ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮುಲಾ ಒನ್ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ

|
Google Oneindia Kannada News

ಲಂಡನ್, ಜೂನ್ 1: ಹಣ ವಂಚನೆ ಪ್ರಕರಣದಲ್ಲಿ ಕಾನೂನಾತ್ಮಕ ಸಂಕಷ್ಟಗಳನ್ನು ಎದುರಿಸುತ್ತಿರುವ ವಿಜಯ್ ಮಲ್ಯ, ಫಾರ್ಮುಲಾ ಒನ್ ಮೋಟಾರ್‌ಸ್ಪೋರ್ಟ್ ಕಂಪೆನಿ ಫೋರ್ಸ್ ಇಂಡಿಯಾದ ನಿರ್ದೇಶಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಮಾರು 9 ಸಾವಿರ ಕೋಟಿ ಹಣ ವಂಚನೆ ಆರೋಪದಲ್ಲಿ ಬ್ರಿಟನ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದಾರೆ.

ಮದ್ಯ ದೊರೆ ವಿಜಯ್ ಮಲ್ಯ ಇನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ'ಮದ್ಯ ದೊರೆ ವಿಜಯ್ ಮಲ್ಯ ಇನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ'

ಅವರು ಮೇ 24ರಂದು ಸಹಾರ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ಟೀಮ್ ಲಿಮಿಟೆಡ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಕಂಪೆನಿಯು ಇಂಗ್ಲೆಂಡ್‌ನ ಈಸ್‌ ಮಿಡ್ಲ್‌ಲ್ಯಾಂಡ್ಸ್‌ನ ಸಿಲ್ವರ್‌ ಸ್ಟೋನ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ.

vijay mallya

ಸಹಾರ ಇಂಡಿಯಾ ಪರಿವಾರದ ಮುಖ್ಯಸ್ಥ ಸುಬ್ರತಾ ರಾಯ್ ಅವರು ಕಂಪೆನಿಯ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಫೋರ್ಸ್ ಇಂಡಿಯಾ ನಿರಾಕರಿಸಿದೆ.

ವಿಜಯ್ ಮಲ್ಯ ಅವರು ಟೀಮ್ ಪ್ರಿನ್ಸಿಪಾಲ್ ಪಾತ್ರದಲ್ಲಿ ಮುಂದುವರಿಯಲಿದ್ದು, ತಮ್ಮ ಮಗ ಸಿದ್ಧಾರ್ಥ ಮಲ್ಯ ಅವರನ್ನು ನಿರ್ದೇಶಕನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಮಲ್ಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ವಿವಾದಿತ ಉದ್ಯಮಿ ಮಲ್ಯ ಕುರಿತು ಬರಲಿದೆ ಸಿನಿಮಾ: ನಿರ್ಮಾಪಕರೂ ವಿವಾದಿತರೇ!ವಿವಾದಿತ ಉದ್ಯಮಿ ಮಲ್ಯ ಕುರಿತು ಬರಲಿದೆ ಸಿನಿಮಾ: ನಿರ್ಮಾಪಕರೂ ವಿವಾದಿತರೇ!

ಕಾನೂನು ಹೋರಾಟದ ಸವಾಲುಗಳು ಇರುವುದರಿಂದ ಕಂಪೆನಿ ಮೇಲೆ ದುಷ್ಪರಿಣಾಮ ಬೀರಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

English summary
Liquor Tycoon Vijay Mallya has resigned as director of his formula one motorsport company force india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X