋದ ಜನರು | Oneindia Kannada

ಹುಯಾಲಿನ್, ಫೆಬ್ರವರಿ 08: ಆಗಲೋ, ಈಗಲೋ ಬಿದ್ದೀತೇನೋ ಅನ್ನಿಸುವ ಇದು ಪೀಸಾದ ವಾಲುಗೋಪರದಂಥದಲ್ಲ! ತೈವಾನ್ ನಲ್ಲಿ ಸಂಭವಿಸುತ್ತಿರುವ ಭೂಕಂಪದ ರೌದ್ರತೆಗೆ ಸಾಕ್ಷಿಯಾಗಿ ನಿಂತ ಕಟ್ಟಡ!

ಫೆ. 06 ರಂದು ಸಂಭವಿಸಿದ 6.4 ತೀವ್ರತೆಯ ಭೀಕರ ಭೂಕಂಪಕ್ಕೆ 7 ಜನ ಬಲಿಯಾಗಿದ್ದರೆ, ಈ ಭೂಕಂಪ ಫೆ.07 ರಂದು ಮರುಕಳಿಸಿದ ಪರಿಣಾಮ ಮತ್ತೆರಡು ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ 9 ಕ್ಕೇರಿದೆ. ಬಾರಿ ಭೂಕಂಪದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.7 ದಾಖಲಾಗಿತ್ತು. ಇದುವರೆಗೂ 70 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, 250 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ ವಿಡಿಯೋ, ಚಿತ್ರಗಳಲ್ಲಿ ನೋಡಿ 'ಓಖಿ' ಚಂಡಮಾರುತದ ಅವಾಂತರ

ತೈವಾನ್ ನ ಹುಯಾಲಿನ್ ನಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡದ ಗ್ರೌಂಡ್ ಫ್ಲೋರ್ ಒಂದರ ಭಾಗ ಉದುರಿಬಿದ್ದಿದ್ದು, ಕಟ್ಟಡ ಮಾತ್ರ ಪವಾಡ ಸದೃಶವಾಗಿ ಬೀಳದೆ ನಿಂತಿದೆ! ಒಂದು ಕಡೆ ವಾಲಿ ನಿಂತಿರುವ ಈ ಕಟ್ಟಡ ತೈವಾನ್ ಭೂಕಂಪದ ಭೀಕರತೆಗೆ ಮೂಕ ಸಾಕ್ಷಿಯಾಗಿ ನಿಂತಿದೆ. ಆತಂಕ ಸೃಷ್ಟಿಸುವ ಈ ಕಟ್ಟಡದ ಕೆಲವು ಚಿತ್ರ ಮತ್ತು ವಿಡಿಯೋ ನಿಮಗಾಗಿ ಇಲ್ಲಿವೆ!

ಧರೆಗುಳುತ್ತಿರುವ ಗಗನಚುಂಬಿ ಕಟ್ಟಡ

ಧರೆಗುಳುತ್ತಿರುವ ಗಗನಚುಂಬಿ ಕಟ್ಟಡ

ಇನ್ನೇನು ಕೆಲವೇ ಕ್ಷಣಗಳಲ್ಲಿ ಧರೆಗುರುಳುವಂತೇ ಕಾಣುತ್ತಿರುವ ಈ ಕಟ್ಟಡದ ಗ್ರೌಂಡ್ ಫ್ಲೋರ್ ಕುಸಿದು, ಪವಾಡ ಸದೃಶವಾಗಿ ಈಗಲೂ ಹಾಗೆಯೇ ನಿಂತಿದೆ. ಈ ಕಟ್ಟಡದ ನಾಲ್ಕು ಮೂಲೆಗಳಲ್ಲಿ ಮಣ್ಣುಗಳನ್ನು ಬಿಡಿಸಿ, ಯಾವುದೋ ನಿರ್ಮಾಣ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರಿಂದ ಭೂಕಂಪದ ತೀವ್ರತೆ ತಾಳಲಾರದೆ ಗ್ರೌಂಡ್ ಫ್ಲೋರ್ ಕುಸಿದಿದೆ. ಈಗಾಗಲೇ ಕ್ರೇನ್ ಗಳು ಮತ್ತು ಉದ್ದದ ಏಣಿಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಟ್ಟಡದಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತವಾಗಿ ಆಚೆ ತರಲಾಗಿದೆ.

ವೈರಲ್ ವಿಡಿಯೋ: ಕ್ಯಾಲಿಫೋರ್ನಿಯಾವನ್ನು ನರಕವಾಗಿಸಿದ ಭೂಕುಸಿತ! ವೈರಲ್ ವಿಡಿಯೋ: ಕ್ಯಾಲಿಫೋರ್ನಿಯಾವನ್ನು ನರಕವಾಗಿಸಿದ ಭೂಕುಸಿತ!

ವಾಲಿದ ಕಟ್ಟಡ ವಿಡಿಯೋದಲ್ಲಿ...

ಭೂಕಂಪದಿಂದ ವಾಲಿದ 12 ಅಂತಸ್ತಿನ ಕಟ್ಟಡದ ವಿಡಿಯೋವನ್ನು ದಿವೆದರ್ ನೆಟ್ ವರ್ಕ್ ಟ್ವೀಟ್ ಮಾಡಿದ್ದು, ದೈತ್ಯ ಕಟ್ಟಡವೊಂದು ಕೆಲವೇ ಕ್ಷಣಗಳಲ್ಲಿ ಬೀಳುತ್ತದೇನೋ ಎನ್ನಿಸುವಂಥ ಈ ದೃಶ್ಯ ಭಯಾನಕವಾಗಿದೆ.

Array

ರಕ್ಷಣಾ ಕಾರ್ಯ

ತೈವಾನ್ ಅನ್ನು ನಡುಗಿಸಿದ ಭೀಕರ ಭೂಕಂಪದಿಂದ ಆತಂಕಗೊಂಡಿರುವ ಜನರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ರಕ್ಷಣಾ ತಂಡ ಊಟ ನಿದ್ದೆ ಬಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಹಲವು ಅಪಾರ್ಟ್ಮೆಂಟ್ ಗಳು ಕುಸಿದಿರುವುದರಿಂದ ಕಟ್ಟಡದ ಕೆಳಗೆ ಹಲವರು ಸಿಕ್ಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ಬೆಂಕಿ ಆರಿಸುವ ಕಾರ್ಯ

ಬೆಂಕಿ ಆರಿಸುವ ಕಾರ್ಯ

ವಾಲಿದ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಆರಿಸುವಲ್ಲಿ ನಿರತರಾದ ಅಗ್ನಿಶಾಮಕ ದಳದ ಸಿಬ್ಬಂದಿ. ಈಗಾಗಲೇ ಈ ಕಟ್ಟಡದಿಂದ ನೂರಾರು ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

English summary
9 people were killed and more than 70 people missing, more than 250 were injured after a 6.4 magnitude earthquake struck Hualien in Taiwan's east coast late on Feb 6th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X